ಕುಕನೂರು: ನಾದಯೋಗಿ ಗುರುಪುಟ್ಟರಾಜ ಸಂಗೀತ ಮತ್ತು ಲಲಿತ ಕಲಾ ಸಂಸ್ಥೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಇತ್ತೀಚೆಗೆ ತಾಲ್ಲೂಕಿನ ಬಿನ್ನಾಳದಲ್ಲಿ ನಾದಯೋಗಿ ಪರಂಪರಾ ಉತ್ಸವ ಕಾರ್ಯಕ್ರಮ ಜರುಗಿತು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕರ್ಣಕುಮಾರ ಮಾತನಾಡಿ ‘ಕಲೆ ಮತ್ತು ಸಂಸ್ಕೃತಿಯನ್ನು ಉಳಿಸುವಲ್ಲಿ ನಮ್ಮ ಇಲಾಖೆ ಬಹುದೊಡ್ಡ ಕಾರ್ಯ ನಿರ್ವಹಿಸುತ್ತಿದೆ, ಆಧುನಿಕ ಕಾಲಘಟ್ಟದಲ್ಲಿ ಬಹಳಷ್ಟು ಜನ ಮೊಬೈಲ್ ಹಾಗೂ ಟಿವಿ ಬಳಕೆಯಲ್ಲಿ ನಿರತರಾಗಿ ಸಂಸ್ಕೃತಿಯನ್ನು ಮರೆಯುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ಸಾನ್ನಿಧ್ಯವನ್ನು ಮಹೇಶ್ವರ ತಾತ ವಹಿಸಿದ್ದರು. ಅಧ್ಯಕ್ಷತೆ ಮಹಮ್ಮದಸಾಬ್ ವಾಲಿಕಾರ, ಮುಖ್ಯ ಅತಿಥಿಗಳಾಗಿ ಶಂಕರ ಬಿನ್ನಾಳ, ಕಳಕಪ್ಪ ಶೆಟ್ಟಿ, ಹಿರಿಯಪ್ಪ ಕಡೆಮನಿ, ಶೇಖಪ್ಪ ದೊಡ್ಡಮನಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ವಿವಿಧ ಕಲಾವಿದರಿಂದ ಸಂಗೀತ ಕಾರ್ಯಕ್ರಮ ಜರುಗಿತು.

ಆದರ್ಶ ಬಗಾಡೆ (ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ), ಮೆಹಬೂಬ ಕಿಲ್ಲೆದಾರ (ಜನಪದ), ಅಲ್ಲಾಭಕ್ಷಿ ಭೀಮನೂರ ಹಾಗೂ ವಿಜಯಲಕ್ಷ್ಮೀ ನಾಗರಾಜ (ಸುಗಮ ಸಂಗೀತ), ಅಂಬರೀಶ್ ಹಾಗೂ ತಂಡದವರಿಂದ (ತಬಲಾ ಸೋಲೊ), ಅಂಬಣ್ಣ ದಳವಾಯಿ (ತತ್ವಪದ), ಕುಮಾರೇಶ್ವರ ಕೃಪಪಾಪೋಷಿತ ಸಂಗೀತ ಪಾಠಶಾಲೆಯಿಂದ ಸಮೂಹ ಗಾಯನ ಹಾಗೂ ದೀಕ್ಷಾ ಹೆಗಡೆ ತಂಡದವರಿಂದ ಭರತನಾಟ್ಯ, ವಾದ್ಯ ವೃಂದದ ಕೀಬೋರ್ಡ್ ರಾಮಚಂದ್ರಪ್ಪ ಉಪ್ಪಾರ, ನಾಗರಾಜ ಶ್ಯಾವಿ (ಕೊಳಲು), ಮಾರುತಿ ದೊಡ್ಡಮನಿ (ತಬಲಾ), ಕುಮಾರೇಶ ಬಿನ್ನಾಳ, ಸಂಜನಾ ಬೆಲ್ಲದ್ ಸೇರಿ ಅನೇಕ ಕಲಾವಿದರು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260329-35-1456664104

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.