ಕುಷ್ಟಗಿ: ಮತದಾರರಪಟ್ಟಿ ಅಲ್ಲ ಅಷ್ಟೇ ಏಕೆ ಚುನಾವಣೆ ಪ್ರಕ್ರಿಯೆ ನಡೆಸಲು ಬಂದ ಚುನಾವಣಾಧಿಕಾರಿಗಳಿಗೆ ನೇಮಕ ಆದೇಶಪತ್ರವೂ ಇಲ್ಲ. ಹಾಗಾಗಿ ಶನಿವಾರ ಇಲ್ಲಿ ಆರಂಭಗೊಳ್ಳಬೇಕಿದ್ದ ತಾಲ್ಲೂಕು ಶಿಕ್ಷಕರ ಸಂಘದ ಆಡಳಿತ ಮಂಡಳಿ ನಿರ್ದೇಶಕರ ಆಯ್ಕೆಗೆ ಸಂಬಂಧಿಸಿದ ಚುನಾವಣೆ ಪ್ರಕ್ರಿಯೆಯೇ ಸ್ಥಗಿತಗೊಂಡಿತು.

ಚುನಾವಣೆಗೆ ಸಂಬಂಧಿಸಿದಂತೆ ಏ.1ರಂದೇ ರಾಜ್ಯ ಶಿಕ್ಷಕರ ಸಂಘದ ಚುನಾವಣಾಧಿಕಾರಿ ಮೆಹಬೂಬಪಾಷಾ ಮೂಲಿಮನಿ ಅಧಿಸೂಚನೆ ಹೊರಡಿಸಿದ್ದರು. ಏ.11-12 ರಂದು ನಾಮಪತ್ರ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿತ್ತು. ಏ.19ಕ್ಕೆ ಮತದಾನ ನಡೆಯಬೇಕಿತ್ತು. ಅದರ ಪ್ರಕಾರ ಸ್ಪರ್ಧಾಕಾಂಕ್ಷಿ ಶಿಕ್ಷಕರು ನಾಮಪತ್ರ ಸಲ್ಲಿಸಲು ತುದಿಗಾಲ ಮೇಲೆ ನಿಂತಿದ್ದರು. ಆದರೆ ಯಾವುದೇ ಸಿದ್ಧತೆ ಇಲ್ಲದೆ ಬರಿಗೈಯಲ್ಲಿ ಬಂದು ಗುರುಭವನದಲ್ಲಿ ಕುಳಿತಿದ್ದ ಚುನಾವಣಾಧಿಕಾರಿ ಶಿವನಗೌಡ ಜಾಲಿಹಾಳ ಮತ್ತು ಸಹಾಯಕ ಚುನಾವಣಾಧಿಕಾರಿ ಭೀಮಣ್ಣ ಗಡಾದ ಅವರ ಬಳಿ ಆಕ್ಷೇಪ ಹೊರಹಾಕಿದ ಶಿಕ್ಷಕರು ಅವರನ್ನು ತರಾಟಗೆ ತೆಗೆದುಕೊಂಡ ಘಟನೆಯೂ ನಡೆಯಿತು. ಅಲ್ಲದೆ ಚುನಾವಣಾಧಿಕಾರಿ ಬಳಿ ಇದ್ದ ನಾಮಪತ್ರ ನಮೂನೆಗಳನ್ನು ಕೆಲ ಶಿಕ್ಷಕರು ಬಲವಂತದಿಂದ ಕಿತ್ತುಕೊಂಡರು.

ಆಗಿದ್ದೇನು: ಶಿಕ್ಷಕರ ಸಂಘದ ಆಡಳಿತ ಮಂಡಳಿ ಅವಧಿ ಕಳೆದ ಡಿಸೆಂಬರ್ನಲ್ಲೇ ಅಂತ್ಯಗೊಂಡಿದ್ದು ರಾಜ್ಯದಾದ್ಯಂತ ಹೊಸದಾಗಿ ಆಡಳಿತ ಮಂಡಳಿ ಚುನಾವಣೆ ನಡೆಸಲು ಅಧಿಸೂಚನೆ ಹೊರಡಿಸಲಾಗಿತ್ತು. ಚುನಾವಣೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ನಾಮಪತ್ರ ಸಲ್ಲಿಸುವುದಕ್ಕೆ ಅನುಮೋದಿತ ಮತದಾರರ ಪಟ್ಟಿಯೇ ಚುನಾವಣಾಧಿಕಾರಿ ಬಳಿ ಇರಲಿಲ್ಲ. ಇನ್ನು ಇಂಥವರನ್ನೇ ಚುನಾವಣಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎನ್ನುವ ಬಗ್ಗೆ ರಾಜ್ಯ ಚುನಾವಣಾಧಿಕಾರಿ ಆದೇಶಪತ್ರಗಳನ್ನು ನೀಡಿರಲಿಲ್ಲ. ಆದರೆ ದೂರವಾಣಿ ಮೂಲಕ ಮಾಹಿತಿ ನೀಡಿ ಚುನಾವಣಾಧಿಕಾರಿಗಳಾಗಿ ಕರ್ತವ್ಯನಿರ್ವಹಿಸಿ ಎಂದೇ ಸೂಚಿಸಿದ್ದು ಅಚ್ಚರಿಗೆ ಕಾರಣವಾಗಿದೆ.

