ಕುಂದಾಪುರ: ಇಲ್ಲಿಗೆ ಸಮೀಪದ ಮೂಡ್ಲಕಟ್ಟೆಯ ಐಎಂಜೆ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಐಎಂಜೆ ಇನ್ಸ್ಟಿಟ್ಯೂಟ್ ಆಫ್ ರಿಸರ್ಚ್ನ ಉದ್ಘಾಟನಾ ಸಮಾರಂಭ ನಡೆಯಿತು.

ಕಾರ್ಯಕ್ರಮದ ಅಂಗವಾಗಿ ಕ್ವಾಂಟಮ್ ಕಂಪ್ಯೂಟೇಶನ್, ಪ್ರಿಸಿಶನ್ ಇನ್ಸ್ಟ್ರುಮೆಂಟೇಶನ್ ಆ್ಯಂಡ್ ಎಮರ್ಜಿಂಗ್ ರಿಸರ್ಚ್ ಇನ್ಫ್ರಾಸ್ಟ್ರಕ್ಚರ್ಸ್ ವಿಷಯದ ಕುರಿತು ಆರಂಭವಾದ 2 ದಿನಗಳ ರಾಷ್ಟ್ರಮಟ್ಟದ ಶೃಂಗ ಸಭೆಯನ್ನು ಹೈದರಾಬಾದ್ನ ಟಿಐಎಫ್ಆರ್ ನಿರ್ದೇಶಕ ಪ್ರೊ.ಎಂ. ಕೃಷ್ಣಮೂರ್ತಿ ಉದ್ಘಾಟಿಸಿದರು.

ಅವರು ಕ್ವಾಂಟಮ್ ಕಂಪ್ಯೂಟೇಶನ್ ಕ್ಷೇತ್ರದ ಪ್ರಾಮುಖ್ಯತೆ ಹಾಗೂ ಪ್ರಸ್ತುತ ಅನ್ವೇಷಣಾ ವಲಯದಲ್ಲಿ ಇದರ ಕ್ರಾಂತಿಯ ಬಗ್ಗೆ ತಿಳಿಸಿದರು.

ದಿಕ್ಸೂಚಿ ಭಾಷಣ ಮಾಡಿದ ಪ್ರೊ. ಸಪ್ತರ್ಷಿ ಚೌಧರಿ ಅವರು ನ್ಯಾಷನಲ್ ಕ್ವಾಂಟಮ್ ಮಿಶನ್ ಬಗ್ಗೆ ವಿವರಿಸಿದರು. ಭಾರತದಲ್ಲಿ ಪ್ರಸ್ತುತ ಕ್ವಾಂಟಮ್ ಕಂಪ್ಯೂಟ್ ಇಕೊ ಸಿಸ್ಟಮ್ ಕುರಿತು ಮಾಹಿತಿ ನೀಡಿದರು.

ಕುವೆಂಪು ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಶರತ್ ಅನಂತಮೂರ್ತಿ, ‘ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳ ಶಿಕ್ಷಣ, ಸಂಶೋಧನೆಯ ಬಗ್ಗೆ ಸಮಾಜ, ಶಿಕ್ಷಣ ಸಂಸ್ಥೆಗಳು ಹೆಚ್ಚು ಜವಾಬ್ದಾರಿ ವಹಿಸಬೇಕು’ ಎಂದರು.

ಅಧ್ಯಕ್ಷತೆ ವಹಿಸಿದ್ದ ಐಎಂಜೆ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸಿದ್ಧಾರ್ಥ ಜೆ. ಶೆಟ್ಟಿ, ‘ಸಂಸ್ಥೆಯ ಹೊಸ ಮೈಲಿಗಲ್ಲಾಗಿ ರಿಸರ್ಚ್ ಸೆಂಟರ್ ಸ್ಥಾಪಿಸಿರುವುದು ಹೆಮ್ಮೆ ತಂದಿದೆ. ವಿದ್ಯಾರ್ಥಿಗಳು ಸದುಪಯೋಗ ಮಾಡಿಕೊಂಡು ಶೈಕ್ಷಣಿಕ ಅಭಿವೃದ್ಧಿಯತ್ತ ಗಮನ ವಹಿಸಬೇಕು’ ಎಂದು ಹೇಳಿದರು.

ಪರಮಾಣು ಭೌತಶಾಸ್ತ್ರಜ್ಞೆ ಪುಷ್ಪಾ ಎಂ. ರಾವ್ ಅವರನ್ನು ಸನ್ಮಾನಿಸಲಾಯಿತು. ಐಎಂಜೆಐಆರ್ ನಿರ್ದೇಶಕ ಸತ್ಯಜಿತ್ ಅವರು ರಿಸರ್ಚ್ ಸೆಂಟರ್ ಧ್ಯೇಯೋದ್ದೇಶಗಳ ಬಗ್ಗೆ ಮಾತನಾಡಿದರು. ಅಕಾಡೆಮಿಕ್ ನಿರ್ದೇಶಕ ಎಸ್.ಎನ್. ಭಟ್ ಸ್ವಾಗತಿಸಿದರು. ಸಂಸ್ಥೆಯ ಬ್ರ್ಯಾಂಡ್ ಬಿಲ್ಡಿಂಗ್ ನಿರ್ದೇಶಕ ರಾಮಕೃಷ್ಣ ಹೆಗಡೆ ವಂದಿಸಿದರು. ಪ್ರಾಧ್ಯಾಪಕಿ ನಿಖಿಲಾ ಪೈ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260414-126-485697433

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.