ಕೊರಟಗೆರೆ: ಅನ್ನ, ಶಿಕ್ಷಣ ಮತ್ತು ನೀರಿನ ವಿಚಾರದಲ್ಲಿ ಯಾರೂ ಜಾತಿವಾದಿಗಳಾಗಿ ಇರಬಾರದು. ಜಾತಿಯ ವಿಷಬೀಜವನ್ನು ಮಕ್ಕಳಿಗೆ ಬಿತ್ತುವ ಕೆಲಸ ಮಾಡಬಾರದು ಎಂದು ಎಲೆರಾಂಪುರ ಕುಂಚಿಟಿಗ ಮಹಾಸಂಸ್ಥಾನ ಮಠದ ಹನುಮಂತನಾಥ ಸ್ವಾಮೀಜಿ ಹೇಳಿದರು.

ಮಠದಲ್ಲಿನ 5ನೇ ಸಂಸ್ಕಾರ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಾಡಿಗೆ ಮತ್ತು ಸಮಾಜಕ್ಕೆ ಸತ್ಪ್ರಜೆಗಳನ್ನು ನೀಡುವ ಕೆಲಸವನ್ನು ಶಿಕ್ಷಣ ವ್ಯವಸ್ಥೆ ಮಾಡಬೇಕಿದೆ. ಇಂದು ಬಾಲ್ಯಾವಸ್ಥೆಯಲ್ಲಿಯೇ ಮಕ್ಕಳು ಮದ್ಯವ್ಯಸನಕ್ಕೆ ದಾಸರಾಗುವ ವಿಚಾರವನ್ನು ಕೇಳಿದರೆ ಆತಂಕವಾಗುತ್ತದೆ. ಮಕ್ಕಳಿಗೆ ಉತ್ತಮ ಸಂಸ್ಕಾರದ ಕೊರತೆಯೇ ಇದಕ್ಕೆ ಕಾರಣ. ಇದಕ್ಕಾಗಿ ಮಠವು ಪ್ರತೀ ವರ್ಷ ಸಂಸ್ಕಾರ ಶಿಬಿರ ಆಯೋಜಿಸುತ್ತಿದೆ ಎಂದರು.

ಕೌಶಲ್ಯ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ ಮಾತನಾಡಿ, ಮಕ್ಕಳು ಶಿಬಿರದಲ್ಲಿ ಪಡೆದ ಶಿಕ್ಷಣವನ್ನು ಜೀವನ ಪರ್ಯಂತ ಪಾಲಿಸಬೇಕು. ಶಿಬಿರದಿಂದ ಮಕ್ಕಳ ಬದುಕುವ ಶೈಲಿ ಬದಲಾಗಬೇಕು ಎಂದರು.

ಹಿರಿಯ ಸಾಹಿತಿ ಡಾ.ಮೀರಸಾಬಹಳ್ಳಿ ಶಿವಣ್ಣ ಮಾತನಾಡಿ, ಸಮಾಜದಲ್ಲಿ ಅವಿಭಕ್ತ ಕುಟುಂಬಗಳು ಮಾಯವಾಗಿ ಎಲ್ಲರು ವಿಭಕ್ತ ಕುಟುಬಂಗಳಾಗಿವೆ. ಕಥೆ ಹೇಳುವ ಅಜ್ಜಿಯರು ಇಲ್ಲ. ನಮ್ಮ ಪೂರ್ವಿಕರು ಹೇಳುವ ಕಥೆಗಳು ಮಕ್ಕಳ ಮನಸ್ಸನ್ನು ಪರಿವರ್ತಿಸುವ ಶಕ್ತಿಯಿದೆ ಎಂದರು.

ಬೆಂಗಳೂರಿನ ಗಾಂಧಿ ಭವನದ ಅಧ್ಯಕ್ಷ ಡಾ. ವೊಡೇಪಿ ಕೃಷ್ಣ ಮಾತನಾಡಿ, ನಮ್ಮ ಶಿಕ್ಷಣ ವ್ಯವಸ್ಥೆ ಬದಲಾಗಬೇಕು. ಪುಸ್ತಕ ಶಿಕ್ಷಣದಿಂದ ಏನೂ ಸಾಧ್ಯವಿಲ್ಲ. ಸಂಸ್ಕಾರಯುತ ಶಿಕ್ಷಣ ಕಲಿಯಬೇಕು. ಮಕ್ಕಳ ಜಾತ್ಯಾತೀತ, ನೀತಿ ಶಿಕ್ಷಣ ಮತ್ತು ಅಧ್ಯಾತ್ಮಿಕ ಶಿಕ್ಷಣವನ್ನು ಪಠ್ಯದೊಳಗೆ ಸೇರಿಸುವ ವ್ಯವಸ್ಥೆಯಾಗಬೇಕು ಎಂದರು.

ಶಿಬಿರದ ಸಂಚಾಲಕ ಕುಮಾರಸ್ವಾಮಿ, ಸಿ.ನಂಜುಂಡಯ್ಯ, ವಿದ್ವಾನ್ ಗಣೇಶ್, ವಿದ್ವಾನ್ ಕುಮಾರಸ್ವಾಮಿ, ಹೇಮಂತ್, ಪ್ರೊ.ದೊಡ್ಡರಂಗೇಗೌಡ, ಬಸಪ್ಪ, ಹೊಸಕೆರೆ ರಾಜಪ್ಪ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260428-17-824835171

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.