ಮಂಗಳೂರು: ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕು ಆಡಳಿತ, ಪೊಲೀಸ್ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಸ್ಥಳೀಯ ದಲಿತ, ಕನ್ನಡಪರ ಮತ್ತಿತರ ಸಂಘಟನೆಗಳ ಸಹಯೋಗದಲ್ಲಿ ಅಂಬೇಡ್ಕರ್ ಜಯಂತಿ ಅಂಗವಾಗಿ ಅಂಬೇಡ್ಕರ್ ಬದುಕು–ಬರಹ ಕುರಿತು ರಾಜ್ಯಮಟ್ಟದ ಮುಕ್ತ ರಸಪ್ರಶ್ನೆ ಸ್ಪರ್ಧೆಯನ್ನು ಏ.12ರಂದು ಬೆಳಿಗ್ಗೆ 9ಕ್ಕೆ ಕುಷ್ಟಗಿ ಪಟ್ಟಣದ ಕ್ರೈಸ್ಟ್ ದಿ ಕಿಂಗ್ ಶಾಲೆಯಲ್ಲಿ ಆಯೋಜಿಸಿವೆ.

ಸ್ಪರ್ಧೆಗೆ ವಯಸ್ಸು ಮತ್ತು ಶಿಕ್ಷಣದ ಮಿತಿ ಇಲ್ಲ. ಆಧಾರ್ ಕಾರ್ಡಿನ ನಕಲು ಪ್ರತಿ ಒದಗಿಸಿ ರಾಜ್ಯದ ಯಾವುದೇ ಜಿಲ್ಲೆವರು ಭಾಗವಹಿಸಬಹುದು. 50 ಅಂಕಗಳ ಬಹು ಆಯ್ಕೆ ಮಾದರಿಯ ಮೊದಲ ಸುತ್ತು ಇದ್ದು ಇದರಲ್ಲಿ ಹೆಚ್ಚು ಅಂಕ ಗಳಿಸಿದ ಮೊದಲ 12 ಮಂದಿ 2ನೇ ಸುತ್ತಿಗೆ ಆಯ್ಕೆಯಾಗುತ್ತಾರೆ. ಅವರನ್ನು 6 ತಂಡಗಳಾಗಿ ವಿಂಗಡಿಸಿ ಮೌಖಿಕ ಸ್ಪರ್ಧೆ ನಡೆಸಲಾಗುವುದು. ವಿಜೇತರಿಗೆ ಪ್ರಥಮ ಬಹುಮಾನ ₹ 50 ಸಾವಿರ, ದ್ವಿತೀಯ ₹ 30 ಸಾವಿರ ಹಾಗೂ ಮೂರನೇ ಬಹುಮಾನ ₹ 20 ಸಾವಿರ ಸಿಗಲಿದೆ.

ಅಂಬೇಡ್ಕರ್ ಜೀವನ– ಶಿಕ್ಷಣ, ರಾಷ್ಟ್ರೀಯ ಹೋರಾಟ, ಭಾರತ ಸಂವಿಧಾನ ರಚನೆ, ಶಿಕ್ಷಣ, ಸಂಘ ಟನೆ, ಹೋರಾಟ ತತ್ವಗಳು, ಚಿಂತನೆ, ಮೀಸಲಾತಿ, ಮಹಿಳಾ ಹಕ್ಕು, ಜಾಗತಿಕ ಮಹಾನಾಯಕರಾಗಿ ಅಂಬೇಡ್ಕರ್– ಪ್ರಸ್ತುತ ದಿನಮಾನ ಸ್ಪರ್ಧೆಯ ಪಠ್ಯವಾಗಿದ್ದು ಮೊಬೈಲ್ ನಂಬರ್ 97404 21421(ಎಸ್.ಎಸ್ ತೆಮಿನಾಳ), 9845808941 (ಶ್ರೀನಿವಾಸ ದೇಸಾಯಿ), 9901797951 (ಸುರೇಶ್ ಅಂಕೋಲಿ), 9902180043 (ಅಮರೇಗೌಡ) ಅಥವಾ 9731799080 (ಭರಮಪ್ಪ ಪಿ) ಸಂಪರ್ಕಿಸಿ ಏ.11ರೊಳಗೆ ನೋಂದಣಿ ಮಾಡಿಕೊಳ್ಳಬೇಕು ಎಂದು ಇನ್ಸ್ಪೆಕ್ಟರ್ ವಿಶ್ವನಾಥ ಹಿರೇಗೌಡರ್ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260410-29-1120511723

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.