ಲಕ್ಷ್ಮೇಶ್ವರ: ‘ಜೀವನದಲ್ಲಿ ಯಶಸ್ಸು ಗಳಿಸಲು ಗುರುವಿನ ಮಾರ್ಗದರ್ಶನ ಅವಶ್ಯವಾಗಿದೆ’ ಎಂದು ಪಟ್ಟಣದ ಅಂಗಡಿ ಎಂಜಿನಿಯರಿಂಗ್ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಎಸ್.ಎಫ್. ಕೊಡ್ಲಿ ಹೇಳಿದರು.

ಪಟ್ಟಣದ ಪಿಂಗಾರ್ ಫಂಕ್ಷನ್ ಹಾಲ್ನಲ್ಲಿ 1998–99 ನೇ ಸಾಲಿನಲ್ಲಿ ಸಿ.ಪಿ.ಎಡ್ ವಿದ್ಯಾರ್ಥಿಗಳು ಶನಿವಾರ ಹಮ್ಮಿಕೊಂಡಿದ್ದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಶಿಕ್ಷಕರು ಯಾವುದೇ ದುರುದ್ದೇಶ ಇಟ್ಟುಕೊಂಡು ವಿದ್ಯಾರ್ಥಿಗಳನ್ನು ದಂಡಿಸುವುದಿಲ್ಲ. ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು, ತಮ್ಮನ್ನೂ ಮೀರಿಸುವ ಎತ್ತರಕ್ಕೆ ಬೆಳೆದು ಹೆಸರು ಮಾಡಬೇಕೆಂಬ ಸದುದ್ದೇಶ ಹೊಂದಿರುತ್ತಾರೆ. ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಂಡು, ಜೀವನದಲ್ಲಿ ಯಶಸ್ಸು ಸಾಧಿಸಿದಲ್ಲಿ ಹೆಚ್ಚು ಸಂತೋಷ ಪಡುವವರು ಗುರುಗಳು ಹಾಗೂ ತಂದೆ–ತಾಯಿಗಳು’ ಎಂದರು.

ಬಾಪೂಗೌಡ ಪಾಟೀಲ, ಸಕ್ರಪ್ಪ ಹಳ್ಳೂರ, ಶರಣಪ್ಪ ನರೆಗಲ್ಲ, ಬಿ.ಕೆ. ಗಡಿಯಪ್ಪನವರ, ಅಶೋಕ ಸೊರಟೂರ ಮಾತನಾಡಿದರು. ಈ ಸಂದರ್ಭದಲ್ಲಿ ಶಿಕ್ಷಕರನ್ನು ಸನ್ಮಾನಿಸಲಾಯಿತು.

ಚಂದ್ರು ನೇಕಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜಕುಮಾರ ಮುಗಿಸಿ ಹಾಗೂ ಶಿವಕುಮಾರ ಕುರಿ ಅನುಭವ ಹಂಚಿಕೊಂಡರು. ಗೌರಮ್ಮ ತಳವಾರ ಕಾರ್ಯಕ್ರಮ ನಿರ್ವಹಿಸಿದರು. ಎಂ. ಪ್ರಕಾಶ್ ವಂದಿಸಿದರು. ವಿಶ್ವನಾಥ್ ಹೊಸಮನಿ, ಶಂಭು ಕನವಳ್ಳಿ , ಎಂ.ಬಿ.ಪಾಟೀಲ, ಮಹ್ಮದ್ ಅಸ್ಗರ್ ಪಟೇಲ್, ಶಿವಾನಂದ ಮುದಗಲ್ಲ, ಜಗದೇವ ತೇಲಿ, ಫಕ್ಕಿರೇಶ ರಾಮಗೇರಿ, ಹರೀಶ ಲಕ್ಷ್ಮೇಶ್ವರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260419-23-2065651385

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.