ಕುಷ್ಟಗಿ: ‘ಬದಲಾಗುತ್ತಿರುವ ಜಾಗತಿಕ ವ್ಯವಸ್ಥೆಗೆ ಅನುಗುಣವಾಗಿ ಮಕ್ಕಳನ್ನು ಸಜ್ಜುಗೊಳಿಸುವ ಅಗತ್ಯವಿದೆ. ಈ ದಿಶೆಯಲ್ಲಿ ಮುನ್ನಡೆಯುವುದಕ್ಕೆ ದ್ವಿಭಾಷೆ ಮಾಧ್ಯಮ ಕಲಿಕೆ ಪೂರಕವಾಗಲಿದೆ’ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಸೋಮಶೇಖರಗೌಡ ಪಾಟೀಲ ಹೇಳಿದರು.

ದ್ವಿಭಾಷಾ ಮಾಧ್ಯಮ ಬೋಧನೆಗೆ ಸಂಬಂಧಿಸಿದಂತೆ ಪಟ್ಟಣದ ವಿದ್ಯಾನಗರ ಶಾಲೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ನಡೆದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ‘ಜಾಗತಿಕ ಸ್ಪರ್ಧೆಗೆ ಮಕ್ಕಳನ್ನು ಸನ್ನದ್ಧಗೊಳಿಸುವ ನಿಟ್ಟಿನಲ್ಲಿ ಶಿಕ್ಷಕರು ದ್ವಿಭಾಷಾ ಬೋಧನೆಗೆ ಸಿದ್ಧಗೊಳ್ಳಬೇಕು’ ಎಂ ದು ಹೇಳಿದರು.

‘ಮಾತೃಭಾಷೆಯ ಜೊತೆಗೆ ಆಂಗ್ಲ ಭಾಷೆಯನ್ನೂ ಕಲಿಸುವ ನಿಟ್ಟಿನಲ್ಲಿ ಪೂರಕ ವಾತಾವರಣ ನಿರ್ಮಿಸಬೇಕು. ತರಗತಿ ಕೊಠಡಿಗಳಿಗೆ ಹೋಗುವ ಮೊದಲು ಶಿಕ್ಷಕರು ಅಂಗ್ಲ ಭಾಷೆಯನ್ನು ಸ್ವತಃ ಕರಗತ ಮಾಡಿಕೊಂಡಿರಬೇಕು. ಭಾಷೆಯ ಮೂಲ ತತ್ವ, ಕೌಶಲಗಳ ಬಗ್ಗೆ ಮಕ್ಕಳಿಗೆ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಹೆಚ್ಚಿನ ಮುತುವರ್ಜಿ ವಹಿಸುವುದು ಅವಶ್ಯ’ ಎಂದು ವಿವರಿಸಿದರು.

ಬಿಆರ್ಸಿ ಕ್ಷೇತ್ರ ಸಮನ್ವಯಾಧಿಕಾರಿ ಎಂ.ಜಗದೀಶಪ್ಪ ಮಾತನಾಡಿ, ‘ಪಠ್ಯಪುಸ್ತಕಗಳು ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಮುದ್ರಣವಾಗಿದ್ದು, ಉತ್ತಮ ಸಿದ್ಧತೆಯೊಂದಿಗೆ ಬೋಧಿಸಬೇಕು ಎಂದು ಸಲಹೆ ನೀಡಿದರು.

ಬಿಆರ್ಪಿ ಜಿ.ಲೋಕೇಶ್, ಸಿಆರ್ಪಿಗಳಾದ ಚಂದಪ್ಪ, ಬಸವರಾಜ ಕುಂಬಳಾವತಿ, ಈರಪ್ಪ ಕರಡಕಲ್, ಶರಣಪ್ಪ ಉಪ್ಪಾರ, ತರಬೇತಿಯ ಸಂಪನ್ಮೂಲ ವ್ಯಕ್ತಿಗಳಾದ ಜೀವನಸಾಬ ವಾಲಿಕಾರ, ಅಮಿನುದ್ದೀನ್ ಮುಲ್ಲಾ, ರಾಜ ಮೊಹಮ್ಮದ್ ಕೊಳೂರು, ಅನ್ನಪೂರ್ಣ ಹಿರೇಮಠ, ಶಿವಪ್ರಿಯ ಹಿರೇಮಠ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260411-35-1343958381

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.