ಲಕ್ಷ್ಮೇಶ್ವರ: ‘ಕನ್ನಡ ಕೇವಲ ಒಂದು ಭಾಷೆಯಲ್ಲ. ಅದೊಂದು ಕೋಟ್ಯಂತರ ಕನ್ನಡಿಗರ ಹೆಮ್ಮೆಯ ಸಂಕೇತ. ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆಯ ಹಿರಿಮೆಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ಕೆಲವನ್ನು ಪ್ರತಿಯೊಬ್ಬ ಕನ್ನಡಿಗರು ಮಾಡಬೇಕು’ ಎಂದು ಖ್ಯಾತ ವೈದ್ಯ ಡಾ.ಪಿ.ಡಿ. ತೋಟದ ಹೇಳಿದರು.

ಇಲ್ಲಿನ ದಿ.ಯೂನಿಕ್ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಕನ್ನಡ ಭಾಷೆ, ಕನ್ನಡಿಗರ ಅಸ್ಮಿತೆ’ ವಿಷಯದ ಕುರಿತು ಮಾತನಾಡಿದ ಉಪನ್ಯಾಸಕ ರವಿ ನೀರಲಗಿ, ‘ಕನ್ನಡ ಭಾಷೆ ಕನ್ನಡಿಗರ ಪಾಲಿಗೆ ಕೇವಲ ಸಂವಹನ ಮಾಧ್ಯಮವಲ್ಲ. ಅದು ಒಂದು ನಾಡಿನ ಸಂಸ್ಕೃತಿ, ಇತಿಹಾಸದ ತಳಹದಿಯಾಗಿದೆ. ಸುದೀರ್ಘ, ಶ್ರೀಮಂತ ಇತಿಹಾಸ ಹೊಂದಿರುವ ಕನ್ನಡ ಭಾಷೆ ಕನ್ನಡಿಗರನ್ನು ಭಾವನಾತ್ಮಕವಾಗಿ ಒಂದುಗೂಡಿಸುವ ಮಹತ್ವದ ಶಕ್ತಿಯಾಗಿದೆ’ ಎಂದು ತಿಳಿಸಿದರು.

‘ಜಾನಪದ- ಜಾಣರ ಪದ’ ವಿಷಯದ ಕುರಿತು ಮಾತನಾಡಿದ ಶಿಕ್ಷಕ, ಸಾಹಿತಿ ಆರ್.ಎಸ್. ಪಾಟೀಲ, ‘ಆಚಾರ, ವಿಚಾರ, ಸಂಸ್ಕೃತಿ, ಮಾನವೀಯತೆ, ಸಂಬಂಧಗಳ ಮಹತ್ವವನ್ನು ಜಾನಪದ ಸಾಹಿತ್ಯ ಕಲಿಸುತ್ತದೆ’ ಎಂದರು.

ಯೂನಿಕ್ ಶಾಲೆ ಮುಖ್ಯ ಶಿಕ್ಷಕ ಅರವಿಂದ ದೇಶಪಾಂಡೆ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಈಶ್ವರ ಮೆಡ್ಲೇರಿ ಮಾತನಾಡಿದರು. ಈ ವೇಳೆ ದತ್ತಿ ದಾನಿಗಳು ಹಾಗೂ ಉಪನ್ಯಾಸಕರನ್ನು ಸನ್ಮಾನಿಸಲಾಯಿತು. ನಾಗರಾಜ ಮಜ್ಜಿಗುಡ್ಡ ಸ್ವಾಗತಿಸಿದರು. ಈರಣ್ಣ ಗಾಣಿಗೇರ ನಿರೂಪಿಸಿದರು. ವೀರಣ್ಣ ಅಕ್ಕೂರ ವಂದಿಸಿದರು. ಎಸ್.ಬಿ. ಅಣ್ಣಿಗೇರಿ, ಶಶಿಕಾಂತ ಕುಂಬಾರ, ಸಿ.ಎಫ್. ಪಾಟೀಲ, ಎಲ್.ಆರ್. ಮಲಸಮುದ್ರ, ಪ್ರವೀಣ ಕುಂಬಾರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260508-23-773427202

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.