ಕೊಳ್ಳೇಗಾಲ: ಯುವ ಪೀಳಿಗೆ ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ಆಚರಣೆ ಜೊತೆಗೆ ಅವರ ತತ್ವ ಸಿದ್ಧಾಂತಗಳನ್ನು ಪಾಲಿಸಬೇಕು ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.

ನಗರದ ಬೆಂಗಳೂರು ರಸ್ತೆಯಲ್ಲಿರುವ ಭೀಮನಗರದ ಆದಿ ಕರ್ನಾಟಕ ಜನಾಂಗದ ನಿವೇಶನದಲ್ಲಿ ಮಂಗಳವಾರ ಸಂಜೆ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜಯಂತಿ ಪ್ರಯುಕ್ತ ಭೀಮನಗರದ ಯಜಮಾನರು, ಕುಲಸ್ಥರು ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಸ್ಮಾರಕ ಸಂಘದ ವತಿಯಿಂದ ಆಯೋಜಿಸಿದ್ದ ಭೀಮನಗರದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಅತಿಥಿ ಗಣ್ಯರಿಗೆ ಸನ್ಮಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಪ್ರತಿ ವರ್ಷ ಅಂಬೇಡ್ಕರ್ ಜಯಂತಿಯನ್ನು ಆಚರಿಸುವ ಯುವ ಪೀಳಿಗೆ ಕೇವಲ ಕುಣಿದು ಕುಪ್ಪಳಿಸಿ ಸಂಭ್ರಮಿಸುವುದಕ್ಕೆ ಸಮಯ ಮೀಸಲಿರಿಸದೇ, ಅಂಬೇಡ್ಕರ್ ಕುರಿತು ಸಂಪೂರ್ಣವಾಗಿ ತಿಳಿದುಕೊಳ್ಳಲು ಮುಂದಾಗಬೇಕು. ಅಂಬೇಡ್ಕರ್ ಅವರು ಬೆಳೆದು ಬಂದ ದಾರಿ ಹಾಗೂ ಅವರ ಆಶಯ ಮತ್ತು ಭಾಷಣಗಳನ್ನು ಅನುಸರಿಸಬೇಕು. ತಮ್ಮ ಮಕ್ಕಳನ್ನು ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನಾಗಿ ಮಾಡಬೇಕು. ಸಾಮಾಜಿಕ ಸತ್ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸಬೇಕು ಎಂದರು.

ವೇದಿಕೆ ಮೇಲೆ ಆಸೀನರಾಗಿದ್ದ 2025ನೇ ಸಾಲಿನ ಮುಖ್ಯಮಂತ್ರಿ ಪದಕ ಪುರಸ್ಕೃತರಾದ ಬೆಂಗಳೂರಿನ ಸಿಸಿಬಿ ವಿಭಾಗದ ಎಸಿಪಿ ಎಚ್.ಕೆ.ಮಹಾನಂದ ಹಾಗೂ ಮೈಸೂರು ನಗರದ ಅಶೋಕಪುರಂ ಠಾಣೆಯ ಎಎಸ್ಐ ಎಸ್.ಶಿವಕುಮಾರ್ ಅವರನ್ನು ಶಾಸಕ ಎ.ಆರ್.ಕೆ ಭೀಮನಗರದ ಜನತೆ ಪರವಾಗಿ ಸನ್ಮಾನಿಸಿ ಗೌರವಿಸಿದರು. ಈ ಇಬ್ಬರು ದಕ್ಷ ಪೊಲೀಸ್ ಅಧಿಕಾರಿಗಳ ಕರ್ತವ್ಯ ನಿಷ್ಠೆಯಿಂದ ಕೊಳ್ಳೇಗಾಲ ತಾಲ್ಲೂಕಿನ ಕೀರ್ತಿ ಮತ್ತಷ್ಟು ಹೆಚ್ಚಿದೆ ಎಂದು ಬಣ್ಣಿಸಿದರು.

ಈ ವೇಳೆ ಸನ್ಮಾನ ಸ್ವೀಕರಿಸಿದ ಎಚ್.ಕೆ.ಮಹಾನಂದ ಮಾತನಾಡಿ, ಕೊಳ್ಳೇಗಾಲ ತಾಲ್ಲೂಕು ಹಾಗೂ ಇಡೀ ತಾಲ್ಲೂಕಿನ ಶಕ್ತಿಕೇಂದ್ರವಾದ ಭೀಮನಗರ ಬಡಾವಣೆಗೆ ರಾಜ್ಯದಾದ್ಯಂತ ಅದರದ್ದೇ ಆದ ಹೆಸರಿದೆ. ಈ ಮಣ್ಣಿನಲ್ಲಿ ಜನಿಸಿದ ನಾನು ಎಂದೆಂದಿಗೂ ಊರಿಗೆ ಉತ್ತಮ ಕೀರ್ತಿ ತರುವ ಕಾಯಕದಲ್ಲಿ ತೊಡಗುತ್ತೇನೆ ಎಂದು ಭರವಸೆ ನೀಡಿದರು.

ಎಸ್.ಶಿವಕುಮಾರ್ ಅವರು ಮಾತನಾಡಿ, ಕೊಳ್ಳೇಗಾಲ ಭಾಗದಲ್ಲಿ ಸಾಕಷ್ಟು ಜನರಿಗೆ ಪಾಠ ಹೇಳಿದ ಮೇಷ್ಟ್ರು ಶಂಭುಲಿಂಗಯ್ಯ ನಮ್ಮ ತಂದೆ. ಅವರ ಪುತ್ರನಾದ ನಾನು ಅನ್ಯ ಮಾರ್ಗದಲ್ಲಿ ನಡೆಯಲಾರೆ, ಸಮಾಜ ಸ್ನೇಹಿ ಮತ್ತು ದಕ್ಷ ಪೊಲೀಸ್ ವ್ಯವಸ್ಥೆಯಲ್ಲಿ ಮುಂದೆಯೂ ಸಾಗುತ್ತೇನೆ ಎಂದರು.

ಮುಖಂಡ ಬಾಲರಾಜು, ಆರ್.ನರೇಂದ್ರ, ತೆಳ್ಳನೂರು ಪ್ರದೀಪ್, ಎನ್.ಗಿರೀಶ್ ಬಾಬು, ಎಚ್.ಕೆ.ಟ್ರಸ್ಟ್ ಕಾರ್ಯದರ್ಶಿ ಪ್ರೇಮಲತಾ ಕೃಷ್ಣಸ್ವಾಮಿ, ಸರ್ಕಲ್ ಇನ್ಸ್ಪೆಕ್ಟರ್ ಎಂ.ಶಿವಮಾದಯ್ಯ, ಚಿಕ್ಕಮಾಳಿಗೆ, ಪ್ರಭುಸ್ವಾಮಿ, ಕೆ.ಕೆ.ಮೂರ್ತಿ, ಎಂ.ವರದರಾಜು, ಸಿ.ಸಾವಕಯ್ಯ, ಲಿಂಗರಾಜು, ಸಿದ್ದರಾಜು, ಸುರೇಶ್, ಡಾ.ಬಿ.ಆರ್.ಅಂಬೇಡ್ಕರ್ ಸ್ಮಾರಕ ಸಂಘದ ಅಧ್ಯಕ್ಷ ಆನಂದಮೂರ್ತಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260416-37-686839817

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.