ಇಂದಿನ ಸಾಂಪ್ರದಾಯಿಕ ಶಿಕ್ಷಣ ಪದ್ಧತಿಯಲ್ಲಿ ಮಕ್ಕಳು ಪಠ್ಯಪುಸ್ತಕ, ಹೋಮ್ವರ್ಕ್ ಮತ್ತು ಪರೀಕ್ಷೆಗಳಲ್ಲಿ ಕಳೆದು ಹೋಗಿದ್ದಾರೆ. ಅವರು ಅಂಕ ಗಳಿಸುವುದಕ್ಕೆ ಪ್ರಾಮುಖ್ಯತೆ ನೀಡುತ್ತಿದ್ದಾರೆ. ಆದರೆ, ಅದಕ್ಕೆ ವಿರುದ್ಧ ಎಂಬಂತೆ ಹೈದರಾಬಾದ್ನ ಲಕ್ಷ್ವೀರ್ ರಾವ್ ಎಂಬ 8 ವರ್ಷದ ಬಾಲಕ, ಶಾಲೆಗೆ ಹೋಗದೆ, ತಂತ್ರಜ್ಞಾನ ಸಂಬಂಧಿತ ಕಂಪನಿಗಳು, ಫ್ಯಾಕ್ಟರಿಗಳು, ಹ್ಯಾಕತಾನ್ಗಳು ಮತ್ತು ಸ್ಟಾರ್ಟ್ಅಪ್ ಕಂಪನಿಗಳಿಗೆ ಭೇಟಿ ನೀಡುವ ಮೂಲಕ ಪ್ರಾಯೋಗಿಕ ಶಿಕ್ಷಣ ಪಡೆಯುತ್ತಿದ್ದಾನೆ.

ಮಾತ್ರವಲ್ಲ, ಇವರು ಭಾರತದ ಅತ್ಯಂತ ಕಿರಿಯ ಹಾರ್ಡ್ವೇರ್ ಸ್ಟಾರ್ಟ್ಅಪ್ ಸಂಸ್ಥಾಪಕರಲ್ಲಿ ಒಬ್ಬರಾಗಿದ್ದಾರೆ. ಲಕ್ಷ್ವೀರ್ ರಾವ್ (ಪ್ರೀತಿಯಿಂದ ಲಕ್ಷ್ ಎಂದು ಕರೆಸಿಕೊಳ್ಳುವ) ಅವರು ಚಿಕ್ಕ ವಯಸ್ಸಿನಿಂದಲೇ, ಎಲೆಕ್ಟ್ರಾನಿಕ್ ಉಪಕರಣಗಳು ಹೇಗೆ ಕಾರ್ಯ ನಿರ್ವಹಿಸುತ್ತವೆ? ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ಹೊಂದಿದ್ದಾರೆ.

ಉಪಕರಣಗಳನ್ನು ಹೇಗೆ ತಯಾರಿಸಲಾಗುತ್ತದೆ? ಅವುಗಳ ಸಮಸ್ಯೆಗಳನ್ನು ಬಗೆಹರಿಸುವುದು ಹೇಗೆ? ಎಂಬುದು ಸೇರಿದಂತೆ ಅನೇಕ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುತ್ತಿದ್ದಾರೆ. ಶಾಲೆಯಲ್ಲಿನ ಪಠ್ಯದ ಪ್ರಶ್ನೆಗಳಿಗೆ ಉತ್ತರ ನೆನೆಪಿಟ್ಟುಕೊಳ್ಳುವುದನ್ನು ಕಡಿಮೆ ಮಾಡಿ, ವಿಭಿನ್ನ ಶಿಕ್ಷಣದ ಮಾದರಿಯನ್ನು ಅವರು ಅನುಸರಿಸುತ್ತಿದ್ದಾರೆ. ಕುತೂಹಲ, ಅನುಭವ ಮತ್ತು ಅರ್ಥಪೂರ್ಣ ಸಮಸ್ಯೆಳಿಗ ಅವರು ಪರಿಹಾರ ಹುಡುಕಲು ನಿರತರಾಗಿದ್ದಾರೆ.

ಪರಿಶೋಧನೆ, ವೀಕ್ಷಣೆ ಮತ್ತು ವಸ್ತುಗಳನ್ನು ತಯಾರಿಸುವುದು ಲಕ್ಷ್ವೀರ್ ಅವರ ಶಿಕ್ಷಣದ ಭಾಗವಾಗಿವೆ. ಕಾರ್ಖಾನೆ ಭೇಟಿಯೇ ಅವರಿಗೆ ಪಾಠ, ಸ್ಟಾರ್ಟ್ಅಪ್ ಕಚೇರಿಗಳು ತರಗತಿ ಕೊಠಡಿಗಳಾಗಿವೆ. ಪ್ರಯಾಣದ ಸಮಯದಲ್ಲಿ ಕಂಡುಬರುವ ಸಮಸ್ಯೆಗಳಿಗೆ ಉತ್ತರ ಹುಡುಕುವುದು ಅವರ ಪರೀಕ್ಷೆಯಾಗಿದೆ.

