ಕೊಪ್ಪಳ: ನವದೆಹಲಿಯ ಭಾರತದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು 2015ರಿಂದ ಮಾನವ ಹಕ್ಕುಗಳ ಕುರಿತು ಕಿರುಚಿತ್ರ ಸ್ಪರ್ಧೆ ನಡೆಸಿಕೊಂಡು ಬರುತ್ತಿದೆ. ಈ ವರ್ಷವೂ ಸ್ಪರ್ಧೆಗೆ ಪ್ರವೇಶಗಳನ್ನು ಆಹ್ವಾನಿಸಿದೆ.

ಮೊದಲ, 2ನೇ ಮತ್ತು 3ನೇ ಅತ್ಯುತ್ತಮ ಚಿತ್ರಕ್ಕೆ ಬಹುಮಾನದ ಮೊತ್ತವು ಕ್ರಮವಾಗಿ ₹2 ಲಕ್ಷ, ₹1.50 ಲಕ್ಷ ಹಾಗೂ ₹1 ಲಕ್ಷ ಇರುತ್ತದೆ. ಆಯೋಗವು 3 ನಗದು ಪ್ರಶಸ್ತಿಗಳು, ಪ್ರಮಾಣಪತ್ರಗಳು ಮತ್ತು ಟ್ರೋಫಿಗಳ ಜೊತೆಗೆ ತೀರ್ಪುಗಾರರು ಶಿಫಾರಸು ಮಾಡಿದ ಗರಿಷ್ಠ ನಾಲ್ಕು ಚಿತ್ರಗಳಿಗೆ ತಲಾ ₹50 ಸಾವಿರ ನಗದು ಬಹುಮಾನ ಲಭಿಸಲಿದೆ.

ಕಿರುಚಿತ್ರಗಳು ಹಿಂದಿ ಅಥವಾ ಭಾರತೀಯ ಭಾಷೆಯಲ್ಲಿರಹುದು, ಇಂಗ್ಲಿಷ್ನಲ್ಲಿ ಉಪಶೀರ್ಷಿಕೆ ಹಾಕಿರಬೇಕು, ಕಿರುಚಿತ್ರದ ಅವಧಿ ಕನಿಷ್ಠ 3 ನಿಮಿಷಗಳು ಮತ್ತು ಗರಿಷ್ಠ 10 ನಿಮಿಷಗಳು ಇರಬೇಕು. ಪ್ರವೇಶ ಸ್ವೀಕರಿಸಲು ಜೂ. 30 ಕೊನೆಯ ದಿನವಾಗಿದೆ. ಗೂಗಲ್ ಡ್ರೈವ್ ಬಳಸಿ nhrcshortfilm@gmail.com ಆನ್ಲೈನ್ನಲ್ಲಿ ಕಿರುಚಿತ್ರಗಳನ್ನು ಸ್ಪರ್ಧೆಗೆ ಕಳುಹಿಸಬೇಕು. ನಿಯಮಗಳು ಮತ್ತು ಷರತ್ತುಗಳು ಮತ್ತು ಅರ್ಜಿ ನಮೂನೆಯ ಪ್ರತಿಯನ್ನು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ವೆಬ್ಸೈಟ್: https://nhrc.nic.in ಅಥವಾ ಲಿಂಕ್: https://nhrc.nic.in/ flipbook/files/255 ಮೂಲಕ ಪಡೆದುಕೊಳ್ಳಬಹುದು. ಹೆಚ್ಚಿನ ವಿವರಗಳಿಗೆ 011-24663281/24663367 ಸಂಪರ್ಕಿಸಬಹುದು ಎಂದು ಎನ್ಎಚ್ಆರ್ಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಉಪನಿರ್ದೇಶಕ ಜೈಮಿನಿ ಕುಮಾರ್ ಶ್ರೀವಾಸ್ತವ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260501-35-636275279

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.