ಕೂಡಲಸಂಗಮ: ಗುಣಮಟ್ಟದ ಶಿಕ್ಷಣ, ಅತ್ಯಾಧುನಿಕ ಸೌಲಭ್ಯಗಳ ಮೂಲಕ ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳನ್ನು ಮೀರಿಸುವಷ್ಟು ಅಭಿವೃದ್ಧಿ ಹೊಂದಿವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಾಸ್ಮೀನ್ ಕಿಲ್ಲೆದಾರ ಹೇಳಿದರು.

ಕೂಡಲಸಂಗಮ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ, ಶಾಲಾ ದಾಖಲಾತಿ ಆಂದೋಲನಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದ ಅವರು, ‘ಶಿಕ್ಷಕರ ನಿರಂತರ ಪರಿಶ್ರಮದ ಫಲವಾಗಿ ಸರ್ಕಾರಿ ಪ್ರೌಢಶಾಲೆಯ ದಾಖಲಾತಿ ವರ್ಷದಿಂದ ವರ್ಷಕ್ಕೆ ಅಧಿಕಗೊಂಡು ಇಂದು ಕರ್ನಾಟಕ ಪಬ್ಲಿಕ್ ಶಾಲೆಯಾಗಿ ಮಾರ್ಪಟ್ಟಿದೆ. ಕಳೆದ ವರ್ಷ ಈ ಶಾಲೆಯಲ್ಲಿ 609 ವಿದ್ಯಾರ್ಥಿಗಳು ದಾಖಲಾಗಿದ್ದರು. ಶಾಲಾ ಆರಂಭದ ದಿನವೇ 100 ವಿದ್ಯಾರ್ಥಿಗಳು ಪ್ರವೇಶ ಪಡೆದಿರುವುದು ಗುಣಮಟ್ಟಕ್ಕೆ ಹಿಡಿದ ಕನ್ನಡಿ’ ಎಂದು ಹೇಳಿದರು.

‘ಈ ವರ್ಷ ಎಲ್ಕೆಜಿ, ಯುಕೆಜಿ ಆರಂಭ ಮಾಡಲಾಡಿದೆ. ಮುಂದಿನ ವರ್ಷ ಉಳಿದ ತರಗತಿಗಳು ಆಂಗ್ಲ, ಕನ್ನಡ ಮಾಧ್ಯಮಗಳಲ್ಲಿ ಆರಂಭವಾಗಲಿವೆ. ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆಯಬೇಕು. ಉತ್ತಮ ಶಿಕ್ಷಕರು ಸರ್ಕಾರಿ ಶಾಲೆಯಲ್ಲಿ ಇದ್ದಾರೆ, ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಿಸಬೇಕು’ ಎಂದರು.

ಸಮಾರಂಭದಲ್ಲಿ ಎಸ್ಡಿಎಂಸಿ ಅಧ್ಯಕ್ಷ ಮುತ್ತಣ್ಣ ಕುರಿ ಮಾತನಾಡಿ, ‘ಸರ್ಕಾರ ನಮ್ಮ ಪ್ರೌಢಶಾಲೆಯನ್ನು ಕರ್ನಾಟಕ ಪಬ್ಲಿಕ್ ಶಾಲೆಯಾಗಿ ಪರಿವರ್ತಿಸಿದ್ದು, ಇದರ ಸದುಪಯೋಗವನ್ನು ಪಾಲಕರು ಪಡೆಯಬೇಕು’ ಎಂದರು.

ಮುಖ್ಯ ಶಿಕ್ಷಕಿ ಎಸ್.ಬಿ.ಈಟಿ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಸಮನ್ವಯಾಧಿಕಾರಿ ಸದಾಶಿವ ಗುಡಗುಂಟಿ, ಬಿಆರ್ಪಿ ವಿನೋದಕುಮಾರ ಭೋವಿ, ಶಿಕ್ಷಣ ಸಂಯೋಜಕ ಎಂ.ಎಚ್. ಮೂಲಿಮನಿ, ಸಿಆರ್ಪಿ ಜಿ.ಎಚ್. ಗೌಡರ, ಮುಖಂಡರಾದ ಪ್ರಭು ಹಿರೇಮಠ, ಶೇಖರಗೌಡ ಗೌಡರ, ಲಕ್ಷ್ಮೀಕಾಂತ ಮೇಲಿನಮನಿ, ಮುತ್ತಪ್ಪ ಭಜಂತ್ರಿ, ಸಂಗಣ್ಣ ಬಾಗೇವಾಡಿ, ಕರಸಂಗಯ್ಯ ಖಾತೇದಾರ, ಎಸ್ಡಿಎಂಸಿ ಸದಸ್ಯರು ಇದ್ದರು.

ಆರ್.ಎ.ತಂಬಾಕ ಪ್ರಾರ್ಥಿಸಿದರು, ಡಿ.ಬಿ.ನದಾಫ ಸ್ವಾಗತಿಸಿದರು. ಎಸ್.ಎಲ್. ಪಾಟೀಲ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಸಮಾರಂಭದಲ್ಲಿ ನಿವೃತ್ತಿ ಹೊಂದಿದ ಹಿಂದಿ ಭಾಷಾ ಶಿಕ್ಷಕ ಎಸ್.ಎಸ್. ಕಟ್ಟಿಮನಿ, ವರ್ಗಾವಣೆಗೊಂಡು ಬಂದ ವಿಜ್ಞಾನಿ ಶಿಕ್ಷಕಿ ಎಂ.ಎಸ್.ಕೋಟಿ, ಸಂಗೀತ ಶಿಕ್ಷಕ ಬಸವರಾಜ ಗುಡಿಮನಿ,

ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ನಾಗರಾಜ ಕುಂಬಾರ, ಅರ್ಪಿತಾ ಕಬ್ಬಲಗೇರಿ, ಸಂಗಮೇಶ ಕುಂಬಾರ, ಕಾರ್ತಿಕ ಹೋಕ್ರಾಣಿ ಅವರನ್ನು ಸನ್ಮಾನಿಸಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260602-19-1554670203

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.