ಅವರ ತಂದೆ ಕ್ಯಾಪ್ಟನ್ ವೆಂಕಟ್ ಅವರ ಜೊತೆ ಸೇರಿ ಸುಮಾರು 200ಕ್ಕೂ ಅಧಿಕ ತಂತ್ರಜ್ಞಾನಕ್ಕೆ ಸಂಬಂಧಿಸಿದ ಆವಿಷ್ಕಾರಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಸೆನ್ಸಾರ್ ಆಧಾರಿತ ಉಪಕರಣಗಳು, ಕ್ಯಾಮೆರಾ ಸಿಸ್ಟಮ್ಗಳು, ರೋಬೋಟಿಕ್ಸ್, ಸ್ವಯಂ ಪಾರ್ಕಿಂಗ್ ಕಾರುಗಳು ಸೇರಿದಂತೆ ಇನ್ನೂ ಅನೇಕ ಆವಿಷ್ಕಾರಗಳನ್ನು ಅವರು ಕಂಡುಹಿಡಿದಿದ್ದಾರೆ.

ಇವುಗಳ ಜೊತೆಗೆ PBLClaw ಎಂಬ AI ಏಜೆಂಟ್ ಅನ್ನು ಕೂಡ ಅವರು ಕಂಡುಹಿಡಿದಿದ್ದಾರೆ. ಇದು ಟೆಲಿಗ್ರಾಮ್ ಮೂಲಕ ಸರಳ ಭಾಷೆಯ ಆದೇಶಗಳ ಮೂಲಕ ಹಾರ್ಡ್ವೇರ್ ಸಾಧನಗಳನ್ನು ನಿಯಂತ್ರಿಸುತ್ತದೆ.

ಲಕ್ಷ್ವೀರ್ ಅವರು ಸಾಂಪ್ರದಾಯಿಕ ಶಾಲೆಗೆ ಹೋಗುವ ಬದಲು ಆನ್ಲೈನ್ ಶಿಕ್ಷಣ ಪಡೆದುಕೊಳ್ಳುತ್ತಿದ್ದಾರೆ. ಇದು ಅವರಿಗೆ ಪ್ರಯಾಣ, ಅನ್ವೇಷಣೆ ಮತ್ತು ಸ್ವಯಂ ನಿರ್ದೇಶಿತ ಕಲಿಕೆಗೆ ಸಮಯ ನೀಡುತ್ತದೆ. ಅವರು ಈಗಾಗಲೇ 25ಕ್ಕೂ ಅಧಿಕ ಕಂಪನಿಗಳಿಗೆ ಭೇಟಿ ನೀಡಿದ್ದಾರೆ. ಅವುಗಳಲ್ಲಿ EV ಸ್ಟಾರ್ಟ್ಅಪ್ಗಳು, ಡ್ರೋನ್ ತಯಾರಿಕಾ ಕಂಪನಿಗಳು, ರೋಬೋಟಿಕ್ಸ್ ಸಂಸ್ಥೆಗಳು ಸೇರಿವೆ.

ಮುಂಬೈ, ಪುಣೆ, ಬೆಂಗಳೂರು ನಗರಗಳಿಗೆ ಪ್ರಯಾಣಿಸಿ ಹ್ಯಾಕತಾನ್ಗಳು, ಫ್ಯಾಕ್ಟರಿ ಭೇಟಿ ಮತ್ತು ಸ್ಟಾರ್ಟ್ಅಪ್ ಕಚೇರಿಗಳಲ್ಲಿ ವಯಸ್ಕರೊಂದಿಗೆ ವಿವಿಧ ಮಾಹಿತಿ ಪಡೆದುಕೊಳ್ಳುತ್ತಾ ಮುಂದೆ ಸಾಗುತ್ತಿದ್ದಾರೆ.

ಲಕ್ಷ್ವೀರ್ ಅವರು ಇತರೆ ಮಕ್ಕಳಂತೆ ಶಾಲೆ, ಸ್ನೇಹಿತರು ಮತ್ತು ಆಟಗಳಲ್ಲಿ ಭಾಗವಹಿಸುವದನ್ನು ಇಷ್ಟಪಡುತ್ತಾರೆ. ಆದರೆ, ಅವರ ಕಲಿಕೆಯ ವಿಧಾನವು ವಿಶಿಷ್ಟವಾಗಿದೆ. ಕಲಿಕೆಗೆ ವಯಸ್ಸು ಅಡ್ಡಿ ಮಾಡುವುದಿಲ್ಲ ಎಂಬುದನ್ನು ಅವರು ಸಾಬೀತುಪಡಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.