ಕುಣಿಗಲ್: ತಂತ್ರಜ್ಞಾನವು ಗ್ರಾಹಕರ ಖರೀದಿ ವರ್ತನೆಯ ಮೇಲೆ ಪ್ರಭಾವ ಬೀರುತ್ತಿದೆ. ಡಿಜಿಟಲ್ ಕ್ರಾಂತಿ ಗ್ರಾಹಕರಿಗೆ ಅಗತ್ಯದ ವಸ್ತುಗಳು ಕೈಗೆಟುಕುವ ಸ್ಪರ್ಧಾತ್ಮಕ ದರದಲ್ಲಿ ದೊರೆಯುತ್ತಿವೆ. ಆಧುನಿಕ ಮಾರುಕಟ್ಟೆಯು ಡಿಜಿಟಲ್ ಕ್ರಾಂತಿಯಿಂದ ವ್ಯವಹಾರ ವಿಸ್ತರಿಸಿ, ವ್ಯವಹಾರ ವೃದ್ಧಿಯಾಗುತ್ತದೆ ಎಂದು ಪ್ರಭಾರ ಪ್ರಾಂಶುಪಾಲ ಸಿ.ಆರ್.ಮನೋಜ್ ತಿಳಿಸಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಐ.ಕ್ಯೂ.ಎ.ಸಿ ಮತ್ತು ವಾಣಿಜ್ಯಶಾಸ್ತ್ರ ವಿಭಾಗದ ವತಿಯಿಂದ ಏರ್ಪಡಿಸಿದ್ದ ಗ್ರಾಹಕರ ವರ್ತನೆ ಮತ್ತು ಆಧುನಿಕ ಮಾರುಕಟ್ಟೆ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಗ್ರಾಹಕರ ಅವಶ್ಯಕತೆಗನುಗುಣವಾಗಿ ಸರಕು ಮತ್ತು ಸೇವೆಗಳ ಪೂರೈಸಲು ತಂತ್ರಜ್ಞಾನವು ಮಾರುಕಟ್ಟೆಗೆ ಪೂರಕ ವಾತಾವರಣ ಸೃಷ್ಟಿಸುತ್ತಿದೆ ಎಂದರು.

ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ .ಟಿ.ಎನ್.ನರಸಿಂಹಮೂರ್ತಿ, ಆಧುನಿಕ ಮಾರುಕಟ್ಟೆಯು ಗ್ರಾಹಕರಿಗೆ ವಿನೂತನ ಉತ್ಪನ್ನ ಮತ್ತು ಸೇವೆಗಳನ್ನು ಒದಗಿಸುತ್ತಿವೆ. ಅಂತರ್ಜಾಲ ತಾಣಗಳು ಸರಕು ಸೇವೆಗಳ ಗುಣಲಕ್ಷಣಗಳನ್ನು ಪರಾಮರ್ಶಿಸಲು ಸಹಕರಿಸಿ, ಜಾಗತಿಕ ಮಾರುಕಟ್ಟೆ ಒದಗಿಸುತ್ತಿವೆ. ಸಂತೃಪ್ತ ಗ್ರಾಹಕರು ನೀಡಿದ ರೇಟಿಂಗ್ ಆಧರಿಸಿ ಗ್ರಾಹಕರು ಖರೀದಿ ಮಾಡಬೇಕೊ, ಬೇಡವೋ ಎಂದು ನಿರ್ಧರಿಸುತ್ತಾರೆ. ಯುವಜನರು ತಂತ್ರಜ್ಞಾನ ಬಳಸಿ ನಾವೀನ್ಯತೆಯ ಉದ್ಯಮ ಕಟ್ಟಿ ಉದ್ಯಮಿಗಳಾಗಿ ಎಂದು ಸಲಹೆ ನೀಡಿದರು.

ಸಂಪನ್ಮೂಲ ವ್ಯಕ್ತಿಗಳಾದ ಟಿ.ಕೆ.ಎನ್ ಫೌಂಡೇಶನ್ನಿನ ಪದ್ಮಶ್ರೀ ನಿರ್ವಹಣಾ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕರಾದ ಶೋಭಾ ಉಪನ್ಯಾಸಕರಾದ ಕುಮಾರಗೌಡ, ಕೆ.ಎಸ್.ಮಹಾಲಕ್ಷ್ಮಿ, .ಕುಸುಮಾ, ವಿದ್ಯಾ, ಮೇಘ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-17-233156428

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.