ಹನುಮಸಾಗರ: ಸಮೀಪದ ಕಬ್ಬರಗಿಯಲ್ಲಿ ಮಹಾಶಕ್ತಿ ದೇವಿ ಜಾತ್ರೆ ಅಂಗವಾಗಿ ಸರ್ಕಾರಿ ನೌಕರರ ಸಹಯೋಗದಲ್ಲಿ ರಾಜ್ಯಮಟ್ಟದ ರಸಪ್ರಶ್ನೆ ಸ್ಪರ್ಧೆ ನಡೆಯಿತು.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಕೊಪ್ಪಳ ಗ್ರಾಮೀಣ ಠಾಣೆ ಪಿಎಸ್ಐ ರೇವಣ್ಣ ಗುರಿಕಾರ,‘ಸೋಲು-ಗೆಲುವು ಒಂದು ನಿರ್ಣಯ ಅಷ್ಟೇ. ಸ್ಪರ್ಧೆಯಲ್ಲಿ ಭಾಗವಹಿಸುವುದೇ ಪ್ರಮುಖ. ಶಿಕ್ಷಣ ಮಾನವ ಸಮಾಜಕ್ಕೆ ದೊಡ್ಡ ಕೊಡುಗೆಯಾಗಿದೆ. ಬಡತನ, ನಿರುದ್ಯೋಗ, ಮೌಢ್ಯ ಹಾಗೂ ಅನಕ್ಷರತೆ ಸೇರಿ ಸಮಾಜದ ಹಲವು ಜ್ವಲಂತ ಸಮಸ್ಯೆಗಳನ್ನು ಶಿಕ್ಷಣದಿಂದ ದೂರ ಮಾಡಬಹುದು’ ಎಂದು ಹೇಳಿದರು.

ರಾಜ್ಯದ ವಿವಿಧ ಭಾಗಗಳ 80 ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.

ಸ್ಪರ್ಧೆಯಲ್ಲಿ ಯಾದಗಿರಿ ಪ್ರಥಮ, ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲ್ಲೂಕಿನ ವಡಗೇರಿ ಗ್ರಾಮ ದ್ವಿತೀಯ ಸ್ಥಾನ ಗಳಿಸಿತು. ಕನಕಗಿರಿ ಹಾಗೂ ಕೊಪ್ಪಳ ತಂಡಗಳು ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟವು.

ತಾಲೂಕು ದೈಹಿಕ ಶಿಕ್ಷಣಾಧಿಕಾರಿ ನಾಗಪ್ಪ ಬಿಳಿಯಪ್ಪನವರ, ಸಿಆರ್ಪಿ ಶೇಖರಪ್ಪ ಕುರಿ, ಮುಖ್ಯಶಿಕ್ಷಕ ಯಲ್ಲನಗೌಡ ಪಾಟೀಲ, ನಿವೃತ್ತ ಮುಖ್ಯ ಶಿಕ್ಷಕ ಬಸವಂತಪ್ಪ ಹನುಮಸಾಗರ, ದೈಹಿಕ ಶಿಕ್ಷಣ ಶಿಕ್ಷಕ ಬಸವರಾಜ ಹನುಮಸಾಗರ, ಶಿಕ್ಷಕರಾದ ಯಮನೂರಪ್ಪ ಗುರಿಕಾರ, ಪರಶುರಾಮ ವಣಗೇರಿ, ಪ್ರಕಾಶ ಕಾಟಾಪುರ, ಮಂಜುನಾಥ ಗುರಿಕಾರ ಹಾಗೂ ಸರ್ಕಾರಿ ನೌಕರರು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260401-35-419276660

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.