ಲಿಂಗಸುಗೂರು : ಸ್ಪರ್ಧಾತ್ಮಕ ಜಗತ್ತಿನಲ್ಲಿ ಉನ್ನತ ಸಾಧನೆಗೆ ಗುರಿ ಮತ್ತು ಗುರುವಿನೊಂದಿಗೆ ಪ್ರಯತ್ನವೂ ಬೇಕು. ಪ್ರಯತ್ನವಿಲ್ಲದಿದ್ದರೆ ಗುರಿ-ಗುರು ಎರಡೂ ವ್ಯರ್ಥವಾಗುತ್ತವೆ ಎಂದು ಪಿಐ ಹೊಸಕೇರಪ್ಪ ಹೇಳಿದರು.

ಪಟ್ಟಣದ ಶಾರದಾ ವಿದ್ಯಾಮಂದಿರ ಪಿಯು ಕಾಲೇಜಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶಾರದಾ ಜೀನಿಯಸ್ ಹಂಟ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ನಿಮ್ಮ ಒಳಿತಿಗೆ ಸದಾ ಶ್ರಮಿಸುವ ತಂದೆ-ತಾಯಿ ಮತ್ತು ಗುರುಗಳನ್ನು ಗೌರವಿಸಬೇಕು, ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಅಕಸ್ಮಾತ್ ಫೇಲಾದರೆ ಆತ್ಮಹತ್ಯೆಯಂಥ ಕೆಟ್ಟ ನಿರ್ಣಯಗಳು ತೆಗೆದುಕೊಳ್ಳಬಾರದು. ಧೃತಿಗೆಡದೇ ನಿರಂತರ ಪ್ರಯತ್ನಿಸಿ ಸಾಫಲ್ಯ ಹೊಂದಬಹುದು’ ಎಂದು ಹೇಳಿದರು.

ಸಂಸ್ಥೆಯ ಅಧ್ಯಕ್ಷ ಹನಮಂತಗೌಡ ಪಾಟೀಲ, ಪ್ರಾಚಾರ್ಯ ಮಹೇಶ ತೋಟದ, ಆಡಳಿತಾಧಿಕಾರಿ ರಾಜಾ ವಾಸುದೇವ ನಾಯಕ, ಉಪನ್ಯಾಸಕ ಬಸವರಾಜ ಖೈರವಾಡಗಿ, ದುರ್ಗಾಸಿಂಗ್, ನಿರುಪಾದಿ ಖೈರವಾಡಗಿ ಹಾಗೂ ಇನ್ನಿತರರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260407-32-546697320

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.