ಕೊಪ್ಪಳದ ಬಸವೇಶ್ವರ ನಗರ ವಾರ್ಡ್ 12 ರಲ್ಲಿ ಹನುಮಪ್ಪನ ದೇವಸ್ಥಾನದ ಆವರಣದಲ್ಲಿ ಬೆಳಗಿನ ಹೊತ್ತು ವಿಶಿಷ್ಟ ನಿಶ್ಯಬ್ದತೆ ನೆಲೆಸಿರುತ್ತದೆ. ಅದು ಪೂಜೆಯ ನಿಶ್ಯಬ್ದವಲ್ಲ; ಅದು ಓದುವ ನಿಶ್ಶಬ್ದತೆ. ಪತ್ರಿಕೆ ಪುಟಗಳ ಸರಸರ, ಪುಸ್ತಕದ ಪುಟ ತಿರುಗುವ ಸಣ್ಣ ಶಬ್ದ, ಮತ್ತು ಯಾವುದೋ ಹುಡುಗನ ಏಕಾಗ್ರತೆಯ ಕಣ್ಣುಗಳು... ಇವೆಲ್ಲ ಸೇರಿ ಇಲ್ಲಿ ಒಂದು ಹೊಸ ‘ಗುಡಿ’ ರೂಪುಗೊಂಡಿದೆ. ಅದೇ ‘ಗುಡಿ ಗ್ರಂಥಾಲಯ’!

ಒಂದು ಕಾಲದಲ್ಲಿ ‘ಸಾಲಿಗುಡಿ’ ಎಂಬ ಕಲ್ಪನೆ ಜನಮನದಲ್ಲಿ ಇದ್ದಂತೆ, ಇಂದು ಇಲ್ಲಿ ದೇವರ ಗುಡಿಯ ಜೊತೆಗೆ ಅಕ್ಷರದ ಗುಡಿಯೂ ಬೆಳೆಯುತ್ತಿದೆ. ಈ ಪ್ರಯೋಗಕ್ಕೆ ಒಂದು ವರ್ಷ ತುಂಬಿದೆ. ಈ ಓಣಿಯ ಕಥೆ–ಒಂದು ನಂಬಿಕೆ, ಒಂದು ಕನಸು ಮತ್ತು ಒಂದು ನಿರಂತರ ಶ್ರಮದ ದಾಖಲೆ.

ಅದು ಏಪ್ರಿಲ್ 14, 2025. ಅಂಬೇಡ್ಕರ್ ಜಯಂತಿ. ಹನುಮಪ್ಪನ ದೇವಸ್ಥಾನದ ಮುಂದೆ ಅಂಬೇಡ್ಕರ್ ಹಾಗೂ ಜಗಜೀವನರಾಮ ಅವರ ಭಾವಚಿತ್ರಗಳಿಗೆ ಪುಷ್ಪಾರ್ಪಣೆ ನಡೆಯಿತು. ದೀಪ ಬೆಳಗಿತು. ಆದರೆ ಆ ಬೆಳಕು ಕೇವಲ ಎಣ್ಣೆಯ ದೀಪದ ಬೆಳಕಾಗಿರಲಿಲ್ಲ, ಅದು ಓದುವ ಆಸೆಯತ್ತ ತೆರೆದ ದಾರಿ.

ಆ ದಿನದಿಂದಲೇ ದೇವಸ್ಥಾನದ ಒಂದು ಮೂಲೆಯಲ್ಲಿ ದಿನಪತ್ರಿಕೆಗಳು ಬಂದು ಬೀಳತೊಡಗಿದವು. ನಿಧಾನವಾಗಿ ಆ ಸ್ಥಳವೇ ಓದುವವರ ಜಾಗವಾಯಿತು. ಶಾಲೆ ಮುಗಿದ ಮಕ್ಕಳು, ಕೆಲಸದ ನಂತರ ಬಂದ ಯುವಕರು–ಎಲ್ಲರದೂ ಒಂದೇ ಉದ್ದೇಶ, ‘ಓದಬೇಕು.’

