ಕುಷ್ಟಗಿ: ‘ಸಾಧನೆ ಮತ್ತು ಬದುಕಿನ ಯಶಸ್ಸಿನ ಹಾದಿ ಸುಗಮವಾಗಬೇಕಾದರೆ ಕಠಿಣವಾದರೂ ಪರಿಶ್ರಮದಿಂದ ಮಾತ್ರ ಸಾಧ್ಯ’ ಎಂದು ಸಿಪಿಐ ವಿಶ್ವನಾಥ ಹಿರೇಗೌಡ ಹೇಳಿದರು.

ಪಟ್ಟಣದ ಹೊಳೆಯಮ್ಮ ಮಹಿಳಾ ಪದವಿ ಕಲಾ ಮಹಾವಿದ್ಯಾಲಯಲ್ಲಿ ಬಿ.ಎ.ಅಂತಿಮ ವರ್ಷದ ವಿದ್ಯಾರ್ಥಿನಿಯರನ್ನು ಬೀಳ್ಕೊಡುವ ಸಂದರ್ಭದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ಸಾಧನೆಗೆ ತಾತ್ಕಾಲಿಕ ಪರಿಹಾರ ಮಾರ್ಗಗಳು ಇಲ್ಲ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿ, ಯಾರಾದರೂ ಸಮಾಜಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆಂದರೆ ಅವರು ಪರಿಶ್ರಮದ ದಾರಿ ಸವೆಸಿದ್ದನ್ನು ಗಮನಿಸಬೇಕಾಗುತ್ತದೆ. ಸಮಾಜದಲ್ಲಿ ಶಾಂತಿ, ನೆಮ್ಮದಿಯಿಂದ ಜನರು ಬದುಕಬೇಕೆಂದರೆ ಪ್ರತಿ ಹಳ್ಳಿಗಳೂ ಮದ್ಯ ಪಾನ ಮುಕ್ತಗೊಳ್ಳಬೇಕು’ ಎಂದರು.

ರಾಷ್ಟ್ರೀಯ ಸೇವಾ ಯೋಜನೆ ಜಿಲ್ಲಾ ನೋಡಲ್ ಅಧಿಕಾರಿ ನಾಗರಾಜ ಹೀರಾ ಮಾತನಾಡಿ, ‘ಮಹಿಳೆಯರು ಸಾಧನೆ ಗೈಯದ ಕ್ಷೇತ್ರಗಳಲ್ಲಿ, ಪ್ರತಿಯೊಬ್ಬರೂ ಸಿಕ್ಕ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಸಮಾಜದಲ್ಲಿ ಉನ್ನತ ಸ್ಥಾನದಲ್ಲಿ ಗುರುತಿಸಿಕೊಳ್ಳಲು ಸಾಧ್ಯ’ ಎಂದು ಹೇಳಿದರು.

ನಿವೃತ್ತ ಪ್ರಾಚಾರ್ಯ ಡಿ.ಬಿ. ಗಡೇದ ಮಾತನಾಡಿ, ‘ಪ್ರಸಕ್ತ ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರು ಬೇರೆ ಬೇರೆ ರೀತಿ ಕಷ್ಟ ಸಂಕೋಲೆಗಳನ್ನು ಅನುಭವಿಸುತ್ತಿದ್ದಾರೆ. ಮಹಿಳೆಯರಿಗೆ ಪರಿಪೂರ್ಣ ಶಿಕ್ಷಣ ದೊರೆತರೆ ಮಾತ್ರ ಸಂಕಷ್ಟಗಳಿಂದ ಹೊರಬರಬಹುದು’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹನುಮಂತಪ್ಪ ಚೌಡ್ಕಿ ಮಾತನಾಡಿ, ‘ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರವನ್ನೂ ವಿದ್ಯಾರ್ಥಿನಿಯರು ಮೈಗೂಡಿಸಿಕೊಂಡು ಮೂಲಕ ಹೆತ್ತವರಿಗೆ ಕೀರ್ತಿ ತರಬೇಕು’ ಎಂದು ಹೇಳಿದರು.

ಪ್ರಾಚಾರ್ಯ ತಿಪ್ಪಣ್ಣ ಹುಲಿಯಾಪುರ ವಾರ್ಷಿಕ ವರದಿ ಮಂಡಿಸಿ ಮಾತನಾಡಿದ ಅವರು, ‘ಕನಿಷ್ಠ ಶುಲ್ಕ ಗರಿಷ್ಠ ಕಲಿಕೆ ತತ್ವದೊಂದಿಗೆ ಕಾಲೇಜಿನಲ್ಲಿ ಪಠ್ಯ ಹಾಗೂ ಪಠ್ಯೇತ ಚಟುವಟಿಕೆಯನ್ನು ಹಮ್ಮಿಕೊಳ್ಳಲಾಗುತ್ತಿದೆ. ಅದರಿಂದ ಪ್ರತಿ ವಿದ್ಯಾರ್ಥಿನಿಯರು ಭವಿಷ್ಯದ ಬದುಕಿನಲ್ಲಿ ಸಬಲರಾಗಬೇಕೆಂಬ ಚಿಂತನೆ ಸಂಸ್ಥೆಯದ್ದಾಗಿದೆ’ ಎಂದು ವಿವರಿಸಿದರು.

ಉಪನ್ಯಾಸಕ ಶೇಖಬಾಬ್, ಪೀಕಾರ್ಡ್ ಬ್ಯಾಂಕ್ ನಿರ್ದೇಶಕ ಮಹಾಲಿಂಗಪ್ಪ ದೋಟಿಹಾಳ ಇತರರು ಮಾತನಾಡಿದರು. ಅಭಿನಂದನ ಗೋಗಿ, ಸಿದ್ದರಾಮಪ್ಪ ವಂದಾಲಿ, ಸುಂದರಕುಮಾರ ಚೌಡ್ಕಿ, ನಾಗರಾಜ ಹಳ್ಳಿಗುಡಿ, ಈರಮ್ಮ ಮಡಿವಾಳ, ಶರಣಪ್ಪ ಮಡಿವಾಳ, ಬಸಪ್ಪ ಪೂಜಾರಿ, ಮಂಜುನಾಥ ತಾಳಮರದ, ಶಿವಮಲ್ಲಮ್ಮ ಕಂದಕೂರ, ರಾಮಕೃಷ್ಣ ಬೇವೂರ, ಸಮೀನಾ ಬೇಗಂ, ಸಂಗಪ್ಪ ಬಿಳಿಯಪ್ಪನವರ, ವಿಜಯಲಕ್ಷ್ಮಿ ಪಾಟೀಲ, ಸುಜಾತ ಹಡಪದ, ಶಿವನಮ್ಮ ವಣಗೇರಿ ಇತರರು ಹಾಜರಿದ್ದರು.

ವಿದ್ಯಾರ್ಥಿನಿಯರಾದ ವಿಜಯಲಕ್ಷ್ಮಿ, ನೇತ್ರಾ ಪಾಟೀಲ ಸ್ವಾಗತಿಸಿದರು. ಸುಷ್ಮಿತಾ ಮುಳ್ಳೂರು, ಅನಿತಾ ನಿರೂಪಿಸಿರು. ಲಕ್ಷ್ಮೀಬಾಯಿ ವಂದಿಸಿದರು. ವಿದ್ಯಾರ್ಥಿನಿ ರಾಜೇಶ್ವರಿ ಕವನ ವಾಚಿಸಿದರು, ನಂತರ ವಿದ್ಯಾರ್ಥಿನಿಯರು ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತಪಡಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260503-35-1855541541

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.