ಲಕ್ಷ್ಮೇಶ್ವರ: ‘ಅಂಕ ಗಳಿಕೆಗಷ್ಟೇ ಓದು ಸೀಮಿತವಾಗಬಾರದು. ಮಕ್ಕಳು ಓದಿನತ್ತ ಪರಿಪೂರ್ಣವಾಗಿ ಗಮನ ಹರಿಸಬೇಕು’ ಎಂದು ರಾಮಗೇರಿ ಗ್ರಾಮದ ಮುಖಂಡ ಬಸಣ್ಣ ಬೆಟಗೇರಿ ಹೇಳಿದರು.

ಇಲ್ಲಿನ ಚಂಬಣ್ಣ ಬಾಳಿಕಾಯಿ ಅವರ ಮಿಲ್ ಆವರಣದಲ್ಲಿ ಶಶಿಕಿರಣ ಟುಟೋರಿಯಲ್ ವತಿಯಿಂದ ಶುಕ್ರವಾರ ಜರುಗಿದ ಬೇಸಿಗೆ ಶಿಬಿರದ ಸಮಾರೋಪ ಹಾಗೂ ವಸತಿ ಶಾಲೆಗೆ ಆಯ್ಕೆಯಾದ ಮಕ್ಕಳು ಮತ್ತು 10ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಮಕ್ಕಳ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಹಿರಿಯ ನಾಗರಿಕರು ಮತ್ತು ನಿವೃತ್ತ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸಿ.ಆರ್. ಲಕ್ಕುಂಡಿಮಠ ಮಾತನಾಡಿ, ‘ವಿದ್ಯಾರ್ಥಿ ಜೀವನ ಬಹಳ ಮಹತ್ವವಾಗಿದೆ. ಮಕ್ಕಳು ಈ ಸಮಯದಲ್ಲಿ ಓದಿನತ್ತ ಮನಸ್ಸು ಕೇಂದ್ರೀಕರಿಸಬೇಕು’ ಎಂದು ತಿಳಿಸಿದರು.

‘ಶ್ರಮ ವಹಿಸಿದಾಗ ಮಾತ್ರ ಜೀವನದಲ್ಲಿ ಸುಖ ಕಾಣಲು ಸಾಧ್ಯ’ ಎಂದು ಚಂಬಣ್ಣ ಬಾಳಿಕಾಯಿ ಹೇಳಿದರು.

ಶಶಿಕುಮಾರ ಎಚ್.ಬಿ. ಅಧ್ಯಕ್ಷತೆ ವಹಿಸಿದ್ದರು. ರಮೇಶ ಲಮಾಣಿ, ಶಾರವ್ವ ಪರಮೇಶಪ್ಪ ಕಾರಭಾರಿ, ಚೇತನ ಗೌಡ, ಅಜಿತ ಬಾಣದ, ರವಿ ಕೆರೂರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260527-23-564628971

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.