ಮುಳಬಾಗಿಲು: ತಾಲ್ಲೂಕಿನ ಮರವೇಮನೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರು ವಿದ್ಯಾರ್ಥಿಗಳ ಮೇಲೆ ಪುಷ್ಪ ಮಳೆ ಸುರಿಸುವ ಮೂಲಕ ವಿದ್ಯಾರ್ಥಿಗಳನ್ನು ಶಾಲೆಗೆ ಸ್ವಾಗತಿಸಿದರು.

ತಾಲ್ಲೂಕಿನಲ್ಲಿ ಮೇ 29ರಂದು ಶಾಲಾ ಸ್ವಚ್ಛತೆ ನಡೆಸಿ, ರಜೆ ಮೋಜಿನಲ್ಲಿದ್ದ ವಿದ್ಯಾರ್ಥಿಗಳನ್ನು ಶಿಕ್ಷಕರು ಅದ್ದೂರಿಯಾಗಿ ಸ್ವಾಗತಿಸಿದರು.

ವಿದ್ಯಾರ್ಥಿಗಳು ಬೆಳಗ್ಗೆ ಶಾಲೆಗೆ ಬರುತ್ತಿದ್ದಂತೆ ಶಿಕ್ಷಕರು ಗುಲಾಬಿ ಹೂ ನೀಡಿ ನಂತರ, ಚೆಂಡು ಹಾಗೂ ಸೇವಂತಿ ಹೂ ದಳಗಳನ್ನು ವಿದ್ಯಾರ್ಥಿಗಳ ಮೇಲೆ ಚೆಲ್ಲುತ್ತಾ ಶಾಲಾ ಕೊಠಡಿ ಒಳಗೆ ಸ್ವಾಗತ ಕೋರಿದರು. ನಂತರ, ಚಾಕ್ಲೇಟ್ ಹಾಗೂ ಲೇಖನಿ ನೀಡಿದರು.

ಮುಖ್ಯ ಶಿಕ್ಷಕ ಎನ್.ಚನ್ನಪ್ಪ ಮಾತನಾಡಿ, ಸುಮಾರು 40 ದಿನಗಳವರೆಗೂ ಬೇಸಿಗೆ ರಜೆ ಕಳೆದಿದ್ದ ವಿದ್ಯಾರ್ಥಿಗಳು ಶಾಲಾ ವಾತಾವರಣವನ್ನೇ ಮರೆತಂತಿತ್ತು. ಹಾಗಾಗಿ ಮಕ್ಕಳಲ್ಲಿ ಹೊಸ ಹುರುಪು ತುಂಬಿ ಕಲಿಕೆಯ ಮೇಲೆ ಆಸಕ್ತಿ ಮೂಡಿಸಲು ವಿಶೇಷವಾಗಿ ಸ್ವಾಗತಿಸಲಾಯಿತು ಎಂದರು.

ಶಕುಂತಲಮ್ಮ, ಪ್ರಭಾಕರ್ ರಾಜು, ಲಾವಣ್ಯ, ಎಸ್ಡಿಎಂಸಿ ಅಧ್ಯಕ್ಷ ನಾಗರಾಜ್, ರಾಮಮೂರ್ತಿ, ಲಕ್ಷ್ಮಿನಾರಾಯಣ, ವೆಂಕಟಪ್ಪ, ಬಾಲರಾಜು, ಮಂಜುನಾಥ, ಮುನಿಸ್ವಾಮಿ ಹಾಗೂ ವಿದ್ಯಾರ್ಥಿಗಳ ಪೋಷಕರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260602-18-1870395039

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.