ನಾಗರಾಜ ಗೊರೇಬಾಳ

ಲಿಂಗಸುಗೂರು: 2026-27ನೇ ಶೈಕ್ಷಣಿಕ ವರ್ಷ ಆರಂಭಗೊಳ್ಳುವ ಮುಂಚೆಯೇ ತಾಲ್ಲೂಕಿನ ಶಾಲೆಗಳಿಗೆ ಪಠ್ಯಪುಸ್ತಕ, ಸಮವಸ್ತ್ರಗಳು ಪೂರೈಕೆಯಾಗಿ, ಮಕ್ಕಳ ಸ್ವಾಗತಕ್ಕೆ ಕಾಯುತ್ತಿವೆ.

ಬೇಸಿಗೆ ರಜೆಯಿಂದಾಗಿ ತಾಲ್ಲೂಕಿನ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಮೇ 29ರಂದು ಮತ್ತೆ ಬಾಗಿಲು ತೆರೆಯಲಿವೆ. ಆದರೆ, ಮಕ್ಕಳನ್ನು ಮಾತ್ರ ಜೂ.1ರಂದು ಶಾಲಾ ಪ್ರಾರಂಭೋತ್ಸವದ ಮೂಲಕ ಸಿಹಿ ನೀಡಿ ಶಿಕ್ಷಕರು ಬರಮಾಡಿಕೊಳ್ಳಲಿದ್ದಾರೆ.

ಶಾಲೆಗಳಿಗೆ ಪುಸ್ತಕಗಳು ಪೂರೈಕೆ: ತಾಲ್ಲೂಕಿನ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆ, ಅನುದಾನಿತ ಶಾಲೆಗಳಿಗೆ ಉಚಿತವಾಗಿ ವಿತರಿಸಲು 7,50,359 ಪಠ್ಯ ಪುಸ್ತಕಗಳಿಗೆ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲಾಗಿತ್ತು.

ಈಗಾಗಲೇ ಸರ್ಕಾರದಿಂದ 4,34,256 ಪುಸ್ತಕಗಳು ಪೂರೈಕೆ ಯಾಗಿವೆ. ಅನುದಾನ ರಹಿತ ಶಾಲೆಗಳಿಗೆ ಮಾರಾಟಕ್ಕಾಗಿ 1,16,648 ಪುಸ್ತಕಗಳಿಗೆ ಬೇಡಿಕೆ ಸಲ್ಲಿಸಲಾಗಿತ್ತು. ಅದರಲ್ಲಿ 1,00,244 ಪುಸ್ತಕಗಳನ್ನು ಸರ್ಕಾರ ಪೂರೈಕೆ ಮಾಡಿದೆ. ಶೇ 60ರಷ್ಟು ಪಠ್ಯಪುಸ್ತಕ ಪೂರೈಕೆ ಮಾಡಿದೆ. ಇನ್ನುಳಿದ ಪಠ್ಯಪುಸ್ತಕಗಳು ಪೂರೈಸಬೇಕಾಗಿದೆ.

ಸರ್ಕಾರದಿಂದ ತಾಲ್ಲೂಕಿಗೆ ಪೂರೈಕೆಯಾದ ಪಠ್ಯಪುಸ್ತಕಗಳನ್ನು ಈಗಾಗಲೇ 20 ಕ್ಲಸ್ಟರ್ಗಳಿಗೆ ಪೂರೈಸಲಾಗಿದೆ. ಇನ್ನೂ ಕೆಲವೇ ಕ್ಲಸ್ಟರ್ಗಳಿಗೆ ಪೂರೈಕೆ ಕಾರ್ಯ ನಡೆಯುತ್ತಿದೆ. ತಾಲ್ಲೂಕಿಗೆ ಈಗಾಗಲೇ 5,2,300 ಮಕ್ಕಳಿಗೆ ಒಂದು ಜೊತೆ ಸಮವಸ್ತ್ರ ಪೂರೈಕೆಯಾಗಿದೆ. ಅವುಗಳನ್ನು ಶಾಲೆಗಳಿಗೆ ಸೋಮವಾರದಿಂದ ಹಂಚಿಕೆ ಮಾಡಲಾಗುತ್ತಿದೆ. ಇನ್ನೂ ಜೊತೆ ಸಮವಸ್ತ್ರ ಸರ್ಕಾರದಿಂದ ಪೂರೈಕೆಯಾಗಬೇಕಾಗಿದೆ.

