ಕುಂದಾಪುರ: ತಾಲ್ಲೂಕಿನ ಕೆರಾಡಿಯಲ್ಲಿ ಶ್ಯಾಮಲಾ ಮತ್ತು ಚಂದ್ರ ನಾಯ್ಕ್ ಅವರ ಪುತ್ರಿ ಹಾಗೂ ದ್ವಿತೀಯ ಪಿಯು ವಿದ್ಯಾರ್ಥಿನಿ ಸಿಂಚನಾ ಅವರಿಗೆ ಯಕ್ಷಗಾನ ಕಲಾರಂಗವು ವಿದ್ಯಾ ಪೋಷಕ್ ಯೋಜನೆಯಡಿ ನಿರ್ಮಿಸಿಕೊಟ್ಟ ಮನೆಯ ಉದ್ಘಾಟನೆ ಹಾಗೂ ಹಸ್ತಾಂತರ ಕಾರ್ಯಕ್ರಮ ಈಚೆಗೆ ನಡೆಯಿತು.

ಮನೆ ಉದ್ಘಾಟಿಸಿದ ಕೊಲ್ಲೂರು ಮೂಕಾಂಬಿಕಾ ದೇವಳದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಕೆರಾಡಿ ಚಂದ್ರಶೇಖರ ಶೆಟ್ಟಿ ಮಾತನಾಡಿ, ಯಕ್ಷಗಾನ ಕಲಾರಂಗ ವಿದ್ಯಾ ಪೋಷಕ್ ಯೋಜನೆಯ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯ ಪಾರದರ್ಶಕತೆ ವೇದ್ಯ ವಾಯಿತು. ಸಮಾಜದಲ್ಲಿ ನೊಂದವರಿಗೆ ಇವರು ಸ್ಪಂದಿಸುವ ರೀತಿ ಎಲ್ಲ ಸಂಸ್ಥೆಗಳಿಗೆ ಮಾದರಿ. ಸಿಂಚನಾ ಚೆನ್ನಾಗಿ ಕಲಿತು ಮುಂದೆ ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಹಂತಕ್ಕೆ ಏರಬೇಕು ಎಂದು ಸಲಹೆ ನೀಡಿದರು.

ಆರ್ಕಿಟೆಕ್ಟ್ ಯೋಗಿಶ್ಚಂದ್ರಧರ್, ಎಂಜಿನಿಯರ್ಗಳಾದ ಎಂ.ಗೋಪಾಲ್ ಭಟ್, ಪಾಂಡು ರಂಗ ಆಚಾರ್, ಎಂಜಿನಿಯರ್ ಹರಿಪ್ರಸಾದ್ ಶೆಟ್ಟಿ, ಪಿ.ಎನ್.ಶಶಿಧರ್ ಮಾತನಾಡಿ, ಗ್ರಾಮೀಣ ಪ್ರದೇಶದ ಕನ್ನಡ ಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿಗಳು ಕೀಳರಿಮೆಗೆ ಒಳಗಾಗಬಾರದು. ಸಾಧನೆಯ ಮೂಲಕ ಸಮಾಜದಲ್ಲಿ ಪ್ರತಿಷ್ಠೆಯ ಸ್ಥಾನ ಗಳಿಸಿದ್ದಕ್ಕೆ ನಾವೆಲ್ಲಾ ಉದಾಹರಣೆ. ಕಲಾರಂಗದಂತಹ ಸಂಸ್ಥೆ ಹಾಗೂ ವಿದ್ಯಾ ಪೋಷಕ್ನಂತಹ ಯೋಜನೆ ನಿಮ್ಮೊಂದಿಗೆ ಇರುವಾಗ ಅಳುಕಬೇಕಾಗಿಲ್ಲ. ಸಿಂಚನಾ ಚೆನ್ನಾಗಿ ಓದಿ, ಮುಂದೆ ದಾನಿಯಾಗಲಿ ಎಂದರು.

ಸಂಸ್ಥೆಯ ಉಪಾಧ್ಯಕ್ಷ ವಿ.ಜಿ ಶೆಟ್ಟಿ, ಹಿರಿಯ ಸದಸ್ಯ ಯು.ವಿಶ್ವನಾಥ್ ಶೆಣೈ, ಎಂಜಿನಿಯರ್ಗಳಾದ ವಿನಯ ಕುಮಾರ್, ನಿರಂಜನ್, ಮಲ್ಲಿಕಾ ಯೋಗೀಶ್ಧರ್, ಶ್ರೀಲಕ್ಷ್ಮಿ ಜಿ.ಭಟ್, ಸುರೇಖಾ ಪಿ.ಆಚಾರ್ಯ, ಪದ್ಮಿನಿ ಹರಿಪ್ರಸಾದ್ ಶೆಟ್ಟಿ, ಶಿಲ್ಪಾ ಶಶಿಧರ್, ಗಿರೀಶ್ ಚಂದ್ರ ಧರ್, ದಿವ್ಯಾ ಗಿರೀಶ್ ಧರ್, ರಕ್ಷಣ್ ಆಚಾರ್ಯ, ಸಂಸ್ಥೆಯ ಸದಸ್ಯರಾದ ಭುವನಪ್ರಸಾದ ಹೆಗ್ಡೆ, ಅನಂತರಾಜ ಉಪಾಧ್ಯ, ಕೃಷ್ಣಮೂರ್ತಿ ಭಟ್, ಜಯರಾಮ್ ಪಡಿಯಾರ್, ವಿನೋದಾ ಎಂ, ಡಾ.ಪ್ರತಿಮಾ ಆಚಾರ್ಯ, ಸುದರ್ಶನ ಬಾಯರಿ, ವಿಶ್ವನಾಥ್, ಮಾಲತಿ ಹಾಜರಿದ್ದರು.

ಯಕ್ಷಗಾನ ಕಲಾರಂಗ ಅಧ್ಯಕ್ಷ ಎಂ.ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ.ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260517-28-831876433

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.