ಲಕ್ಷ್ಮೇಶ್ವರ: ಜಿಲ್ಲಾ ಲೋಕ ಶಿಕ್ಷಣ ಸಮಿತಿ ಗದಗ, ಶಾಲಾ ಶಿಕ್ಷಣ ಇಲಾಖೆ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಗದಗ, ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ ಗದಗ, ತಾಲ್ಲೂಕು ಪಂಚಾಯಿತಿ ಸಹಯೋಗದಲ್ಲಿ ಪಟ್ಟಣದ ಪಿಎಂಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ.4ರಲ್ಲಿ ಗುರುವಾರ ನವ ಭಾರತ ಸಾಕ್ಷರತಾ ಕಾರ್ಯಕ್ರಮದ ಸ್ವಯಂ ಸೇವಕ ಬೋಧಕರ ತರಬೇತಿ ಕಾರ್ಯಾಗಾರ ಜರುಗಿತು.

ಬಿಇಒ ಎಚ್.ಎನ್. ನಾಯ್ಕ ಕಾರ್ಯಾಗಾರ ಉದ್ಘಾಟಿಸಿ, ‘ಕಲಿಕಾರ್ಥಿಯ(ಅನಕ್ಷರಸ್ಥರ) ಓದು, ಬರಹ, ಲೆಕ್ಕಾಚಾರ, ಅರಿವು ಮತ್ತು ಕ್ರಿಯಾಶೀಲತೆಯನ್ನು ನೋಡಿಕೊಳ್ಳಲು ಸ್ವಯಂ ಸೇವಕ ಬೋಧಕರ ನೆರವಿನೊಂದಿಗೆ ಕಲಿಕಾರ್ಥಿಗಳೇ ನಿರ್ವಹಿಸುವಂತೆ ಬಾಳಿಗೆ ಬೆಳಕು ಪುಸ್ತಕ ಸಿದ್ಧಪಡಿಸಲಾಗಿದೆ. ಈ ಪ್ರಾಥಮಿಕೆಯನ್ನು ಆಧರಿಸಿ ಅನುಷ್ಠಾನಾಧಿಕಾರಿಗಳಿಗೆ, ಬೋಧಕರಿಗೆ ವಿಶೇಷ ಪರಿಣಿತ ತಂಡವನ್ನು ರಚಿಸಿ ಅವರ ಮೂಲಕ ತರಬೇತಿ ನೀಡಲಾಗುತ್ತಿದೆ’ ಎಂದರು.

‘ವಿದ್ಯಾವಂತ ಸಮುದಾಯ, ಕಲಿಯದವರಿಗೆ ಕಲಿಸುವ ಹೊಣೆ ಹೊತ್ತು ಸಾಕ್ಷರತೆ ಸಾಧಿಸುವ ಜವಾಬ್ದಾರಿ ಸ್ವಯಂ ಸೇವಕ ಬೋಧಕರಿಗೆ ಇದೆ. ಕಾರಣ ತಮ್ಮ ಭಾಗದ ವ್ಯಾಪ್ತಿಯಲ್ಲಿ ಈಗಾಗಲೇ ಗುರುತಿಸಿರುವ 20 ಅನಕ್ಷರಸ್ಥರಿಗೆ, ಅಕ್ಷರ ಜ್ಞಾನ ನೀಡುವ ಮೂಲಕ ಪ್ರಯತ್ನಿಸಬೇಕು’ ಎಂದು ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಬಸವರಾಜ ಯರಗುಪ್ಪಿ ಹೇಳಿದರು.

ಲಕ್ಷ್ಮೇಶ್ವರ ಉತ್ತರ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಉಮೇಶ ನೇಕಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕ್ಷೇತ್ರ ಸಮನ್ವಯಾಧಿಕಾರಿ ಬಿ.ಎಸ್. ಭಜಂತ್ರಿ, ಮುಖ್ಯ ಶಿಕ್ಷಕರಾದ ಬಿ.ಎಮ್. ಕುಂಬಾರ, ಕೆ.ಡಿ. ಕಗ್ಗಲಗೌಡರ, ಕೆ.ಬಿ. ಗೊಜನೂರ, ಎಸ್.ಸಿ. ಹುಲಿಕಂತಿಮಠ, ಎಸ್.ಕೆ. ಚಾಂದ ಖಾನವರ, ಎನ್.ಪಿ. ಪ್ಯಾಟಿಗೌಡರ, ಎನ್.ಎ. ಮುಲ್ಲಾ, ಶ್ರೀನಿವಾಸ ಮತ್ತೂರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260501-23-356954546

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.