ಕೊಪ್ಪಳ: ‘ಬಿ.ಆರ್. ಅಂಬೇಡ್ಕರ್ ಅವರು ಬರೆದ ಸಂವಿಧಾನವನ್ನು ಎಲ್ಲರೂ ಸದ್ಬಳಕೆ ಮಾಡಿಕೊಳ್ಳಬೇಕು, ಉತ್ತಮ ಹಾಗೂ ಉನ್ನತ ಶಿಕ್ಷಣ ಪಡೆದಾಗ ಮಾತ್ರ ಸುಂದರ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ’ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾಂತೇಶ ದರಗದ ಅವರು ಹೇಳಿದರು.

ತಾಲ್ಲೂಕಿನ ಗುಳದಳ್ಳಿ ಗ್ರಾಮದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಘಟಕವು ಅಂಬೇಡ್ಕರ್ ಅವರ ಮೂರ್ತಿಯ ಮುಂಭಾಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಡಾ. ಅಂಬೇಡ್ಕರ್ ಅವರ 135ನೇ ಜಯಂತಿ ಮತ್ತು 81 ಜೋಡಿಯ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ನೀವೆಲ್ಲರೂ ತಂದೆ ತಾಯಿ ಆಶೀರ್ವಾದದಿಂದ ನೂತನವಾಗಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದೀರಿ. ಆದರೆ, ಹೆಂಡತಿ ಬಂದ ಮೇಲೆ ತಂದೆ ತಾಯಿಯನ್ನು ಜೋಪಾನ ಮಾಡುವುದು ಗೌರವಿಸುವುದು ಮತ್ತು ಅವರನ್ನು ಪ್ರೀತಿಸುವುದು ಕಡಿಮೆಯಾಗುತ್ತಿದೆ. ಇದು ಸರಿಯಲ್ಲ. ತಂದೆ ತಾಯಿಯೇ ನಮಗೆ ಮೊದಲು ದೇವರು. ಅವರನ್ನು ಜೋಪಾನ ಮಾಡಬೇಕು’ ಎಂದು ಹೇಳಿದರು.

ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನದ ಪೀಠಿಕೆ ಹೇಳುವ ಮೂಲಕ ನವ ಜೋಡಿಗಳು ದಾಂಪತ್ಯ ಬದುಕಿಗೆ ಕಾಲಿಟ್ಟರು.

ಶಾಸಕ ರಾಘವೇಂದ್ರ ಹಿಟ್ನಾಳ, ಮಾಜಿ ಸಂಸದ ಸಂಗಣ್ಣ ಕರಡಿ, ಬಿಜೆಪಿ ಮುಖಂಡ ಡಾ. ಬಸವರಾಜ ಕ್ಯಾವಟರ್, ಚಿತ್ರದುರ್ಗ ಮಠದ ಷಡಕ್ಷರಮುನಿ ಸ್ವಾಮೀಜಿ, ಹಂಪಿಯ ಪೂರ್ಣಾನಂದ ಭಾರತಿಸ್ವಾಮೀಜಿ, ಅಳವಂಡಿ ಮಠದ ಗದಿಯಾಪ್ಪಜ್ಜ ಇಟಗಿ, ಡಿ.ಎಂ. ಪೂಜಾರ, ಜಿ.ಪಂ ಲ್ಲಾ ಪಂಚಾಯಿತಿ ಮಾಜಿ ಸದಸ್ಯ ಗೂಳಪ್ಪ ಹಲಗೇರಿ, ಷಡಕ್ಷರಿ ಮುನಿಸ್ವಾಮೀಜಿ, ಉಮೇಶ್ ಕಾರಜೋಳ, ವೆಂಕಟೇಶ್ ಬಾರಕೇರ, ಮುನಿರಾಬಾದ್ ಪಿಎಸ್ಐ ಅಮರೇಗೌಡರು ಬೆಟ್ಟದಪ್ಪ ಭೀಮನೂರ, ಗಣೇಶ ಹೊರತಟ್ನಾಳಳ, ಗ್ರಾಮದ ಮುಖಂಡರಾದ ಗುಡದಪ್ಪ ದೊಡ್ಡಮನಿ, ಸಂಜೀವಪ್ಪ ಕಡೇಮನಿ, ಧರ್ಮಣ್ಣ ಬೆಣ್ಣಿ, ಮೈಲಾರಪ್ಪ ಕಲ್ಲೂರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260503-35-198722844

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.