ಈ ನಡುವೆ ಓದುವ ಆಸೆಗೆ ಇನ್ನಷ್ಟು ಬಲ ನೀಡುವಂತೆ ಇಲ್ಲಿ ಪುಸ್ತಕಗಳ ಸಂಗ್ರಹವೂ ಸೇರತೊಡಗಿತು. ಈಗ ಇಲ್ಲಿ ಲಭ್ಯವಿರುವ ಗ್ರಂಥಗಳು ಸುಮಾರು 150 ರಿಂದ 170. ಅವುಗಳಲ್ಲಿ ಕನ್ನಡ ವ್ಯಾಕರಣ, ಮಾನವತವಾದಿ ಡಾ.ಅಂಬೇಡ್ಕರ್, ಈಗ ಭಾರತ ಮಾತಾಡಬೇಕಿದೆ, ಸಂವಿಧಾನ, ಜೈಭೀಮ್, ಪೂನಾ ಒಪ್ಪಂದ, ಸಾಮಾಜಿಕ ಸಬಲೀಕರಣ, ಎದೆಗೆ ಬಿದ್ದ ಅಕ್ಷರ, ಮೂಕಜ್ಜಿಯ ಕನಸುಗಳು, ಟಿಂಗರ ಬುಡ್ಡಣ್ಣ ನಾಟಕ, ಅಂಬೇಡ್ಕರ್ ನಾಟಕ, ಮಕ್ಕಳಿಗಾಗಿ ಪಂಚತಂತ್ರ, ಈಸೋಪನ ನೀತಿ ಕಥೆಗಳು, ನೈತಿಕ ಕಥೆಗಳು ಸೇರಿದಂತೆ ಹಲವು ಮಹತ್ವದ ಕೃತಿಗಳು ಸೇರಿವೆ. ಈ ಪುಸ್ತಕಗಳು ಕೇವಲ ಓದಿನ ಸಾಮಗ್ರಿಯಲ್ಲ, ಅವು ಚಿಂತನೆಗೆ ದಾರಿ ತೋರಿಸುವ ಸಂಗಾತಿಗಳು.

ಅದೇ ರೀತಿ, ನಿಯತಕಾಲಿಕೆಗಳೂ ಇಲ್ಲಿ ಓದುಗರನ್ನು ಕಾಯುತ್ತಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ವಾರ್ತಾಪತ್ರ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಮಹಾಮನೆ ಮುಂತಾದವುಗಳು ಜ್ಞಾನವಿಸ್ತಾರಕ್ಕೆ ಸಹಾಯ ಮಾಡುತ್ತಿವೆ.

ದಿನಪತ್ರಿಕೆಗಳ ವಿಚಾರದಲ್ಲಿ ಈ ಗುಡಿಯು ಇನ್ನಷ್ಟು ಜೀವಂತವಾಗಿದೆ. ‘ಪ್ರಜಾವಾಣಿ’, ‘ಡೆಕ್ಕನ್ ಹೆರಾಲ್ಡ್’ ಸೇರಿದಂತೆ ಹಲವು ಪತ್ರಿಕೆಗಳು ಪ್ರತಿದಿನ ಇಲ್ಲಿಗೆ ಬರುತ್ತಿವೆ. ವಿಶೇಷವೆಂದರೆ, ಸದ್ಯ ಬರುತ್ತಿರುವ ದಿನಪತ್ರಿಕೆಗಳಿಗೆ ಸಮಾನ ಮನಸ್ಕ ಗೆಳೆಯರು ತಾವೇ ಮುಂದೆ ಬಂದು ಒಂದು ವರ್ಷದ ಚಂದಾದಾರಿಕೆ ನೀಡಿದ್ದಾರೆ. ಒಬ್ಬರು ಮೂರು ಪತ್ರಿಕೆಗಳ ಚಂದಾ ನೀಡಿದರೆ, ಉಳಿದವರು ಒಂದು ಪತ್ರಿಕೆಯ ಚಂದಾದಾರಿಕೆಯನ್ನು ಹೊತ್ತುಕೊಂಡಿದ್ದಾರೆ. ಇದು ಸಮುದಾಯದ ಪಾಲ್ಗೊಳ್ಳುವಿಕೆಯ ಮಾದರಿ.

