ಕೊಪ್ಪಳ: ಜಿಲ್ಲೆಯ ಕುಕನೂರು ತಾಲ್ಲೂಕಿನ ಜವಾಹರ ನವೋದಯ ವಿದ್ಯಾಲಯಕ್ಕೆ ಆಯ್ಕೆಯಾಗಬೇಕು ಎನ್ನುವ ಆಸೆಯಿಂದ ಸಂಗೀತಾ ಡಂಬಳ ಎನ್ನುವ ವಿದ್ಯಾರ್ಥಿನಿ ಪ್ರವೇಶ ಪರೀಕ್ಷೆ ಬರೆದರೂ ಫಲಿತಾಂಶದಲ್ಲಿ ಗೈರು ಹಾಜರಿ ಎಂದು ಬಂದಿದ್ದು ಪೋಷಕರ ಆತಂಕಕ್ಕೆ ಕಾರಣವಾಗಿದೆ.

ತಾಲ್ಲೂಕಿನ ಅಳವಂಡಿ ಸಮೀಪದ ಘಟ್ಟಿರೆಡ್ಡಿಹಾಳ ಗ್ರಾಮದ ಸಂಗೀತಾ ಕೊಪ್ಪಳದ ಹೊರವಲಯದಲ್ಲಿರುವ ನ್ಯೂ ಎಕ್ಸಲೆಂಟ್ ಪಬ್ಲಿಕ್ ಶಾಲೆಯಲ್ಲಿ 2025ರ ಡಿಸೆಂಬರ್ನಲ್ಲಿ ನವೋದಯ ವಿದ್ಯಾಲಯದ ಪ್ರವೇಶಾತಿ ಪರೀಕ್ಷೆ ಬರೆದಿದ್ದಳು. ಆದರೆ ಫಲಿತಾಂಶ ಗೈರು ಎಂದು ಬಂದಿದೆ. ಇದರಿಂದ ಬೇಸತ್ತ ಪೋಷಕರು ನವೋದಯ ಶಾಲೆಯ ಪ್ರಾಚಾರ್ಯರಿಗೆ ದೂರು ಸಲ್ಲಿಸಿ ಪರೀಕ್ಷೆ ಎದುರಿಸಿದ ದಾಖಲೆಗಳನ್ನು ಸಲ್ಲಿಸಿ ನ್ಯಾಯ ಒದಗಿಸುವಂತೆ ವಿದ್ಯಾರ್ಥಿನಿ ತಂದೆ ಮಹೇಶ ಡಂಬಳ ಕೋರಿದ್ದಾರೆ.

‘ವಿದ್ಯಾರ್ಥಿನಿ ತನ್ನ ನೋಂದಣಿ ಸಂಖ್ಯೆ ಬದಲು ಬೇರೊಂದು ಸಂಖ್ಯೆ ಬಳಿ ಕುಳಿತಿದ್ದರಿಂದ ಸಮಸ್ಯೆಯಾಗಿದ್ದು, ಅಂದಿನ ಪರೀಕ್ಷೆಯ ಕೊಠಡಿ ನಿರ್ವಾಹಕರ ಕುರಿತು ಕ್ರಮ ಕೈಗೊಳ್ಳುವಂತೆ ಡಿಡಿಪಿಐಗೆ ಪತ್ರ ಬರೆಯಲಾಗಿದೆ’ ಎಂದು ಜವಾಹರ ನವೋದಯ ವಿದ್ಯಾಲಯದ ಪ್ರಾಚಾರ್ಯ ರಾಜೇಶ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260331-35-1488908730

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.