ಕೋಣಂದೂರು: ‘ಭಾರತದಲ್ಲಿ ಹುಟ್ಟಿ ವಿದೇಶಗಳಲ್ಲಿ ಸಮಾಜಮುಖಿ ಕೆಲಸಗಳ ಮೂಲಕ ಹೆಸರು ಮಾಡುತ್ತಿರುವ ಸಂಸ್ಥೆ ಸೀನಿಯರ್ ಛೇಂಬರ್’ ಎಂದು ಸಂಸ್ಥೆಯ ಉಪಾಧ್ಯಕ್ಷ ಕುಮಾರ್ ಕುರ್ಸೆ ಹೇಳಿದರು.

ಇಲ್ಲಿನ ಗ್ರೀನ್ ಹಾರ್ಟ್ ಕೆಫೆಯಲ್ಲಿ ಶುಕ್ರವಾರ ನಡೆದ ಕೋಣಂದೂರು ಸೀನಿಯರ್ ಛೇಂಬರ್ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಸದಸ್ಯರ ಸಂಖ್ಯೆ ಹೆಚ್ಚು ಮಾಡುವ ಮೂಲಕ ಸಮಾಜ ಸೇವೆಯಲ್ಲಿ ಸಾಮೂಹಿಕವಾಗಿ ಕೈಜೋಡಿಸಬೇಕಾದ ಅಗತ್ಯ ಇದೆ. ವೈಯಕ್ತಿಕ ಅಭಿವೃದ್ಧಿಯೊಂದಿಗೆ ಸಮುದಾಯದ ಅಭಿವೃದ್ಧಿಗೆ ಇಂತಹ ಸಂಸ್ಥೆಗಳು ಶ್ರಮಿಸುತ್ತಿವೆ. ತರಬೇತಿ ಕಾರ್ಯಕ್ರಮಗಳ ಮೂಲಕ ನಾಯಕತ್ವ ಗುಣ ಬೆಳೆಸುವ ಸಂಸ್ಥೆಯ ಕಾರ್ಯ ಶ್ಲಾಘನೀಯ. ಕುಡಿಯುವ ನೀರಿನ ಘಟಕ, ಸ್ವಚ್ಛ ಗಂಗಾ ಯೋಜನೆಯಂತಹ ಕಾರ್ಯಕ್ರಮಗಳ ಮೂಲಕ ಸಮಾಜದ ವಿವಿಧ ವರ್ಗಗಳನ್ನು ಸಂಸ್ಥೆ ತಲುಪುತ್ತಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಅನುಭವ, ಜ್ಞಾನದ ಮೂಲಕ ಸಾಮಾಜಿಕ ಕೆಲಸ ಮಾಡುವುದೇ ಸಂಸ್ಥೆಯ ಗುರಿಯಾಗಿದೆ’ ಎಂದು ಸೀನಿಯರ್ ಛೇಂಬರ್ನ ರಾಷ್ಟ್ರೀಯ ಸಂಯೋಜಕ ಎಚ್.ಎನ್.ಸೂರ್ಯನಾರಾಯಣ್ ಹೇಳಿದರು.

ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೊದಲ ರ್ಯಾಂಕ್ ಪಡೆದ ಕೆ.ಎಸ್.ಅನಘ, ಎಂ.ಎಸ್ಸಿ ಯಲ್ಲಿ ಚಿನ್ನದ ಪದಕ ಪಡೆದ ಈ.ಎಂ.ಐಶ್ವರ್ಯ ಅವರನ್ನು ಸನ್ಮಾನಿಸಲಾಯಿತು.

ಸೀನಿಯರ್ ಛೇಂಬರ್ ಕೋಣಂದೂರು ಘಟಕದ ನೂತನ ಅಧ್ಯಕ್ಷ ಆರ್.ಮುರುಗರಾಜ್, ಸಂಸ್ಥೆಯ ರಾಷ್ಟ್ರೀಯ ಸಂಯೋಜಕ ಎಚ್.ಎನ್.ಸೂರ್ಯನಾರಾಯಣ್, ನಿಕಟಪೂರ್ವ ಅಧ್ಯಕ್ಷ ಕೆ.ಎಂ.ಲಕ್ಷ್ಮಣ್, ನೂತನ ಕಾರ್ಯದರ್ಶಿ ಎಂ.ವಿ.ಪೃಥ್ವಿರಾಜ್, ಖಜಾಂಚಿ ಅನಿಲ್ ಹಾಲೇಸರ, ಮಾಜಿ ಕಾರ್ಯದರ್ಶಿ ಕೆ.ಎಲ್.ಮುರುಗಪ್ಪ, ಮಾಜಿ ಖಜಾಂಚಿ ಆರ್.ಎನ್.ಕುಮಾರ, ಡಿ.ಪಿ.ವಿಶ್ವನಾಥ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-42-1891591986

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.