ಕೊಪ್ಪಳ: ಶಾಸಕ ರಾಘವೇಂದ್ರ ಹಿಟ್ನಾಳ ಗುರುವಾರ ಬಂಡಿಹರ್ಲಾಪುರ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಅಗಳಕೇರಿ, ಶಿವಪುರ, ಹೊಸ ಬಂಡಿಹರ್ಲಾಪುರ, ಹಳೇ ಬಂಡಿಹರ್ಲಾಪುರ, ಬಸಾಪುರ, ಅಯೋಧ್ಯ, ನಾರಾಯಣಪೇಟೆ, ರಾಜರಾಮಪೇಟೆ, ಮಹಮದ್ ನಗರ ಹಾಗೂ ಕವಳಿ ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು.

ಹೊಸ ಬಂಡಿಹರ್ಲಾಪುರದಲ್ಲಿ ₹4 ಕೋಟಿ ವೆಚ್ಚದಲ್ಲಿ ಕೆ.ಪಿ.ಎಸ್ ಶಾಲಾ ನಿರ್ಮಾಣಕ್ಕೆ ಭೂಮಿಪೂಜೆ ಮಾಡಿ ಮಾತನಾಡಿದ ಅವರು ‘ನಮ್ಮ ಕ್ಷೇತ್ರಕ್ಕೆ ಸುಮಾರು 8 ಕೆ.ಪಿ.ಎಸ್ ಶಾಲೆಗಳನ್ನು ತಂದಿದ್ದೇನೆ. ಈಗಾಗಲೇ ಹಿಟ್ನಾಳ, ಹೊಸಳ್ಳಿ, ಹೊಸ ಬಂಡಿಹರ್ಲಾಪುರ ಗ್ರಾಮಗಳಲ್ಲಿ ಕಾಮಗಾರಿಗೆ ಭೂಮಿಪೂಜೆ ಮಾಡಲಾಗಿದೆ. ಇದರಿಂದ ಸಾಕಷ್ಟು ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ’ ಎಂದರು.

‘ಬಂಡಿಹರ್ಲಾಪುರ ವ್ಯಾಪ್ತಿಯಲ್ಲಿ ಜಂಪ್ ಸರ್ವೆ ಸಮಸ್ಯೆಯಿದ್ದು ಪರಿಹರಿಸುವ ಕೆಲಸ ಮಾಡುತ್ತೇವೆ. ಈಗಾಗಲೇ ಅಧಿಕಾರಿಗಳು ಈ ಕಾರ್ಯದಲ್ಲಿ ತೊಡಗಿದ್ದಾರೆ’ ಎಂದು ತಿಳಿಸಿದರು.

ಉದ್ಯಮಿ ಚಂದ್ರಶೇಖರ ಐ.ಎಲ್.ಸಿ, ಕೊಪ್ಪಳ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಬಾಲಚಂದ್ರನ್ ಮುನಿರಾಬಾದ್, ಕಾಂಗ್ರೆಸ್ ಮುಖಂಡರಾದ ಕೆ.ಎಂ. ಸೈಯದ್, ವಿಶ್ವನಾಥ ರಾಜೂರು, ಯಂಕಪ್ಪ ಹೊಸಳ್ಳಿ, ಚಂದಕೃಷ್ಣ ಹರ್ಲಾಪುರ, ಕನಕರಾಯ, ನಾಗರಾಜ ಪಠವಾರಿ, ಯಮನೂರಪ್ಪ ಬಸಾಪುರ, ಸೀನಣ್ಣ ಶಿವಪುರ, ಧರ್ಮರಾಜ ಕಂಪಸಾಗರ, ಮಲ್ಲಿಕಾರ್ಜುನ ಪೂಜಾರ, ಭೀಮಣ್ಣ ಹರ್ಲಾಪುರ, ರೇಣುಕಮ್ಮ ಹರ್ಲಾಪುರ, ಸೋಮಶೇಖರ ಹಿಟ್ನಾಳ, ಬಸಣ್ಣ ಅಗಳಕೇರಿ, ಓಬಳೇಶ, ಅಶೋಕ ಹಿಟ್ನಾಳ, ಅಕ್ಬರ್ ಪಲ್ಟಾನ್ ಪಾಲ್ಗೊಂಡಿದ್ದರು.

ಹಲವು ಯೋಜನೆ: ಹಿಟ್ನಾಳ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ₹12.38 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಚಾಲನೆ ಕೊಟ್ಟರು.

ಹುಲಿಗಿಯಲ್ಲಿ ಮಾತನಾಡಿ ‘ಹುಲಿಗೆಮ್ಮ ದೇವಿಯ ದೇವಸ್ಥಾನವನ್ನು ಅಭಿವೃದ್ಧಿಪಡಿಸಲು ಹಲವು ಯೋಜನೆ ರೂಪಿಸಿದ್ದೇವೆ’ ಎಂದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260508-35-846018694

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.