ಕೊಪ್ಪಳ: ಸಿಬಿಎಸ್ಇ ಹತ್ತನೇ ತರಗತಿಯ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ಜಿಲ್ಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.

ಇಲ್ಲಿಗೆ ಸಮೀಪದ ಕಿಡದಾಳದಲ್ಲಿರುವ ಶಾರದಾ ಇಂಟರ್ನ್ಯಾಷನಲ್ ಶಾಲೆಯ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಫಲಿತಾಂಶ ಪಡೆದಿದ್ದಾರೆ. ಜಸ್ಮಿತಾ ವರ್ಮಾ ಎಂ. (ಶೇ 98.2), ಶ್ರಾವಣಿ ಗೊಗ್ಗರಿ (ಶೇ 98.2), ಶ್ರೇಯಾ ಸಜ್ಜನ್ (ಶೇ 94.4), ನೇಹಾ ಪೀರಾಪುರ (ಶೇ 94.6), ಮಮತಾ (ಶೇ 94) ಉತ್ತಮ ಫಲಿತಾಂಶ ಗಳಿಸಿದ್ದಾರೆ.

ವಿದ್ಯಾರ್ಥಿಗಳ ಈ ಸಾಧನೆಗೆ ಶಾರದಾ ಫೌಂಡೇಷನ್ ಟ್ರಸ್ಟ್ ಅಧ್ಯಕ್ಷ ವಿ.ಆರ್. ಪಾಟೀಲ ಹಾಗೂ ಕಾರ್ಯದರ್ಶಿ ಎಸ್.ಆರ್. ಪಾಟೀಲ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಎಸ್ವಿಸಿ: ಕುಷ್ಟಗಿಯ ಎಸ್ವಿಸಿ ಮೆಮೋರಿಯಲ್ ಪಬ್ಲಿಕ್ ಶಾಲೆಯು ಹತ್ತನೇ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ ಪ್ರಥಮ ಐದೂ ಸ್ಥಾನಗಳನ್ನು ತನ್ನದಾಗಿಸಿಕೊಂಡಿದ್ದು ಪೂರ್ಣ ಶೇ 100ರಷ್ಟು ಫಲಿತಾಂಶ ಪಡೆದಿದೆ ಎಂದು ಸಂಸ್ಥೆ ಅಧ್ಯಕ್ಷ ಸಿ.ವಿ. ಚಂದ್ರಶೇಖರ್ ತಿಳಿಸಿದ್ದಾರೆ.

ಸ್ಫೂರ್ತಿ ಪೊಲೀಸ್ ಪಾಟೀಲ್ (ಶೇ 97.60), ವಿದ್ಯಾಶ್ರೀ ಪೊಲೀಸ್ ಪಾಟೀಲ್ (ಶೇ 92), ಪೃಥ್ವಿ ಬೊಳ್ಳೊಳ್ಳಿ (ಶೇ 91.80), ಅನನ್ಯ ಪಾಲಂಕರ್ (ಶೇ 91.80) ಹಾಗೂ ಸುಮತಿ ಕನಕಗಿರಿ (ಶೇ 91.20) ಉನ್ನತ ಶ್ರೇಣಿ ಪಡೆದಿದ್ದಾರೆ.

ಒಟ್ಟು 21 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 12 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಗಳಿಸಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಸಿ.ವಿ. ಚಂದ್ರಶೇಖರ್, ಸಂಸ್ಥೆಯ ಸಿಇಒ ಜಗದೀಶ್ ಅಂಗಡಿ, ಪ್ರಾಂಶುಪಾಲ ಮಹದೇವ್ ಮಧಾಳೆ ಹರ್ಷ ವ್ಯಕ್ತಪಡಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260416-35-557842090

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.