ಕೋಲಾರ: ಪದವಿ ಎಂಬುದು ಅಡಿಪಾಯ ಅಷ್ಟೆ, ಅಲ್ಲಿಗೇ ಶಿಕ್ಷಣ ಅಂತ್ಯವಾಗಬಾರದು. ಪದವಿ ನಂತರ ಏನಾದರೂ ಆವಿಷ್ಕರಿಸುವ, ಸಂಶೋಧನೆ ಮಾಡುವ ಗುರಿ ಹೊಂದಿರಬೇಕು. ಈ ಬಗ್ಗೆ ವಿದ್ಯಾರ್ಥಿಗಳು ಪ್ರತಿಜ್ಞೆ ಮಾಡಬೇಕು ಎಂದು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ನಿವೃತ್ತ ಪ್ರಾಧ್ಯಾಪಕ ಕೆ.ಪಿ.ಜೆ.ರೆಡ್ಡಿ ತಿಳಿಸಿದರು.

ನಗರ ಹೊರವಲಯದ ಟಮಕದಲ್ಲಿರುವ ಆರ್.ಎಲ್.ಜಾಲಪ್ಪ ರಜತ ಮಹೋತ್ಸವ ಸಭಾಂಗಣದಲ್ಲಿ ಸೋಮವಾರ ನಡೆದ ಶ್ರೀ ದೇವರಾಜ ಅರಸು ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ 16ನೇ ವಾರ್ಷಿಕ ಘಟಿಕೋತ್ಸವದಲ್ಲಿ ಅವರು ಮಾತನಾಡಿದರು.

ನಾವು ಏನೂ ಆವಿಷ್ಕಾರ ಮಾಡದಿದ್ದರೆ ವಿದೇಶಗಳಲ್ಲಿ ಅಭಿವೃದ್ಧಿಪಡಿಸುವ ಮೂರನೇ ದರ್ಜೆಯ ಉತ್ಪನ್ನಗಳ ಮೇಲೆ ಅವಲಂಬಿತರಾಗಬೇಕಾಗುತ್ತದೆ. ಹೀಗಾಗಿ, ತಾವೇ ಹೊಸದಾಗಿ ಆವಿಷ್ಕಾರ ಮಾಡಬೇಕು ಎಂದರು.

ಭಾರತ ದೇಶ 2047ಕ್ಕೆ ಸೂಪರ್ ಪವರ್ ಆಗಬೇಕು. ಆ ನಿಟ್ಟಿನಲ್ಲಿ ಗುರಿ ಇಟ್ಟುಕೊಂಡು ನಾವು ಕೆಲಸ ಮಾಡುತ್ತಿದ್ದೇವೆ. ಸ್ವಲ್ಪ ಎಚ್ಚರ ತಪ್ಪಿದರೂ ಚೀನಾ ಸೂಪರ್ ಪವರ್ ಆಗಿಬಿಡುತ್ತದೆ ಎಂದು ಹೇಳಿದರು.

ದೊಡ್ಡ ದೊಡ್ಡ ಹೈಪರ್ಸಾನಿಕ್ ಕ್ಷಿಪಣಿ ಕಂಡುಹಿಡಿಯಬೇಕು. ಅದನ್ನು ಕಂಡುಹಿಡಿದರೆ ಚೀನಾ ಸೇರಿದಂತೆ ಯಾವುದೇ ದೇಶ ನಮ್ಮ ಹತ್ತಿರ ಬರಲು ಸಾಧ್ಯವಿಲ್ಲ ಎಂದರು.

ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನಾನು ಮೂರು ಕಂಪನಿ ಹೊಂದಿದ್ದೇನೆ. ‘ಯಕೃತ’ ಎಂಬ ಕಂಪನಿ ಮೂಲಕ ಕೃತಕ ಯಕೃತ್ ಅಭಿವೃದ್ಧಿಪಡಿಸಿದ್ದೇವೆ. ಮತ್ತೊಂದು ಕಂಪನಿ ಇದ್ದು, ಗ್ಯಾಂಗ್ರಿನ್ಗೆ ಚಿಕಿತ್ಸೆ ನೀಡಲಾಗುತ್ತಿದೆ. ಕಾಲನ್ನು ಕತ್ತರಿಸುವ ಅಗತ್ಯವೇ ಇಲ್ಲ ಎಂದು ತಿಳಿಸಿದರು.

