ಕುಷ್ಟಗಿ: ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಪಾಲಕರು ತಮ್ಮ ಮಕ್ಕಳನ್ನೇ ಆಸ್ತಿಯನ್ನಾಗಿಸಲು ಸಂಕಲ್ಪ ಮಾಡಬೇಕು ಎಂದು ಬಿಜಕಲ್ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ಬಸವರಾಜ ಬಾಗಲಿ ಹೇಳಿದರು.

ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಬಿಜಕಲ್ ಸರ್ಕಾರಿ ಪ್ರೌಢಶಾಲೆಗೆ ಶೇಕಡ ನೂರರಷ್ಟು ಫಲಿತಾಂಶ ಬಂದಿರುವ ಕಾರಣಕ್ಕೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗಾಗಿ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅಗತ್ಯ ಮೂಲಸೌಲಭ್ಯ ಮತ್ತು ಪರಿಣತಿ, ಅನುಭವಿ ಶಿಕ್ಷಕರ ಮಾರ್ಗದರ್ಶನ, ಬೋಧನೆಯಿಂದ ಮಕ್ಕಳು ಸಾಧನೆಗೈಯಲು ಸಾಧ್ಯವಾಗಿದೆ. ಹಾಗಾಗಿ ಗ್ರಾಮಸ್ಥರು ತಮ್ಮ ಮಕ್ಕಳನ್ನು ಇದೇ ಶಾಲೆಗೆ ಸೇರಿಸುವಂತೆ ಹೇಳಿದರು.

ಶಿಕ್ಷಕರಾದ ಹಂಪಯ್ಯ ಜಂಬಲದಿನ್ನಿ, ಸಂತೋಷ ನಾಗಲೋಟಿ, ವಿಜಯಕುಮಾರ ಬಿರಾದಾರ, ಪ್ರಸನ್ನಕುಮಾರ, ಶಶಿಧರ ಗೊರಬಾಳ, ವಿಜಯಲಕ್ಷ್ಮಿ ದೇಸಾಯಿ, ಗ್ರಾಮಸ್ಥರಾದ ಭೀಮಣ್ಣ ಹೂಗಾರ, ಕುಂಟೆಪ್ಪ ತಳವಾರ ಮಾತನಾಡಿದರು.

ಫಲಿತಾಂಶದಲ್ಲಿನ ಸಾಧನೆಗಾಗಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಎಸ್ಡಿಎಂಸಿ ಅಧ್ಯಕ್ಷ ವೀರನಗೌಡ, ಗೋಕುಲ ಕೃಷ್ಣಪ್ಪ, ಮಾರುತಿ ಭೋವಿ, ಬಸವಂತಪ್ಪ ಕರಿಚಂದನ, ಹನುಮಂತ ಭೋವಿ, ಮಲ್ಲಮ್ಮ ವೀರಾಪುರ, ನಾಗಮ್ಮ ಕಂಬಳಿ, ಸಾವಿತ್ರಿ ತಳುವಗೇರಾ, ಮಳ್ಳಪ್ಪ ಕಲಕೇರಿ, ನೀಲಕಂಠಪ್ಪ ಕಮ್ಮಾರ, ಸಂಗಪ್ಪ ಕೊಪ್ಪಳ, ಮಲ್ಲಿಕಾರ್ಜುನ ಉಪನಾಳ, ಶ್ರೀಧರ ವಂಕಲಕುಂಟಿ ಹಾಜರಿದ್ದರು.

ಕಲಾವಿದ ನರಸಿಂಹದಾಸ ತೋಟದ ಶೈಕ್ಷಣಿಕ ಜಾಗೃತಿ ಗೀತೆ ಪ್ರಸ್ತುತಪಡಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260505-35-97107292

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.