ಕುಷ್ಟಗಿ: ದುಬಾರಿ ಮೊತ್ತದ ಮೊಬೈಲ್ ಕೊಡುಗೆ ರೂಪದಲ್ಲಿ ನೀಡುವಂತೆ ಇಲ್ಲಿಯ ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಬಸಾಪುರ ಮೌಖಿಕ ಸೂಚನೆ ನೀಡಿದ್ದಾರೆ ಎಂದು ಖಾಸಗಿ ಶಾಲೆಯೊಂದರ ಮುಖ್ಯಶಿಕ್ಷಕ ವಾಟ್ಸ್ ಆ್ಯಪ್ ಗ್ರೂಪ್ನಲ್ಲಿ ಹಂಚಿಕೊಂಡಿರುವ ವಿಚಾರ ಶಿಕ್ಷಣ ಇಲಾಖೆಯಲ್ಲಿ ಚರ್ಚೆಗೆ ಕಾರಣವಾಗಿದೆ. ಸಂಬಂಧಿಸಿದವರ ವಿರುದ್ಧ ಕಾನೂನು ಸಮರಕ್ಕೆ ಮುಂದಾಗಿರುವ ಬಿಇಒ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಇಲ್ಲಿಯ ಪೊಲೀಸರಿಗೆ ಶನಿವಾರ ಲಿಖಿತ ದೂರು ನೀಡಿರುವ ಕ್ಷೇತ್ರ ಶಿಕ್ಷಣಾಧಿಕಾರಿ, ‘ತಾವು ಯಾವುದೇ ರೀತಿಯ ಸೂಚನೆ, ಒತ್ತಡ ಹೇರದಿದ್ದರೂ ಮಾಧ್ಯಮಗಳಲ್ಲಿ ಅಪಪ್ರಚಾರ ನಡೆಸಿರುವ ಇಲ್ಲಿಯ ಬುತ್ತಿಬಸವೇಶ್ವರ ಖಾಸಗಿ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ನಾಗರಾಜ ಶೆಟ್ಟರ ಎಂಬುವವರು ಆಧಾರ ರಹಿತವಾಗಿ ಸುಳ್ಳು ಆರೋಪ ಮಾಡಿದ್ದಾರೆ ಎಂದಿದ್ದಾರೆ.

ನಾಗರಾಜ ಶೆಟ್ಟರ ಮತ್ತು ಅವರ ಶಾಲೆಯ ಸಿಬ್ಬಂದಿ ದುರುದ್ದೇಶದ ನಡವಳಿಕೆ ಹೊಂದಿದ್ದಾರೆ. ಬಿಇಒ ಕಚೇರಿಯಿಂದ ತಾವು ಹೊರಗೆ ಹೋಗು ವಾಗ ದಾರಿ ಮಧ್ಯೆ ಗುಂಪಾಗಿ ನಿಂತು ಮಹಿಳಾ ಅಧಿಕಾರಿ ಎಂಬುದನ್ನು ಮರೆತು ಸಮಾಜದಲ್ಲಿ ಅಗೌರವ, ಅಸಭ್ಯವಾಗಿ ವರ್ತಿಸುತ್ತಿದ್ದಾರೆ ಎಂದು ದೂರಿದ್ದಾರೆ. ಶಿಕ್ಷಕರಾದ ಯಮನಪ್ಪ ಚೂರಿ, ನಿಂಗಪ್ಪ ಗುನ್ನಾಳ, ನೀಲನಗೌಡ ಹೊಸಗೌಡ್ರ, ಬೀರಪ್ಪ ಕುರಿ, ವಿಠ್ಠಲ.ಎಂ ಎಂಬುವವರು ದೂರಿಗೆ ಸಾಕ್ಷಿ ಸಹಿ ಮಾಡಿದ್ದಾರೆ.

ಹರಿದಾಡಿದ್ದೇನು?: ಬಿಇಒ ಉಮಾದೇವಿ ಅವರ ಮೊಬೈಲ್ ಇತ್ತೀಚೆಗೆ ಬಿದ್ದು ಹಾಳಾಗಿದೆ. ಹೀಗಾಗಿ ಅಂದಾಜು ₹ 1.30 ಲಕ್ಷ ಮೌಲ್ಯದ ಹೊಸ ಮೊಬೈಲ್ ‘ಉಡುಗೊರೆ’ ನೀಡುವಂತೆ ಬಿಇಒ ಅವರು ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷಗೆ ಮೌಖಿಕ ಸೂಚನೆ ನೀಡಿದ್ದಾರೆ ಎಂದು ತಮಗೆ ಅನುದಾನಿತ ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ಅಧ್ಯಕ್ಷ ತಿಳಿಸಿದ್ದಾರೆ.

ಒಂದು ವೇಳೆ ಹಣ ಸಂಗ್ರಹಣೆಗೆ ಸಹಕರಿಸದ ಶಿಕ್ಷಕರು ಮುಂದಿನ ಆಗುಹೋಗುಗಳಿಗೆ ತಾವೇ ಹೊಣೆಗಾರರಾಗುತ್ತಾರೆ ಎಂದು ನಾಗರಾಜ ಶೆಟ್ಟರ ಎಂಬುವವರು ತಮ್ಮ ಮೊಬೈಲ್ ಮೂಲಕ ಶಾಲೆಯ ವ್ಯಾಟ್ಸ್ ಆ್ಯಪ್ ಗ್ರೂಪ್ನಲ್ಲಿ ಎಚ್ಚರಿಕೆ ಸಂದೇಶದೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ. ಈ ವಿಷಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಬಿಇಒ ನೀಡಿರುವ ದೂರಿಗೆ ಸಂಬಂಧಿಸಿದಂತೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಪಿಎಸ್ಐ ಹನುಮಂತಪ್ಪ ತಳವಾರ, ‘ಬಿಇಒ ಅವರಿಂದ ಅರ್ಜಿ ಸ್ವೀಕೃತವಾಗಿದೆ. ಆದರೆ, ತಕ್ಷಣ ಎಫ್ಐಆರ್ ದಾಖಲಿಸಲು ಬರುವುದಿಲ್ಲ. ಈ ಬಗ್ಗೆ ಪರಿಶೀಲಿಸಬೇಕಾಗುತ್ತದೆ. ಸೂಕ್ತವಾಗಿದ್ದರೆ ಅಗತ್ಯ ಕ್ರಮ ಕೈಗೊಳ್ಳುತ್ತೇವೆ’ ಎಂದು ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260517-35-1969590991

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.