ತಾಲ್ಲೂಕು ಘಟಕ ಕಳಿಸಿದ್ದ ಮತದಾರರ ಪಟ್ಟಿಗೆ ಶಿಕ್ಷಕರ ಸಂಘದ ರಾಜ್ಯ ಚುನಾವಣಾಧಿಕಾರಿ ಅನುಮೋದಿಸಿ ಆನ್ಲೈನ್ ಮೂಲಕವಾದರೂ ಕಳಿಸಬಹುದು ಎಂದು ಶಿಕ್ಷಕರು, ಚುನಾವಣಾಧಿಕಾರಿಗಳು ಕಾದು ಕುಳಿತಿದ್ದರು. ಆದರೆ ಮಧ್ಯಾಹ್ನ 2 ಗಂಟೆಯಾದರೂ ಮತದಾರರ ಪಟ್ಟಿ ಮತ್ತು ಆದೇಶ ಪತ್ರ ಬಾರದ ಕಾರಣ ಚುನಾವಣೆ ಪ್ರಕ್ರಿಯೆ ರದ್ದುಪಡಿಸಿ ಹೊರನಡೆದರು.

ಪೂರ್ವ ತಯಾರಿ ಇಲ್ಲದೆ ತರಾತುರಿಯಲ್ಲಿ ಚುನಾವಣೆಗೆ ಅಧಿಸೂಚನೆ ಹೊರಡಿಸಿದ ಶಿಕ್ಷಕರ ಸಂಘದ ಚುನಾವಣೆಗೆ ನೇಮಕಗೊಂಡಿರುವ ಚುನಾವಣಾಧಿಕಾರಿ ಕ್ರಮಕ್ಕೆ ಸ್ಥಳದಲ್ಲಿದ್ದ ಶಿಕ್ಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರಲ್ಲದೇ ಕೆಲವರು ಚುನಾವಣಾ ಪ್ರಕ್ರಿಯೆಗೆ ಧಿಕ್ಕಾರವನ್ನೂ ಕೂಗಿದರು.

ಅವಧಿ ಮುಗಿದರೂ ಮುಂದಿನ ಒಂದು ವರ್ಷದವರೆಗೂ ಹಾಲಿ ಆಡಳಿತ ಮಂಡಳಿಯನ್ನೇ ಮುಂದುವರಿಸುವ ನಿಟ್ಟಿನಲ್ಲಿ ರಾಜ್ಯ ಘಟಕದ ಬೈಲಾ ತಿದ್ದುಪಡಿ ಮಾಡಿತ್ತು. ಅದನ್ನು ಪ್ರಶ್ನಿಸಿ ಕೆಲವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಏಪ್ರೀಲ್ ಒಳಗೆ ಚುನಾವಣೆ ಪ್ರಕ್ರಿಯೆ ನಡೆಸುವಂತೆ ನ್ಯಾಯಾಲಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕಕ್ಕೆ ತಾಕೀತು ಮಾಡಿತ್ತು. ಈ ಕಾರಣಕ್ಕೆ ಅವಸರದಲ್ಲಿ ಸಿದ್ಧತೆಯೇ ಇಲ್ಲದೆ ಚುನಾವಣೆ ನಡೆಸಿದ್ದು ಇಷ್ಟೆಲ್ಲ ಪ್ರಹಸನಕ್ಕೆ ಕಾರಣವಾಗಿದೆ ಎಂದು ಸ್ಥಳದಲ್ಲಿದ್ದ ಶಿಕ್ಷಕರು ಸುದ್ದಿಗಾರರಿಗೆ ವಿವರಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260412-35-1599089839

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.