ಕುಷ್ಟಗಿ: ‘ಅನ್ಯದೇಶಗಳಿಗೆ ಹೋಲಿಸಿದರೆ ಭಾರತೀಯ ಸಮಾಜದಲ್ಲಿ ನಮ್ಮ ಕೌಟುಂಬಿಕ ವ್ಯವಸ್ಥೆಯ ಪರಿಕಲ್ಪನೆ ಹಾಸು ಹೊಕ್ಕಾಗಿರುವುದರಿಂದಲೇ ನಮ್ಮ ಸಮಾಜ ಅಷ್ಟೇ ಸದೃಢವಾಗಿರಲು ಸಾಧ್ಯವಾಗಿದೆ’ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಆರ್.ಮಂಜುನಾಥ್ ಹೇಳಿದರು.

ಈ ಹಿಂದೆ ನ್ಯಾಯಾಲಯದ ಕಲಾಪದ ವೇಳೆಯಲ್ಲೇ ನಿಧನರಾದ ವಕೀಲ ನಿಂಗಪ್ಪ ಸುದ್ದಿ ಅವರ ಕುಟುಂಬಕ್ಕೆ ಇಲ್ಲಿಯ ವಕೀಲರು ನೀಡಿದ ಆರ್ಥಿಕ ನೆರವನ್ನು ನಿಂಗಪ್ಪ ಅವರ ಕುಟುಂಬದವರಿಗೆ ಹಸ್ತಾಂತರಿಸಿ ಬುಧವಾರ ಇಲ್ಲಿ ವಕೀಲರ ಸಂಘದ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ವಕೀಲ ಸುದ್ದಿ ಅವರ ಕುಟುಂಬದವರು ತಮ್ಮದೇ ಕುಟುಂಬ ಸದಸ್ಯರು ಎಂದು ಭಾವಿಸಿ ಅವರ ತಾಯಿ, ಪತ್ನಿ ಮತ್ತು ಮಕ್ಕಳ ಭವಿಷ್ಯದ ಶೈಕ್ಷಣಿಕ ಅಗತ್ಯಗಳನ್ನು ಗಮನದಲ್ಲಿರಿಸಿಕೊಂಡು ನೈತಿಕ, ಆರ್ಥಿಕ ಬೆಂಬಲದೊಂದಿಗೆ ಸ್ಪಂದಿಸಿರುವುದು ಅವರ ಕುಟುಂಬದವರಿಗೆ ವಕೀಲರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಹೆಚ್ಚಿಸಿದ್ದಾರೆ’ ಎಂದು ಹೇಳಿದರು.

ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಮಹಾಂತೇಶ ಚೌವಳಗಿ ಮಾತನಾಡಿ, ವಕೀಲರ ಈ ಮಾನವೀಯ ನಡೆ ಇತರೆ ಸಂಘಟನೆಗಳಿಗೂ ಮಾದರಿಯಾಗಲಿದೆ ಎಂದರು.

ಈ ಸಂದರ್ಭದಲ್ಲಿ ಹಾಜರಿದ್ದ ವಕೀಲ ನಿಂಗಪ್ಪ ಸುದ್ದಿ ಅವರ ಪತ್ನಿ ಜ್ಯೋಗಿ ಸುದ್ದಿ ವಕೀಲರ ಸಂಘದ ನೈತಿಕ, ಆರ್ಥಿಕ ಬೆಂಬಲದ ಬಗ್ಗೆ ಕೃತಜ್ಞತೆ ವ್ಯಕ್ತಪಡಿಸಿದರು.

ನೆರವಿನ ವಿವರ ನೀಡಿದ ವಕೀಲ ಶಿವಕುಮಾರ ದೊಡ್ಡಮನಿ, ಎಲ್ಲ ವಕೀಲರು ಸ್ವಯಂ ಪ್ರೇರಣೆಯಿಂದ ₹3 ಲಕ್ಷ ಹಣವನ್ನು ದಿ.ನಿಂಗಪ್ಪ ಸುದ್ದಿ ಅವರ ಇಬ್ಬರು ಮಕ್ಕಳ ಹೆಸರಿನಲ್ಲಿ ಬ್ಯಾಂಕ್ದಲ್ಲಿ ಠೇವಣಿ ಇಡಲಾಗಿದೆ. ಮೃತ ವಕೀಲರ ತಾಯಿಗೂ ₹40 ಸಾವಿರ ಆರ್ಥಿಕ ನೆರವು ನೀಡಲಾಗಿದೆ ಎಂದರು.

ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎಚ್.ಆರ್.ನಾಯಕ, ಬಸವರಾಜ ಇದ್ಲಾಪುರ, ಕೆ.ವಿ.ಆಶ್ರೀತ್ ಮಾತನಾಡಿದರು. ವಕೀಲ ದೊಡ್ಡನಗೌಡ ಗೋತಗಿ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260524-35-2109801656

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.