ಕೋಲಾರ: ಓದುಗ ಕೇಳುಗ-ನಮ್ಮ ನಡೆ ಬಳಗ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಸಿರಿಗನ್ನಡ ಪುಸ್ತಕ ಮಳಿಗೆ ಸಹಯೋಗದಲ್ಲಿ ಓದುಗ ಕೇಳುಗ-ನಮ್ಮ ನಡೆ 60ನೇ ತಿಂಗಳ ಕಾರ್ಯಕ್ರಮ ನಗರದ ಪತ್ರಕರ್ತರ ಭವನದಲ್ಲಿ ಭಾನುವಾರ ನಡೆಯಿತು.

ಜಿ.ಎಸ್.ಜಯದೇವ ಅವರ ‘ಸೋಲಿಗ ಚಿತ್ರಗಳು’ ಕೃತಿ ಕುರಿತು ಸಂವಾದ ಕಾರ್ಯಕ್ರಮವನ್ನು ಈ ಸಂದರ್ಭದಲ್ಲಿ ಹಮ್ಮಿಕೊಳ್ಳಲಾಯಿತು.

ಅಧ್ಯಕ್ಷತೆ ವಹಿಸಿದ್ದ ಲೇಖಕಿ, ಅಧ್ಯಾಪಕಿ ನೇತ್ರಾವತಿ ಪುಸ್ತಕ ಕುರಿತು ಮಾತನಾಡಿ, ‘ಅಭಿವೃದ್ಧಿ ಎಂದರೆ ಆರ್ಥಿಕತೆಯಲ್ಲ ಎಂಬುದು ಸೋಲಿಗರ ಜೀವನ ಶೈಲಿಯಲ್ಲಿ ಕಾಣಬಹುದು. ಆದರೆ ಎಲ್ಲವೂ ಇಂದು ಅಯೋಮಯವಾಗಿದೆ’ ಎಂದರು.

ಸೋಲಿಗರ ಆಧುನಿಕ ಜೀವನ ಜರ್ಜರಿತವಾಗಿದೆ. ಇಡೀ ಜೀವನದ ಕ್ರಮಗಳು ಬದಲಾಗಿವೆ. ಸಾರಾಯಿ, ಹೆಂಡದ ವ್ಯಸನ ಇವರ ಬದುಕನ್ನು ಹಾಳು ಮಾಡುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಆಧುನಿಕತೆಯ ಜೀವನ ಅನಾಹುತಗಳಿಗೆ ಕಾರಣವಾಗಿದೆ. ರಾಗಿ ಸೋಲಿಗರ ಆಹಾರ ಇಂದು ಅಕ್ಕಿಗೆ ಮೊರೆ ಹೋಗಿ ಅನಿಮಿಯಾಗೆ ಒಳಗಾಗುತ್ತಿದ್ದಾರೆ. ಆಧುನಿಕತೆ, ಅಭಿವೃದ್ಧಿ ಹೆಸರಿನಲ್ಲಿ ಸಂಸ್ಕೃತಿ ಕಳೆದುಕೊಳ್ಳುವಂತಾಗಿದೆ. ಸಾಂಸ್ಕೃತಿಕ ಪಲ್ಲಟವಾಗಿದ್ದು, ನಮ್ಮ ಮೂಲ ಸಂಸ್ಕೃತಿಗಳನ್ನು ಮರು ಸ್ಥಾಪಿಸಿಕೊಳ್ಳಬೇಕು ಎಂದು ತಿಳಿಸಿದರು.

ದೀನಬಂಧು ಸಂಸ್ಥೆಯನ್ನು ದಮನಿತರ ಪರವಾಗಿ ಕೆಲಸ ಮಾಡಲು ಆರಂಭಿಸಿದ ಆಶಾಜೀವಿ ಜಿ.ಎಸ್.ಜಯದೇವ. ಇವರ ಸೋಲಿಗ ಚಿತ್ರಗಳು ಕೃತಿ ಆದಿವಾಸಿಗಳ ಜೊತೆಗೆ ಕಳೆಯುತ್ತಿರುವ ಬದುಕಿನ ಸಂಗತಿಗಳನ್ನು ಕಟ್ಟಿ ಕೊಡುತ್ತದೆ. ಸೋಲಿಗರ ಬಗ್ಗೆ, ಕಾಡಿನ ಬಗ್ಗೆ, ಪರಿಸರ ನಾಶದ ಬಗ್ಗೆ ಸರಳವಾದ ಭಾಷೆಯಲ್ಲಿ ಕಟ್ಟಿಕೊಟ್ಟಿದ್ದಾರೆ. ಅನುಭವದ ಜೊತೆಗೆ ಪರಿಸರ, ವಿಜ್ಞಾನ, ವಿಮರ್ಶೆ ಸಹ ಇದೆ. ಕಾಡಿನ ಸೋಲಿಗರ ಬದುಕನ್ನು ಗಮನಿಸಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಅಧ್ಯಯನ, ಸೇವೆ ಮಾಡಲು ಆರಂಭಿಸಿದರು. ಇನ್ನೂ ಅವರ ಕಳಕಳಿ, ಅಧ್ಯಾಯ, ಉತ್ಸಾಹ ಕುಂದಿಲ್ಲ ಎಂದರು.

ವಿಜ್ಞಾನ ಹಾಗೂ ಪರಿಸರ ಲೇಖಕ ಪುರುಷೋತ್ತಮ ರಾವ್ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಆದಿಮ ಸಾಂಸ್ಕೃತಿಕ ಕೇಂದ್ರದ ಕಾರ್ಯದರ್ಶಿ ಹ.ಮಾ.ರಾಮಚಂದ್ರ, ಉಪನ್ಯಾಸಕ ಜೆ.ಜಿ.ನಾಗರಾಜ್, ರೈತ ಮುಖಂಡ ಅಬ್ಬಣಿ ಶಿವಪ್ಪ, ಪತ್ರಕರ್ತ ವಿಶ್ವ ಕುಂದಾಪುರ, ಬ್ಯಾಸ್ಕೆಟ್ಬಾಲ್ ಕೋಚ್ ಅಂಚೆ ಅಶ್ವತ್ಥ್ ಹಾಗೂ ಬಳಗದ ಸದಸ್ಯರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260427-18-1552831245

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.