ಮಧುಗಿರಿ: ಶಿಕ್ಷಣ, ಸಂಘಟನೆ, ಹೋರಾಟ ಎಂಬ ಪದಗಳ ಜೊತೆಗೆ ಓದು, ತಿಳಿದುಕೊ , ಅರ್ಥೈಸಿಕೊ ಎಂಬ ಮಾತುಗಳನ್ನು ತಿಳಿಸಿಕೊಟ್ಟ ಅಂಬೇಡ್ಕರ್ ಪ್ರಪಂಚದ 60 ಸಂವಿಧಾನಗಳನ್ನು ಅಭ್ಯಸಿಸಿ ಮಹಿಳೆಯರ, ಕಾರ್ಮಿಕರ, ಶೋಷಿತ ವರ್ಗಗಳ ಧ್ವನಿಯಾಗಿರುವ ಕಾನೂನು ರೂಪಿಸಿದ್ದಾರೆ ಎಂದು ರಾಜ್ಯಶಾಸ್ತ್ರ ಪ್ರಾಧ್ಯಾಪಕ ಎಂ.ಎಸ್.ನಾಗರಾಜ್ ಹೇಳಿದರು.

ಮಧುಗಿರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಅಂಬೇಡ್ಕರ್ ಜಯಂತಿಯಲ್ಲಿ ಮಾತನಾಡಿದ ಅವರು, ಭಾರತೀಯ ಸಂವಿಧಾನದ ಜಾರಿಯಲ್ಲಿ ಅಂಬೇಡ್ಕರ್ ಪಾತ್ರ ಮಹತ್ವದ್ದು ಎಂದರು.

ಪ್ರಾಂಶುಪಾಲ ಕೆ.ಎಸ್. ಕುಮಾರ್ ಮಾತನಾಡಿ, ಮಹಾಪುರುಷರು ತಮ್ಮ ಜೀವನದುದ್ದಕ್ಕೂ ಸವೆಸಿದ ದಿನಗಳ ಪ್ರಯಾಣವೇ ಸಮಾಜಕ್ಕೆ ನೀಡಿದ ಅತಿದೊಡ್ಡ ಸಂದೇಶ. ಅಂಬೇಡ್ಕರ್ ಮಹಿಳಾ ಸಬಲೀಕರಣಕ್ಕಾಗಿ ಜೀವನದುದ್ದಕ್ಕೂ ಶ್ರಮಿಸಿದ ಮಹಾನ್ ಮಾನವತಾವಾದಿ ಎಂದರು.

ಇಂಗ್ಲಿಷ್ ಪ್ರಾಧ್ಯಾಪಕ ಶ್ರೀನಿವಾಸಪ್ಪ ಮಾತನಾಡಿದರು. ಮಂಜುನಾಥ್ ಬುಡುಸನಹಳ್ಳಿ, ಪ್ರಾಧ್ಯಾಪಕ ವೇದಲಕ್ಷ್ಮಿ, ರಂಜಿತಾ, ಸಂಜೀವ್ ಮೂರ್ತಿ, ವಿಜಯಲಕ್ಷ್ಮಿ, ದರ್ಶನ್, ಲೀಲಾವತಿ, ಬಿ. ಮಂಜುನಾಥ್, ರಾಮಾಮೂರ್ತಿ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260415-17-1363124021

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.