ಕುರುಗೋಡು: ‘ಗ್ರಾಮದ ಮಕ್ಕಳು ಬೇಸಿಗೆ ಶಿಬಿರದಲ್ಲಿ ಭಾಗವಹಿಸಿ ಸದುಪಯೋಗ ಪಡಿಸಿಕೊಳ್ಳಬೇಕು’ ಎಂದು ಪಿಡಿಒ ದೇವರಾಜ್ ಹೇಳಿದರು.

ತಾಲ್ಲೂಕಿನ ಎಚ್.ವೀರಾಪುರ ಗ್ರಾಮದಲ್ಲಿ ಅಜೀಂ ಪ್ರೇಮ್ ಜಿ ಫೌಂಡೇಶನ್ ಮತ್ತು ಗ್ರಾಮ ಪಂಚಾಯಿತಿಯಿಂದ ಈಚೆಗೆ ಆರಂಭಗೊಂಡ ಬೇಸಿಗೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

‘15 ದಿನಗಳ ಕಾಲ ಜರುಗುವ ಬೇಸಿಗೆ ಶಿಬಿರದ ಅರಿವು ಕೇಂದ್ರದಲ್ಲಿ ಭಾಗವಹಿಸಿದ ಮಕ್ಕಳಿಗೆ ಇಂಗ್ಲಿಷ್ ಭಾಷೆ ಮತ್ತು ಗಣಿತ ವಿಷಯ ಕುರಿತು ಕಲಿಸಿಕೊಡಲಿದ್ದಾರೆ. ವಿಷಯಗಳಿಗೆ ಸಂಬಂಧಿಸಿದ ಚಟುವಟಿಕೆ ಆಧಾರಿತ ಶಿಕ್ಷಣ ನೀಡಲಿದ್ದಾರೆ. ಸ್ವಷ್ಟ ಓದು, ಶುದ್ಧ ಬರಹ, ಅಭಿವ್ಯಕ್ತಿ ಕೌಶಲ ಅಭಿವೃದ್ಧಿ ಪಡಿಸಿಕೊಳ್ಳಲು ಶಿಬಿರದಲ್ಲಿ ಅವಕಾಶವಿದೆ. ಮಕ್ಕಳು ನಿರಂತರವಾಗಿ ಹಾಜರಾಗಿ ಶಿಬಿರದ ಸದುಪಯೋಗ ಪಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ತಾಲ್ಲೂಕು ಪಂಚಾಯಿತಿ ಕಚೇರಿ ಸಿಬ್ಬಂದಿ ಮಲ್ಲಿಕಾರ್ಜುನ, ಕಾರ್ಯದರ್ಶಿ ಎನ್.ಬಸವರಾಜ, ಸಂಪನ್ಮೂಲ ವ್ಯಕ್ತಿ ಪಿ. ರಂಜಾನ್ ಬೀ, ಅತಿಥಿ ಶಿಕ್ಷಕ ಬಿ. ಮೋಹನ್ ಮತ್ತು ಗ್ರಂಥಪಾಲಕ ಮಲ್ಲಿಕಾರ್ಜುನ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260420-25-1766189437

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.