ಕೊಪ್ಪಳ: ಪ್ರಸಕ್ತ ವರ್ಷದಿಂದ ರಾಜ್ಯ ಸರ್ಕಾರ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರ ಹಾಜರಾತಿಗಾಗಿ ಆಧುನಿಕ ಹಾಜರಾತಿ ನಿರ್ವಹಣೆ ವ್ಯವಸ್ಥೆ (ಕ್ಯಾಮ್ಸ್) ಜಾರಿ ಮಾಡಿದ್ದು, ಇದರಲ್ಲಿ ಅಂಗವಿಕಲ ನೌಕರರು ಅಥವಾ ಶಿಕ್ಷಕರು ಕಚೇರಿ, ಶಾಲೆಗೆ ಒಂದು ಗಂಟೆ ತಡವಾಗಿ ಹಾಜರಾಗುವ ಅವಕಾಶ ಕೊಡಬೇಕು ಎಂದು ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷ ಬೀರಪ್ಪ ಅಂಡಗಿ ಚಿಲವಾಡಗಿ ಒತ್ತಾಯಿಸಿದ್ದಾರೆ.

ವೇತನ ಆಯೋಗದಲ್ಲಿ ಈ ಕುರಿತು ಆದೇಶವಾಗಿದ್ದು, ಆಧುನಿಕ ಹಾಜರಾತಿಯಲ್ಲಿ ಅಂಗವಿಕಲ ಶಿಕ್ಷಕರು ಶಾಲೆಗೆ ಒಂದು ಗಂಟೆ ತಡವಾಗಿ ಹಾಜರಾದ ಸಮಯದಲ್ಲಿ ಅದನ್ನು ಅಳವಡಿಸಿಕೊಳ್ಳಲು ಕ್ಯಾಮ್ಸ್ನಲ್ಲಿ ಯಾವುದೇ ಆಯ್ಕೆಗಳನ್ನು ನೀಡಿಲ್ಲ. ಇದರಿಂದ ಅಂಗವಿಕಲ ಶಿಕ್ಷಕರಿಗೆ ತೊಂದರೆಯಾಗುತ್ತಿದ್ದು, ಕೂಡಲೇ ಸರ್ಕಾರ ಇದರ ಬಗ್ಗೆ ಗಮನ ಹರಿಸಿ ಕ್ಯಾಮ್ಸ್ನಲ್ಲಿರುವ ಅಂಗವಿಕಲ ಶಿಕ್ಷಕರಿಗೆ ಇರುವ ಕರ್ತವ್ಯಕ್ಕೆ ಒಂದು ಗಂಟೆ ತಡವಾಗಿ ಬರುವ ಅಂಶ ಅಳವಡಿಸಬೇಕು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260529-35-1896025527

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.