ಕುಷ್ಟಗಿ: ‘ಉತ್ತಮ, ಮೂಲ ಶಿಕ್ಷಣ ಬದುಕನ್ನು ಸಾರ್ಥಕಗೊಳಿಸುತ್ತದೆ, ದೇಶಕ್ಕೆ ಅಗತ್ಯವಾಗಿರುವ ಉತ್ತಮ ನಾಗರಿಕರನ್ನು ರೂಪಿಸುವ ಶಕ್ತಿ ಶಿಕ್ಷಣಕ್ಕಿದೆ’ ಎಂದು ಸಾಹಿತಿ ಇಮಾಮಸಾಹೇಬ್ ಹಡಗಲಿ ಹೇಳಿದರು.

ತಾಲ್ಲೂಕು ಅಂಜುಮನ್ ಇಸ್ಲಾಂ ಸಮಿತಿ ವತಿಯಿಂದ ಪಟ್ಟಣದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಅಲ್ಪಸಂಖ್ಯಾತ ಮುಸ್ಲಿಂ ದ್ವಿತೀಯ ಪಿಯು ಮತ್ತು ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಮತ್ತು ಶೈಕ್ಷಣಿಕ ಜಾಗೃತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.

10ನೇ ತರಗತಿ ನಂತರ ವಿಜ್ಞಾನ ವಿಭಾಗ ಆಯ್ಕೆ ಮಾಡಿಕೊಂಡರೆ ಹೆಚ್ಚಿನ ಅವಕಾಶಗಳಿವೆ. ಸ್ಮರ್ಧಾತ್ಮಕ ಯುಗ ಆಗಿರುವುದರಿಂದ ಬಹುಮುಖ ದೃಷ್ಟಿಕೋನದಲ್ಲಿ ಕೋರ್ಸ್ ಆಯ್ಕೆ ಮಾಡಿಕೊಳ್ಳಿ’ ಎಂದು ಸಲಹೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಮರೇಗೌಡ ಬಯ್ಯಾಪುರ, ‘ವ್ಯಕ್ತಿತ್ವದ ಬೆಳವಣಿಗೆ ಶಿಕ್ಷಣದಿಂದ ಮಾತ್ರ ಸಾಧ್ಯ, ಮೌಢ್ಯ, ಕಂದಾಚಾರ, ಅಂಧಶ್ರದ್ಧೆ, ಬಡತನ, ನಿರುದ್ಯೋಗ, ಅನಕ್ಷರತೆ ಸೇರಿದಂತೆ ಸಾಮಾಜಿಕ ರೋಗಗಳಿಗೆ ಶಿಕ್ಷಣ ಮದ್ದಾಗಬಲ್ಲದು’ ಎಂದರು.

ಪೊಲೀಸ್ ಅಧಿಕಾರಿ ಐ.ಜಿ.ಮ್ಯಾಗೇರಿ ಮಾತನಾಡಿ, ‘ದೇಶದಲ್ಲಿನ ಮುಸ್ಲೀಮರು ಎದುರಿಸುತ್ತಿರುವ ಸಮಸ್ಯೆ, ಸವಾಲುಗಳಿಗೆ ಶಿಕ್ಷಣ ಕಡಿಮೆ ಪ್ರಮಾಣದಲ್ಲಿರುವುದೇ ಕಾರಣ. ಸಾಮಸ್ಯ, ಸೌಹಾರ್ದ ನೆಲೆಯಲ್ಲಿ ಬದುಕು ಕಟ್ಟಿಕೊಳ್ಳುವುದಕ್ಕೆ ಸುಶಿಕ್ಷಿತರಾಗುವುದು ಅಗತ್ಯ’ ಎಂದು ಹೇಳಿದರು.

ತುಂಗಭದ್ರಾ ಕಾಡಾ ಅಧ್ಯಕ್ಷ ಹಸನಸಾಬ್ ದೋಟಿಹಾಳ ಮಾತನಾಡಿದರು.

ಮಾಜಿ ಶಾಸಕ ಕೆ.ಶರಣಪ್ಪ, ಅಂಜುಮನ್ ಸಮಿತಿ ಅಧ್ಯಕ್ಷ ಅಹಮದ್ ಹುಸೇನ್ ಆದೋನಿ, ಸೈಯದ್ ಖಾಜಾ ಮೈನುದ್ದೀನ್ ಮುಲ್ಲಾ ಇತರರು ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಬಸಾಪುರ, ಫಾದರ್ ಜಾನ್ ಪೀಟರ್, ಸಜ್ಜಾದಹುಸೇನ್, ಎಚ್.ಎಚ್.ಉಸ್ತಾದ್, ಎಚ್.ಆರ್.ಶೇಖ್, ಫಝಲ್ ಅಜೀಮ್, ಅಹ್ಮದ್ ಹುಸೇನ್, ರಿಜ್ವಾನ್ಸಾಬ್, ಜಾಫರ್ ಸಾಧಿಕ್ ಇತರರು ಇದ್ದರು. ಜೀವನಸಾಬ್ ವಾಲಿಕಾರ್ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-35-1270695064

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.