‘ನಾವು ನಿತ್ಯದ ಸುದ್ದಿಗಳನ್ನು, ಕಥೆಗಳನ್ನು ಇಲ್ಲಿ ಓದುತ್ತೇವೆ. ಓದಿ ಮತ್ತೆ ಅದೇ ಜಾಗಕ್ಕೆ ಇಡುವುದು ಅಭ್ಯಾಸವಾಗಿದೆ’ ಎಂದು ಯುವಕರು ನಗುಮುಖದಿಂದ ಹೇಳುತ್ತಾರೆ. ಅವರ ಮಾತಿನಲ್ಲಿ ಅಭ್ಯಾಸಕ್ಕಿಂತ ಹೆಚ್ಚು ಒಂದು ಹೆಮ್ಮೆ ಇದೆ. ತಮ್ಮ ಕೇರಿಯನ್ನು ತಾವೇ ಬದಲಿಸುತ್ತಿರುವ ಹೆಮ್ಮೆ.

ಈ ಕನಸಿನ ಹಿಂದೆ ನಿಂತಿರುವವರಲ್ಲಿ ಈಶಪ್ಪ ದೊಡ್ಡಮನಿ ಹೇಳುವಂತೆ, ಇದು ದೊಡ್ಡ ಸಂಸ್ಥೆಯ ಯೋಜನೆ ಅಲ್ಲ. ‘ನಾವು ಕೆಲ ಸಮಾನ ಮನಸ್ಕ ಗೆಳೆಯರು ಸೇರಿ ಆರಂಭಿಸಿದ ಕೆಲಸ. ಪ್ರತಿದಿನ ಬೆಳಿಗ್ಗೆ ಬಂದು ಕಸಗುಡಿಸುತ್ತೇವೆ, ಪತ್ರಿಕೆಗಳನ್ನು ಸರಿಯಾಗಿ ಜೋಡಿಸುತ್ತೇವೆ, ಹಳೆಯ ಪತ್ರಿಕೆಗಳನ್ನು ವ್ಯವಸ್ಥಿತವಾಗಿ ಇಡುತ್ತೇವೆ. ಇದು ನಮ್ಮ ದಿನಚರಿ’ ಎಂದು ಅವರು ಹೇಳುತ್ತಾರೆ.

ಈ ಸರಳ ದಿನಚರಿಯಲ್ಲೇ ಒಂದು ದೊಡ್ಡ ಪರಿವರ್ತನೆ ಅಡಗಿದೆ. ದೇವಸ್ಥಾನದ ಆವರಣವು ಈಗ ಕೇವಲ ಭಕ್ತಿಯ ಸ್ಥಳವಲ್ಲ–ಅದು ಜಾಗೃತಿಯ ಸ್ಥಳವಾಗುತ್ತಿದೆ. ಮಕ್ಕಳು ಪುಸ್ತಕದ ಕಡೆ ಕೈಚಾಚುವಾಗ, ಆ ದೃಶ್ಯವೇ ಇಲ್ಲಿ ನಡೆಯುತ್ತಿರುವ ನಿಜವಾದ ಪೂಜೆ.

