ಕೊರಟಿ(ಹೊಸಕೋಟೆ): ಗ್ರಾಮದ ಸರ್ಕಾರಿ ಪ್ರೌಢಶಾಲೆ ಹಳೆ ವಿದ್ಯಾರ್ಥಿಗಳ ‘ಗುರುವಂದನಾ ಮತ್ತು ಸ್ನೇಹ ಸಮ್ಮಿಲನ’ ಕಾರ್ಯಕ್ರಮ 28 ವರ್ಷಗಳ ನಂತರ ಸ್ನೇಹಿತರ ಸಮ್ಮಿಲನಕ್ಕೆ ಸಾಕ್ಷಿಯಾಯಿತು.

ತಾಲ್ಲೂಕಿನ ನಂದಗುಡಿ ಹೋಬಳಿ ಕೊರಟಿ ಸರ್ಕಾರಿ ಪ್ರೌಢಶಾಲೆಯಲ್ಲಿ 1997-98ನೇ ಸಾಲಿನ 10ನೇ ತರಗತಿ ಸಹಪಾಠಿಗಳು ಒಂದೆಡೆ ಸೇರಿ ಅಕ್ಷರ ಕಲಿಸಿದ ಗುರುಗಳಿಗೆ ಸಲ್ಲಿಸಿದ ಗೌರವ ಪೂರ್ವಕ ನಮನ ಎಲ್ಲರಲ್ಲೂ ಆನಂದ ಬಾಷ್ಪ ತರಿಸಿತು.

28 ವರ್ಷಗಳ ಹಿಂದೆ ಕರ್ತವ್ಯ ನಿರ್ವಹಿಸಿದ್ದ ಶಿಕ್ಷಕರಾದ ಚಿಕ್ಕಪ್ಪಯ್ಯ, ಬಾಸ್ಕರ್ ಹೆಗಡೆ, ವೆಂಕಟರಾಮನ್, ಮಲ್ಲಿಕಾರ್ಜುನ್, ಪರಮೇಶ್ವರ್ ನಾಯಕ್, ನಾರಾಯಣಸ್ವಾಮಿ ಕಾರ್ಯಕ್ರಮಮಕ್ಕೆ ಕಳೆ ತಂದರು. ತಮಗೆ ಶಿಕ್ಷಣ ನೀಡಿ, ಬದುಕಿಗೆ ದಾರಿ ತೋರಿಸಿದ ನೆಚ್ಚಿನ ಶಿಕ್ಷಕರನ್ನು ಹಳೆಯ ವಿದ್ಯಾರ್ಥಿಗಳು ಫಲಪುಷ್ಪ ಸ್ಮರಣಿಕೆ, ಗುರು ಕಾಣಿಕೆ ನೀಡಿ ಈ ಸಂದರ್ಭದಲ್ಲಿ ಸತ್ಕರಿಸಿದರು.

ನಿವೃತ್ತ ಶಿಕ್ಷಕ ಚಿಕ್ಕಪ್ಪಯ್ಯ ಮಾತನಾಡಿ, 28 ವರ್ಷಗಳ ನಂತರವೂ ನಮ್ಮನ್ನು ನೆನಪಿನಲ್ಲಿಟ್ಟುಕೊಂಡು ಗುರು ಭಕ್ತಿ ಸಮರ್ಪಿಸಿದ್ದು ನಿಜಕ್ಕೂ ಹೆಮ್ಮ ಎನಿಸುತ್ತದೆ. ನಾವು ಬಿತ್ತಿದ ಜ್ಞಾನದ ಬೀಜ ಬೆಳೆದು ನಿಂತಿರುವುದನ್ನು ಕಂಡು ಸಂತಸವಾಗಿದೆ. ಮರೆಯದ ದಿನಗಳನ್ನು ಇಳಿವಯಸ್ಸಿನಲ್ಲಿ ನಮಗೆ ಕೊಟ್ಟ ಬಹುದೊಡ್ಡ ಗುರು ಕಾಣಿಕೆ ಎಂದರು.

ನಿವೃತ್ತ ಶಿಕ್ಷಕ ಭಾಸ್ಕರ್ ಹೆಗಡೆ ಮಾತನಾಡಿ, ವಿದ್ಯಾರ್ಥಿಗಳ ಸಾಧನೆಯನ್ನು ಕೊಂಡಾಂಡಿದರು.

ಇದೇ ಸಂದರ್ಭದಲ್ಲಿ ಹಳೆ ವಿದ್ಯಾರ್ಥಿಗಳಾದ ಮುನಿರಾಜು, ಆನಂದ, ಮುನಿವೆಂಕಟರಾಜು, ಮಂಜುನಾಥ್, ಶ್ರೀನಿವಾಸ್, ನಂಜುಂಡಸ್ವಾಮಿ, ಎಂ.ಕೆ.ಶ್ರೀನಿವಾಸ್, ನಾಗೇಶ್, ನಾರಾಯಣಸ್ವಾಮಿ, ಚನ್ನಮರಿ, ಸುರೇಶ್, ಮಾರೇಗೌಡ, ವಿನೋದ, ಯಶೋದ, ಮಾಲ, ರಾಧ, ಮಂಜುಳ, ಮಮತ, ಶೈಲ ಸೇರಿದಂತೆ ವಿದ್ಯಾರ್ಥಿಗಳ ಕುಟುಂಬಸ್ಥರು ಈ ಸಂದರ್ಭದಲ್ಲಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-15-1544666033

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.