ಸಾಫ್ಟ್ವೇರ್ ಉದ್ಯೋಗಿಗಳು ಸತತ 10 ಗಂಟೆಗೂ ಹೆಚ್ಚು ಹೊತ್ತು ಕಂಪ್ಯೂಟರ್ ಮುಂದೆ ಕೂರುತ್ತಿದ್ದಾರೆ. ಯುವ ಜನತೆ ಇಷ್ಟು ಹೊತ್ತು ಕೆಲಸ ಮಾಡಿದರೂ ನಾರಾಯಣಮೂರ್ತಿ ಅವರಂಥವರಿಗೆ ಸಮಾಧಾನ ಇಲ್ಲ. ಅವರಿಗೆ ಎಲ್ಲಿಂದ ಇಂಥ ಆಲೋಚನೆ ಬರುತ್ತದೆಯೋ ಗೊತ್ತಿಲ್ಲ. ಮನುಷ್ಯರನ್ನು ಈ ರೀತಿ ಬಳಸಿಕೊಳ್ಳಬಾರದೆಂಬ ವಿಚಾರವನ್ನೇ ಮರೆತಂತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸತತ 10 ಗಂಟೆ ಕಂಪ್ಯೂಟರ್ ಮುಂದೆ ಕೂರುವುದರಿಂದ ದೇಹದ ಕೆಳ ಭಾಗಕ್ಕೆ ರಕ್ತ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತದೆ. ಇದರಿಂದ ಷಂಡತನ ಉಂಟಾಗುತ್ತಿದೆ. ಇದರಿಂದ ವಿಚ್ಚೇದನ ಪ್ರಕರಣ ಹೆಚ್ಚುತ್ತಿವೆ. ಈ ಸಂಬಂಧಿಸಿದಂತೆ ಯಂತ್ರ ಅಭಿವೃದ್ಧಿಪಡಿಸಿದ್ದು, ಷಂಡತನ ಗುಣಪಡಿಸಬಹುದಾಗಿದೆ ಎಂದು ಹೇಳಿದರು.

ಸಂಸ್ಥೆಯ ಕುಲಪತಿ ಡಾ.ಬಿ.ವೆಂಗಮ್ಮ ವಾರ್ಷಿಕ ವರದಿ ವಾಚಿಸಿ, 'ನಮ್ಮಲ್ಲಿ 200 ಎಂಬಿಬಿಎಸ್ ಸೀಟುಗಳಿವೆ. 250ಕ್ಕೆ ಹೆಚ್ಚಿಸಲು ಕೋರಿದ್ದೇವೆ. ವೈದ್ಯಕೀಯ ವಿಶ್ವವಿದ್ಯಾಲಯಗಳ ರ್ಯಾಂಕಿಂಗ್ನಲ್ಲಿ ನಾವು 12ನೇ ಸ್ಥಾನದಲ್ಲಿದ್ದೇವೆ. ಜಾಲಪ್ಪ ಆಸ್ಪತ್ರೆ ಕೂಡ ಗುಣಮಟ್ಟದ ಆರೋಗ್ಯ ಸೇವೆ ನೀಡುತ್ತಿದೆ' ಎಂದರು.

ಅಧ್ಯಕ್ಷತೆ ವಹಿಸಿದ್ದ ಶ್ರೀ ದೇವರಾಜ ಅರಸು ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ಸಂಸ್ಥೆಯ ಕುಲಾಧಿಪತಿ ಜಿ.ಎಚ್.ನಾಗರಾಜ ಪದವಿ ಪ್ರದಾನ ಮಾಡಿದರು.

ಶ್ರೀ ದೇವರಾಜ ಅರಸು ಎಜುಕೇಷನಲ್ ಟ್ರಸ್ಟ್ ಉಪಾಧ್ಯಕ್ಷ ಜೆ.ರಾಜೇಂದ್ರ, ಕಾರ್ಯದರ್ಶಿ ಕೆ.ಜಿ.ಹನುಮಂತರಾಜು, ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಡಾ.ಡಿ.ವಿ.ಎಲ್.ಎನ್.ಪ್ರಸಾದ್, ಸಂಸ್ಥೆ ಕುಲಸಚಿವ ಡಾ.ಮುನಿನಾರಾಯಣ ಸಿ., ಸಂಸ್ಥೆ ಪರೀಕ್ಷಾ ನಿಯಂತ್ರಣಾಧಿಕಾರಿ ಡಾ.ಶಶಿಧರ್ ಕೆ., ಡೀನ್ ಫ್ಯಾಕಲ್ಟಿ ಆಫ್ ಮೆಡಿಸನ್ ಹಾಗೂ ಪ್ರಾಂಶುಪಾಲ ಡಾ.ಪ್ರಭಾಕರ್ ಕೆ. ಹಾಗೂ ಕಾರ್ಯಕಾರಿ ಮಂಡಳಿ ಸದಸ್ಯರು, ಟ್ರಸ್ಟಿಗಳು, ಅಧ್ಯಾಪಕರು, ಸಿಬ್ಬಂದಿ, ಪೋಷಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260519-18-317603631

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.