ನಗರಸಭೆಯ ಮಾಜಿ ಸದಸ್ಯೆ ಯಲ್ಲಮ್ಮ ರಮೇಶ್ ಗಿಣಗೇರಿ ಅವರ ದೃಷ್ಟಿಯಲ್ಲಿ ಈ ಪ್ರಯೋಗ ಇನ್ನಷ್ಟು ದೊಡ್ಡ ದಾರಿಯ ಆರಂಭ. ಸಾರ್ವಜನಿಕ ಗ್ರಂಥಾಲಯ ಕಟ್ಟಡಕ್ಕೂ ಜಾಗ ಸಿಕ್ಕಿದ್ದು, ಕಾಮಗಾರಿ ಆರಂಭವಾಗಲಿದೆ. ‘ಆದರೆ ಅದಕ್ಕೂ ಮುನ್ನವೇ ಈ ಗುಡಿ ಗ್ರಂಥಾಲಯ ಜನರ ಮನಸ್ಸಿನಲ್ಲಿ ಓದುವ ಆಸೆ ಹಚ್ಚಿಸಿದೆ’ ಎನ್ನುತ್ತಾರೆ. ಜೊತೆಗೆ ₹5000 ಮೌಲ್ಯದ ಪುಸ್ತಕಗಳನ್ನು ನೀಡುವ ಭರವಸೆಯೂ ಈ ಪ್ರಯತ್ನಕ್ಕೆ ಇನ್ನಷ್ಟು ಬಲ ನೀಡಿದೆ.

ಇಲ್ಲಿ ಒಂದು ಶೆಲ್ಫ್ನಲ್ಲಿ ಇಂದಿನ ಪತ್ರಿಕೆಗಳು, ಇನ್ನೊಂದು ಕಡೆ ಹಳೆಯ ಸಂಚಿಕೆಗಳು. ತೆಗೆದುಕೊಳ್ಳುವುದು ಸುಲಭ, ಓದುವುದು ಸಹಜ, ಮತ್ತೆ ಇಡುವುದು ಶಿಸ್ತಿನ ಭಾಗ. ಈ ಸರಳ ವ್ಯವಸ್ಥೆಯೊಳಗೆ ಒಂದು ಪಾಠವಿದೆ, ಅದು ಜವಾಬ್ದಾರಿಯ ಪಾಠ.

ಮಾರುತಿ ಕಟ್ಟಿಮನಿ, ಮಹಾಲಕ್ಷ್ಮೀ ಕಂದಾರಿ, ಶ್ರವಣಕುಮಾರ ಶರ್ಮಾ, ಪರಶುರಾಮ ಕಿಡದಾಳ, ಗವಿಸಿದ್ಧಪ್ಪ ಗಿಣಗೇರಿ, ಶಿವಪುತ್ರಪ್ಪ ಬಂಗಾರಿ, ದೇವಪ್ಪ ಗಿಣಗೇರಿ, ವಿನಾಯಕ ಕಿಡದಾಳ, ಗವಿರಾಜ ದೊಡ್ಡಮನಿ, ಮಂಜುನಾಥ ಹಳ್ಳಿಕೇರಿ ಸೇರಿದಂತೆ ಅನೇಕ ಯುವಕರು ಈ ಚಿಕ್ಕದಾಗಿ ಕಾಣುವ, ಆದರೆ ಉದಾತ್ತವಾದ ಆಶಯದ ಭಾಗವಾಗಿದ್ದಾರೆ.

ದೇವಸ್ಥಾನದ ಗಂಟೆಯ ಶಬ್ದ ನಿಂತ ನಂತರವೂ ಇಲ್ಲಿ ಮತ್ತೊಂದು ಶಬ್ದ ಕೇಳಿಸುತ್ತದೆ. ಪುಟ ತಿರುಗುವ ಶಬ್ದ. ಬಹುಶಃ ಅದೇ ಈ ಕೇರಿಯ ಹೊಸ ಪ್ರಾರ್ಥನೆ. ಅಕ್ಷರದ ಬೆಳಕಿನಲ್ಲಿ ಬೆಳೆಯುತ್ತಿರುವ ಈ ‘ಗುಡಿ ಗ್ರಂಥಾಲಯ’ ಈಗ ಒಂದು ವರ್ಷದ ಆರೋಗ್ಯವಂತ ಕೂಸು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.