ಮಧುಗಿರಿ: ‘ಕನ್ನಡ ನಮ್ಮೆಲ್ಲರ ಉಸಿರಾಗಬೇಕು, ಕನ್ನಡದ ನೆಲ, ಜಲ ಕುರಿತು ಬದ್ಧತೆ ಸಾರುವ ಮನೋಭಾವ ಬೆಳೆಸಿಕೊಂಡು ರಾಜ್ಯವನ್ನು ಹಸಿರಾಗಿಸುವ ಮೂಲಕ ನಾಡು ನುಡಿಯ ರಕ್ಷಣೆ ಮಾಡುವ ಎದೆಗಾರಿಕೆ ತೋರಬೇಕು’ ಎಂದು ಸಾಹಿತಿ ವಿ.ಟಿ.ರಾಮಕೃಷ್ಣಯ್ಯ ಹೇಳಿದರು.

ಮಧುಗಿರಿಯ ಕಾರಾಗೃಹದಲ್ಲಿ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಕಸಾಪ ಘಟಕದಿಂದ ನಡೆದ ವಿಶೇಷ ಸಾಹಿತ್ಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.

‘ಮಕ್ಕಳೊಂದಿಗೆ ಕನ್ನಡದಲ್ಲಿ ಮಾತನಾಡಬೇಕು. ಕನ್ನಡ ಕಾರ್ಯಕ್ರಮಗಳಿಗೆ ಮಕ್ಕಳನ್ನು ಕರೆತರಬೇಕು. ಆಗಷ್ಟೇ ನಮ್ಮ ಭಾಷೆ ಮುಂದಿನ ತಲೆಮಾರಿಗೆ ನದಿಯಂತೆ ಸಾಗುತ್ತದೆ. ಆದರೆ ಪರಭಾಷಾ ದ್ವೇಷಿಗಳಲ್ಲ ಎಂಬ ಹಣೆಪಟ್ಟಿ ಹೊತ್ತುಕೊಂಡು, ಅನ್ಯ ಭಾಷಿಕರೊಂದಿಗೆ ಕನ್ನಡ ಬಳಸದೆ ಅವರ ಭಾಷೆಯಲ್ಲಿಯೇ ಮಾತನಾಡುತ್ತಿರುವ ನಾವು ಕನ್ನಡಮ್ಮನಿಗೆ ಮಾಡುತ್ತಿರುವ ದೊಡ್ಡ ದ್ರೋಹ’ ಎಂದರು.

ಸಮ್ಮೇಳನ ಉದ್ಘಾಟಿಸಿದ ದಾಸರಹಳ್ಳಿ ಕಸಾಪ ಘಟಕದ ಅಧ್ಯಕ್ಷ ಕಾಳೇನಹಳ್ಳಿ ಲಿಂಗರಾಜು ಮಾತನಾಡಿ, ಕನ್ನಡ ಕಟ್ಟುವ ಕೆಲಸ ರಾಜ್ಯದ ಮೂಲೆ ಮೂಲೆಯಲ್ಲೂ ನಿರಂತರವಾಗಿ ಸಾಗಬೇಕು. ಅಂತಹ ಒಂದು ವಿಶಿಷ್ಟ ಪ್ರಯತ್ನವೇ ಕಾರಾಗೃಹದಲ್ಲಿ ಆಯೋಜಿಸಿರುವ ಈ ಸಮ್ಮೇಳನ ಎಂದರು.

ಕವಿಗೋಷ್ಠಿ ಅಧ್ಯಕ್ಷತೆ ವಹಿಸಿದ್ದ ಬಿದಲೋಟಿ ರಂಗನಾಥ್, ಕಾವ್ಯಕ್ಕೆ ಮನುಷ್ಯನನ್ನು ಪರಿವರ್ತಿಸುವ ಶಕ್ತಿಯಿದೆ. ವ್ಯವಸ್ಧೆಯ ಲೋಪಗಳನ್ನು ತಿದ್ದುವ ಮಾರ್ಗವಾಗಿ ಬಳಕೆಯಾಗುವುದರ ಜೊತೆಗೆ ಪಶ್ಚಾತಾಪ, ಬದಲಾವಣೆಯ ದಾರಿದೀಪವಾಗಿದೆ. ಕವಿಗಳ ಹಾಗೂ ಓದುಗರ ನೈತಿಕ ಶಕ್ತಿಯಾಗಿ ಕಾವ್ಯ ಕೆಲಸ ಮಾಡುತ್ತದೆ ಎಂದು ಅಭಿಪ್ರಾಯಪಟ್ಟರು.

ಬೆಂ.ನ. ಜಿಲ್ಲಾ ಕಸಾಪ ಅಧ್ಯಕ್ಷ ಪ್ರಕಾಶ್ ಮೂರ್ತಿ, ಕಾರಾಗೃಹ ಪ್ರಭಾರಿ ಅಧೀಕ್ಷಕ ಸದಾಶಿವಯ್ಯ, ಸಾಹಿತಿ ಸಿಡದರಗಲ್ಲು ಶ್ರೀನಿವಾಸ್ ಮಾತನಾಡಿದರು. ಉಷಾ, ದಿವ್ಯ ಭರತನಾಟ್ಯ ಪ್ರದರ್ಶಿಸಿದರು. ಲಿಂಗರಾಜು, ಶಾಂತಕುಮಾರ್, ವೀಣಾ ಶ್ರೀನಿವಾಸ್, ಸ್ನೇಹ, ಸುಮನಾ ಕವನ ವಾಚಿಸಿದರು. ಸಾಹಿತಿ ಮಲನ ಮೂರ್ತಿ, ಪಿ.ಕೆ. ರಂಗಸ್ವಾಮಿ, ಜೈಲು ಸಿಬ್ಬಂದಿ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-17-1882690526

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.