ಕೊರಟಗೆರೆ: ತಾಲ್ಲೂಕು ರಂಗಭೂಮಿ ಸಾಂಸ್ಕೃತಿಕ ಸೇವಾ ಟ್ರಸ್ಟ್ನಿಂದ ರಂಗಭೂಮಿ ದಿನಾಚರಣೆ ಅಂಗವಾಗಿ ತಾಲ್ಲೂಕಿನ ಹಿರಿಯ ರಂಗ ಕಲಾವಿದರನ್ನು ಸತ್ಕರಿಸಲಾಯಿತು.

ಟ್ರಸ್ಟ್ ತಾಲ್ಲೂಕು ಅಧ್ಯಕ್ಷ ವೈ.ಎನ್. ಪುಟ್ಟಣ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಅಪಾರ ಪ್ರತಿಭೆಗಳು ಇದ್ದರೂ, ಸೂಕ್ತ ವೇದಿಕೆಗಳ ಕೊರತೆ ಇರುವುದರಿಂದ ಅನೇಕ ಕಲಾವಿದರು ಬೆಳಕಿಗೆ ಬರದೆ ಉಳಿದಿರುವುದು ವಿಷಾದನೀಯ ಎಂದರು.

ತಾಲ್ಲೂಕು ನಿಜಕ್ಕೂ ಕಲಾವಿದರ ನಾಡು. ಇಲ್ಲಿ ನಾಟಕ, ಜನಪದ, ಸಂಗೀತ ಸೇರಿದಂತೆ ವಿವಿಧ ಕಲಾ ಪ್ರಕಾರಗಳಲ್ಲಿ ಅಪಾರ ಪ್ರತಿಭೆ ಹೊಂದಿರುವವರು ಇದ್ದಾರೆ. ಗ್ರಾಮೀಣ ಸೊಗಡಿನ ಕಲಾ ಪ್ರತಿಭೆಗಳಿಗೆ ಯಾವುದೇ ಕೊರತೆ ಇಲ್ಲ. ಅವುಗಳನ್ನು ಗುರುತಿಸಿ ಬೆಳೆಸುವ ಪ್ರಾಮಾಣಿಕ ಪ್ರಯತ್ನ ಅಗತ್ಯ ಎಂದು ಹೇಳಿದರು.

ನಗರ ಪ್ರದೇಶದ ಕಲಾವಿದರಿಗೆ ಹೆಚ್ಚು ಅವಕಾಶಗಳು ದೊರೆಯುತ್ತಿವೆಯಾದರೂ, ಗ್ರಾಮೀಣ ಭಾಗದ ಕಲಾವಿದರಿಗೆ ತಕ್ಕ ಮಟ್ಟಿನ ವೇದಿಕೆಗಳು ಲಭ್ಯವಾಗುತ್ತಿಲ್ಲ. ಇದರಿಂದ ಅವರಲ್ಲಿನ ಕಲೆ ಅನಾವರಣವಾಗದೆ ನಲುಗುತ್ತಿದೆ. ಸ್ಥಳೀಯ ಮಟ್ಟದಲ್ಲಿ ಹೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸಿ, ಯುವ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವುದು ಅವಶ್ಯಕ ಎಂದರು.

ಕಲಾವಿದರಾದ ಸಿದ್ದಗಂಗಯ್ಯ, ದೊಡ್ಡಯ್ಯ, ರುದ್ರೇಶ್, ರಾಜಶೇಖರ್, ರಾಮಣ್ಣ, ಮೈಲಾರಪ್ಪ, ಪ್ರಕಾಶ್ ಅವರನ್ನು ಸತ್ಕರಿಸಲಾಯಿತು.

ಕಾರ್ಯದರ್ಶಿ ಮಂಜುನಾಥ್, ಚಂದ್ರಣ್ಣ, ರಂಗರಾಜು, ಸಿದ್ದಗಂಗಯ್ಯ, ದೊಡ್ಡಯ್ಯ, ರುದ್ರೇಶ್, ರಾಜಶೇಖರ್, ರಾಮಣ್ಣ, ಮೈಲಾರಪ್ಪ, ಪ್ರಕಾಶ್, ಚಿಕ್ಕಪ್ಪಯ್ಯ, ಕೃಷ್ಣಮೂರ್ತಿ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260401-17-2055846594

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.