ಲಕ್ಷ್ಮೇಶ್ವರ: ‘ಸಾವಿರಾರು ವರ್ಷ ಕಳೆದರೂ ಮಹಾಕವಿ ಪಂಪನಿಗೆ ಸಾವೇ ಇಲ್ಲ. ಆತನ ಕಾವ್ಯದಲ್ಲಿ ಅಷ್ಟೊಂದು ಶಕ್ತಿ ಇದೆ’ ಎಂದು ನಿವೃತ್ತ ಪ್ರಾಧ್ಯಾಪಕ ಶಾಂತಿನಾಥ ದಿಬ್ಬದ ಹೇಳಿದರು.

ಇಲ್ಲಿನ ರಂಭಾಪುರಿ ಜಗದ್ಗುರು ವೀರ ಗಂಗಾಧರ ಸಮುದಾಯ ಭವನದಲ್ಲಿ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ, ಭಾರತೀಯ ಭಾಷಾ ಸಂಸ್ಥೆ, ಉನ್ನತ ಶಿಕ್ಷಣ ಇಲಾಖೆ, ಶಿಕ್ಷಣ ಸಚಿವಾಲಯ, ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ನಡೆದ ‘ಪುಲಿಗೆರೆ ಪರಿಸರದ ಪ್ರಾಚೀನ ಕನ್ನಡ ಸಾಹಿತ್ಯ’ ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಉಪನ್ಯಾಸ ನೀಡಿದರು.

‘ಸಂಸ್ಕೃತದ ಕವಿಯಾಗುವ ಅವಕಾಶವಿದ್ದರೂ ಪುಲಿಗೆರೆ ನಾಡಿನ ಜನರ ಭಾಷೆಯನ್ನೇ ತನ್ನ ಮಹಾಕಾವ್ಯಗಳ ಭಾಷೆಯನ್ನಾಗಿ ಮಾಡಿಕೊಂಡವನು ಪಂಪ. ಪುಲಿಗೆರೆಯ ತಿರುಳ್ಗನ್ನಡದ ಪದಗಳು ಪಂಪನ ಮಹಾಕಾವ್ಯಗಳಲ್ಲಿ ಕಾಣಸಿಗುತ್ತವೆ. ತಿನಿ–ತಿಂಡಿ, ಏವ–ಹ್ಯಾವ, ಕುಮ್ಮು–ಗುಮ್ಮು ಇಂತಹ ವಿಶಿಷ್ಠ ಪದಗಳೂ ಇವೆ’ ಎಂದರು.

ಸಪ್ತಮಿ ಮಂಜುನಾಥ ಗೊರವರ ಸಿತಾರ್ ನುಡಿಸಿದರು. ಸುಮುಖ ಕೃಷ್ಣ ಕುಲಕರ್ಣಿ ತಬಲಾ ಸಾಥ್ ನೀಡಿದರು.

ಎನ್.ಎಂ. ತಳವಾರ, ಪ್ರೊ.ಆರ್.ಎನ್. ಪಾಟೀಲ, ರಾಜಶೇಖರ ಇಚ್ಚಂಗಿ, ಸಿ. ನಾಗಭೂಷಣ, ಈಶ್ವರ ಮೆಡ್ಲೇರಿ, ಅನ್ನಪೂರ್ಣ ಇದ್ದರು.

ಎರಡನೇ ಗೋಷ್ಠಿಯಲ್ಲಿ ಸಿ. ನಾಗಭೂಷಣ ಅವರು ‘ಸುರಂಗ ಕವಿಯ ತ್ರಿಶಷ್ಠಿ ಲಕ್ಷಣ’, ಮೂರನೇ ಗೋಷ್ಠಿಯಲ್ಲಿ ರಾಜಶೇಖರ ಇಚ್ಚಂಗಿ ಅವರು ‘ಆಚಣ್ಣ ಕವಿಯ ವರ್ಧಮಾನ ಪುರಾಣ’, ನಾಲ್ಕನೇ ಗೋಷ್ಠಿಯಲ್ಲಿ ‘ಮಹಿಳಾ ಸಾಹಿತಿ ಲಲಿತಕ್ಕ ಕೆರಿಮನಿ ಪುಲಿಗೆರೆಯ ಸಾಹಿತ್ಯ’ ಕುರಿತು ಉಪನ್ಯಾಸ ನೀಡಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-23-1367121993

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.