ಕುಮಟಾ: ‘ಕೆನರಾ ಕಾಲೇಜು ಸೊಸೈಟಿಯ ಡಾ.ಎ.ವಿ.ಬಾಳಿಗಾ ಕಲಾ– ವಿಜ್ಞಾನ ಕಾಲೇಜು ವಾಚನಾಲಯ ಹಾಗೂ ಪ್ರಯೋಗಶಾಲೆ ರಾಜ್ಯದಲ್ಲಿ ಅತ್ಯುತ್ತಮ ಗುಣಮಟ್ಟ ಹೊಂದಿದ್ದು, ಇಂಥ ಸೌಲಭ್ಯಗಳನ್ನು ಬಳಕೆ ಮಾಡಿಕೊಂಡು ಸಂಸ್ಥೆಯ ವಿದ್ಯಾರ್ಥಿಗಳು ಶೈಕ್ಷಣಿಕ ಸಾಧನೆ ಮಾಡಲು ಮುಂದೆ ಬರಬೇಕು’ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.

ಅತ್ಯುತ್ತಮ ಶೈಕ್ಷಣಿಕ ಸಾಧನೆ ಮಾಡಿದ ಕೆನರಾ ಕಾಲೇಜು ಸೊಸೈಟಿಯ ಶಿಕ್ಷಣ ಸಂಸ್ಥೆ ಡಾ.ಎ.ವಿ. ಬಾಳಿಗಾ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆಯ ಎಸ್.ಎಸ್.ಎಲ್.ಸಿ ಮೊದಲ ಬ್ಯಾಚ್ ವಿದ್ಯಾರ್ಥಿಗಳು ಹಾಗೂ ಡಾ. ಎ.ವಿ. ಬಾಳಿಗಾ ಪದವಿ ಕಾಲೇಜಿನ ಬಿಎಸ್ಸಿ ಅಂತಿಮ ವಿದ್ಯಾರ್ಥಿಗಳ ಗೌರವ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಕ್ಷೇತ್ರ ಶಿಕ್ಷಣಾಧಿಕಾರಿ ಉದಯ ನಾಯ್ಕ, ‘ಎಸ್.ಎಸ್.ಎಲ್.ಸಿವರೆಗೆ ಶಾಲೆಯಲ್ಲಿ ಶಿಕ್ಷಕರು, ಮನೆಯಲ್ಲಿ ಹೆತ್ತವರು ವಿದ್ಯಾರ್ಥಿಗಳ ಬೆನ್ನ ಹಿಂದೆ ನಿಂತು ಓದಿಗೆ ನೆರವಾಗುತ್ತಿದ್ದರು. ಪಿಯುಸಿ ಶಿಕ್ಷಣಕ್ಕೆ ಹೊರಗೆ ಹೋಗುವ ವಿದ್ಯಾರ್ಥಿಗಳು ತಮಗೆ ಸಿಗುವ ಹೆಚ್ಚಿನ ಸ್ವಾತಂತ್ರ್ಯವನ್ನು ಓದಿಗೆ ಬಳಸಿಕೊಂಡರೆ ಮಾತ್ರ ಯಶಸ್ಸು ಸಾಧ್ಯ’ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಸಂಸ್ಥೆಯ ದಿಶಾಂತ ನಾಯ್ಕ, ಬಿಎಸ್ಸಿ ಅಂತಿಮ ವರ್ಷದಲ್ಲಿ ಕರ್ನಾಟಕ ವಿವಿಗೆ ಪ್ರಥಮ ರ್ಯಾಂಕ್ ಪಡೆದ ಶ್ವೇತಾ ಭಟ್ಟ ಸೆರಿದಂತೆ ಸಾಧನೆ ಮಾಡಿದ ಅನೇಕ ವಿದ್ಯಾರ್ಥಿಗಳಿಗೆ ಹಾಗೂ ಅವರಿಗೆ ನೆರವಾದ ಶಿಕ್ಷಕರಿಗೆ ಸೇರಿ ಒಟ್ಟು ₹9 ಲಕ್ಷ ನಗದು ಬಹುಮಾನ ನೀಡಿ ಗೌರವಿಸಲಾಯಿತು.

ಸಂಸ್ಥೆಯ ಪದಾಧಿಕಾರಿಗಳಾದ ಆರ್.ಆರ್. ಕಾಮತ್, ಹನುಮಂತ ಶಾನಭಾಗ, ವೈ.ವಿ. ಶಾನಭಾಗ, ಮುರಳಿಧರ ಪ್ರಭು, ವಿ.ಎಚ್. ನಾಯಕ ಬೆಣ್ಣೆ, ರೋಟರಿ ಅಧ್ಯಕ್ಷ ಕಿರಣ ನಾಯಕ, ವಿಜಯಕುಮಾರ ಪೈ, ಪ್ರಾಚಾರ್ಯೆ ಪ್ರೀತಿ ಭಂಡಾರಕರ್, ಎ.ಪಿ. ಶಾನಭಾಗ, ಜಿ.ಡಿ. ಭಟ್ಟ, ಗಿರೀಶ್ ನಾಯಕ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260504-20-1964226199

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.