ಕುಂದಾಪುರ: ಚಿಕ್ಕಂದಿನಲ್ಲೇ ಮಕ್ಕಳಿಗೆ ಸಂಸ್ಕಾರ, ಸಂಸ್ಕೃತಿಯನ್ನು ಕಲಿಸಿದಾಗ ಸಮಾಜದಲ್ಲಿ ದೌರ್ಜನ್ಯ ಕಡಿಮೆಯಾಗುತ್ತದೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಹೇಳಿದರು.

ಜಿಲ್ಲಾ ಚೈತನ್ಯ ಸ್ತ್ರೀಶಕ್ತಿ ಒಕ್ಕೂಟ, ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟ, ಉಡುಪಿ ಜಿಲ್ಲಾ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘ ಉಡುಪಿ ಹಾಗೂ ವಿವಿಧ ಸಂಘಟನೆಯ ಸಹಯೋಗದೊಂದಿಗೆ ಭಾನುವಾರ ತೆಕ್ಕಟ್ಟೆಯ ದುರ್ಗಾಪರಮೇಶ್ವರಿ ಕಲ್ಯಾಣ ಮಂಟಪದಲ್ಲಿ ನಡೆದ ಮಹಿಳಾ ಸ್ಪಂದನಾ ಸಮಾವೇಶ ‘ನಿಮ್ಮ ದೂರು ನಮ್ಮ ಪರಿಹಾರ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಉಡುಪಿ ಜಿಲ್ಲಾ ಚೈತನ್ಯ ಸ್ತ್ರೀ ಶಕ್ತಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಪ್ರೇಮಾ ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಮಾಜಿ ಸದಸ್ಯೆಯರಾದ ಗೀತಾಂಜಲಿ ಸುವರ್ಣ, ಶ್ರೀಲತಾ ಸುರೇಶ ಶೆಟ್ಟಿ, ವಿಕಲಚೇತನ ಅಧಿಕಾರಿ ರತ್ನಾ, ರಾಜ್ಯ ಸ್ಟೇಟ್ ಹೋಂ ಅಧೀಕ್ಷಕಿ ಪುಷ್ಪಾರಾಣಿ, ಸಿಡಿಪಿಒ ಉಮೇಶ್ ಕೋಟ್ಯಾನ್ ಇದ್ದರು.

ತೆಕ್ಕಟ್ಟೆ ಮಹಾಲಿಂಗೇಶ್ವರ ದೇವಸ್ಥಾನದಿಂದ ತೆಕ್ಕಟ್ಟೆ ದುರ್ಗಾಪರಮೇಶ್ವರಿ ಕಲ್ಯಾಣ ಮಂಟಪದ ತನಕ ಮಹಿಳೆಯರಿಂದ ಚೆಂಡೆ ವಾದನ ಹಾಗೂ ಕಲಶ ಹಿಡಿದ ಮಹಿಳೆಯರೊಂದಿಗೆ, ಆರತಿ ಬೆಳಗಿ ಆಯೋಗದ ಅಧ್ಯಕ್ಷರನ್ನು ಸ್ವಾಗತಿಸಲಾಯಿತು. ನಾಗಲಕ್ಷ್ಮಿ ಚೌಧರಿ ಅವರನ್ನು ಸನ್ಮಾನಿಸಲಾಯಿತು. ಮಹಿಳೆಯರು ಹಾಗೂ ಸಾರ್ವಜನಿಕರು ಮನವಿ ಸಲ್ಲಿಸಿದರು. ಸಮಸ್ಯೆ ಬಗೆಹರಿಸಲು ನಾಗಲಕ್ಷ್ಮಿ ಸೂಚನೆ ನೀಡಿದರು.

ಹೇಮಾ ಜಗನ್ನಾಥ್ ಪ್ರಾರ್ಥಿಸಿದರು. ವಸಂತಿ ಕೊರೋಡ್ಕರ್ ಸ್ವಾಗತಿಸಿದರು. ಜ್ಯೋತಿ ಸಾಲಿಗ್ರಾಮ ನಿರೂಪಿಸಿದರು. ಸುಗುಣ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260529-28-569618469

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.