ಶಾಲೆ ಪ್ರಾರಂಭೋತ್ಸವ ದಿನದಂದೇ ಈ ಬಾರಿ ಮಕ್ಕಳಿಗೆ ಸಮವಸ್ತ್ರ ಮತ್ತು ಪಠ್ಯಪುಸ್ತಕಗಳನ್ನು ನೀಡಲು ಶಿಕ್ಷಣ ಇಲಾಖೆ ಸಿದ್ಧತೆ ಮಾಡಿಕೊಂಡಿದೆ. ಪ್ರತಿ ಬಾರಿಯಂತೆ ಸಮಯಕ್ಕೆ ಸರಿಯಾಗಿ ವಿತರಿಸುವ ಪ್ರಯತ್ನ ನಡೆಸಿದೆ. ಇನ್ನೂ ಶೇ 30ರಷ್ಟು ಪಠ್ಯಪುಸ್ತಕ ಹಾಗೂ ಇನ್ನೂ ಒಂದು ಜೊತೆ ಸಮವಸ್ತ್ರ ಶಾಲೆಗಳಿಗೆ ತಲುಪಿಸಿ ಪ್ರಾರಂಭೋತ್ಸವದ ದಿನವೇ ವಿತರಣೆಗೆ ಶಿಕ್ಷಣ ಇಲಾಖೆ ಮುಂದಾಗುತ್ತಿದೆ.

ಶಾಲಾ ಪ್ರಾರಂಭೋತ್ಸವದೊಂದಿಗೆ ಮೊದಲ ದಿನ ವಿದ್ಯಾರ್ಥಿಗಳನ್ನು ಬರಮಾಡಿಕೊಳ್ಳಲು ಮೇ 29ರಂದು ಪ್ರತಿಯೊಂದು ತರಗತಿ ಕೊಠಡಿ, ಹೊರಾಂಗಣ, ಬಿಸಿಯೂಟದ ಕೊಠಡಿ, ಆಟದ ಮೈದಾನ, ಕಾಂಪೌಂಡ್ ಸೇರಿದಂತೆ ಇಡೀ ಶಾಲೆಯನ್ನು ಉತ್ತಮ ರೀತಿಯಲ್ಲಿ ಸ್ವಚ್ಛಗೊಳಿಸಬೇಕು. ತಳಿರು ತೋರಣ, ರಂಗೋಲಿ ಬಿಡಿಸಿ ಸಿದ್ಧತೆ ಮಾಡಿಕೊಳ್ಳಬೇಕು. ಜೂ.1ರಂದು ಶಾಲೆಗೆ ಆಗಮಿಸುವ ಮಕ್ಕಳಿಗೆ ಹೂ, ಸಿಹಿ ನೀಡಿ ಸ್ವಾಗತಿಸಬೇಕು ಎಂದು ಮುಖ್ಯಶಿಕ್ಷಕರಿಗೆ ಶಿಕ್ಷಣ ಇಲಾಖೆ ಸೂಚಿಸಿದೆ.

ಪ್ರತಿ ಬಾರಿ ಶೂ-ಸಾಕ್ಸ್ಗಳನ್ನು ಎಸ್ಎಂಡಿಸಿ ಮೂಲಕ ಖರೀದಿಸಿ, ವಿದ್ಯಾರ್ಥಿಗಳಿಗೆ ಪೂರೈಕೆ ಮಾಡಲಾಗುತ್ತಿತ್ತು. ಆದರೆ, ಈ ವರ್ಷದಿಂದ ಸರ್ಕಾರವೇ ಶೂ ಸಾಕ್ಸ್ಗಳನ್ನು ಪೂರೈಕೆ ಮಾಡಲಾಗುತ್ತಿದೆ. ಶಾಲೆ ಪ್ರಾರಂಭವಾದ ನಂತರ ಪೂರೈಸಲಾಗುತ್ತಿದೆ ಎನ್ನಲಾಗಿದೆ.

ತಾಲ್ಲೂಕಿನ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಮಂಜೂರಾದ 1,860 ಶಿಕ್ಷಕ ಹುದ್ದೆಯಲ್ಲಿ 868 ಶಿಕ್ಷಕ ಹುದ್ದೆಗಳು ಖಾಲಿ ಇವೆ. 2025-26ನೇ ಸಾಲಿನಲ್ಲಿ 670 ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿತ್ತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260527-32-410506815

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.