ಮಡಿಕೇರಿ: ಇಲ್ಲಿನ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಅಂತಿಮ ಬಿ.ಕಾಂ ವಿದ್ಯಾರ್ಥಿ ಎಚ್.ಕೆ.ಜೀವನ್ ಅವರು ‘ಸ್ಟೂಡೆಂಟ್ ವೆಂಚರ್ಸ್’ ಎಂಬ ಸ್ಟಾರ್ಟ್ ಅಪ್ ಅನ್ನು ಆರಂಭಿಸಿದ್ದು, ಕಾಲೇಜಿನ ಉಪನ್ಯಾಸ ವೃಂದ ಬೆಂಬಲವಾಗಿ ನಿಂತಿದೆ.

‘ಸ್ಟೂಡೆಂಟ್ ವೆಂಚರ್ಸ್’ ಬ್ಯಾನರ್ನಡಿ ಜೀವನ್ ಅವರ ‘ಚಿಂತನಾ ಧ್ವನಿ– ಒಳಪ್ರಪಂಚಕ್ಕೊಂದು ಕಿರುಹಾದಿ’ ಎಂಬ ವ್ಯಕ್ತಿತ್ವ ವಿಕಸನದ ಪುಸ್ತಕ ಹಾಗೂ ‘ಯಶಧರ’ ಎಂಬ ಕಾದಂಬರಿಯನ್ನು ಇಲ್ಲಿನ ಪತ್ರಿಕಾ ಭವನದಲ್ಲಿ ಗುರುವಾರ ಲೋಕಾರ್ಪಣೆ ಮಾಡಿ ಮಾತನಾಡಿದ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ದೀಕ್ಷಿತಾ ವರ್ಕಾಡಿ, ‘ಈ ಎರಡೂ ಪುಸ್ತಕಗಳನ್ನು ಜೀವನ್ ಅವರ ‘ಸ್ಟೂಡೆಂಟ್ ವೆಂಚರ್ಸ್’ನಡಿ ಹೊರತರಲಾಗಿದೆ. ವಿದ್ಯಾರ್ಥಿಯ ಈ ಪರಿಕಲ್ಪನೆಗೆ ಕಾಲೇಜಿನ ಎಲ್ಲ ಬೋಧಕರು ಬೆಂಬಲಿಸಿದ್ದಾರೆ’ ಎಂದು ಹೇಳಿದರು.

‘ಚಿಂತನಾ ಧ್ವನಿ’ ಪುಸ್ತಕವು ಒಂದು ಬಗೆಯಲ್ಲಿ ಡೈರಿಯ ಹಾಗೆ ಇದೆ. ಆದರೆ, ಅದು ಅನೇಕ ವ್ಯಕ್ತಿತ್ವ ವಿಕಸನದ ಅಂಶಗಳನ್ನು ಒಳಗೊಂಡಿದೆ. ಸಮಯದ ನಿರ್ವಹಣೆ, ಒತ್ತಡವನ್ನು ನಿರ್ವಹಿಸುವ ತಂತ್ರಗಳು, ಕೆಲಸಗಳು ಮುಂದೂಡದೇ ಇರಲು ಮಾಡಬೇಕಾದ ಉಪಾಯಗಳು, ಸ್ವಯಂಶಿಸ್ತು, ಧ್ಯಾನದ ಮೂಲಕ ಅಡ್ಡಿ ಆತಂಕಗಳನ್ನು ನಿವಾರಿಸಿ ಗುರಿಯತ್ತ ತಲುಪುವುದು ಹೀಗೆ ಅನೇಕ ಅಂಶಗಳಿವೆ ಎಂದು ತಿಳಿಸಿದರು.

ಲೇಖಕ ವಿದ್ಯಾರ್ಥಿ ಎಚ್.ಕೆ.ಜೀವನ್ ಮಾತನಾಡಿ, ಈ ಸ್ಟಾರ್ಟ್ ಅಪ್ ಆರಂಭಕ್ಕೆ ಹಣವನ್ನು ಉಪನ್ಯಾಸಕರು, ಹಿತೈಷಿಗಳು, ಸ್ನೇಹಿತರು ಸೇರಿದಂತೆ ವಿವಿಧ ಮೂಲಗಳಿಂದ ಸಂಗ್ರಹಿಸಿರುವೆ. ಸುಮಾರು ₹ 2.15 ಲಕ್ಷದಷ್ಟು ವೆಚ್ಚವಾಗಿದೆ. ಇದೊಂದು ವಿನೂತನ ಸ್ಟಾರ್ಟ್ ಅಪ್ ಆಗಿದ್ದು, ವ್ಯಕ್ತಿತ್ವ ವಿಕಸನವನ್ನು ಪ್ರಧಾನ ಗುರಿಯನ್ನಾಗಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ಮುಂದೆ ಪುಸ್ತಕ ಪ್ರಕಾಶನದ ಜೊತೆಗೆ ವ್ಯಕ್ತಿತ್ವ ವಿಕಸನದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಉದ್ದೇಶ ಹೊಂದಲಾಗಿದೆ ಎಂದರು.

ಜೇಮ್ಸ್ ಕ್ರಿಯರ್ ಅವರ ‘ಅಟಾಮಿಕ್ ಹ್ಯಾಬಿಟ್ಸ್’, ವೆಕ್ಸ್ಕಿಂಗ್ ಅವರ ‘ಗುಡ್ ವೈಬ್ಸ್ ಗುಡ್ ಲೈಫ್’ ಹಾಗೂ ಕಾಲ್ ನ್ಯೂಪೋರ್ಟ್ ಅವರ ‘ಡೀಪ್ ವರ್ಕ್’ ಪುಸ್ತಕಗಳ ಸಾರವನ್ನು ಈ ‘ಚಿಂತನಾ ಧ್ವನಿ’ ಪುಸ್ತಕದಲ್ಲಿ ಅಡಕ ಮಾಡಲಾಗಿದೆ. ಇದು ನಿಜಕ್ಕೂ ವ್ಯಕ್ತಿತ್ವ ವಿಕಸನಕ್ಕೆ ಸಹಾಯ ಮಾಡುತ್ತದೆ ಎಂದು ವಿದ್ಯಾರ್ಥಿ ಜೀವನ್ ತಿಳಿಸಿದರು.

ಸದ್ಯ, ಇದು ಅರುಣ್ ಸ್ಟೋರ್ನಲ್ಲಿ ಹಾಗೂ ಇತರೆ ಅಂಗಡಿಗಳಲ್ಲಿ ಮಾರಾಟಕ್ಕೆ ಲಭ್ಯವಿದೆ. ಮೊದಲ ನೂರು ಪ್ರತಿಗಳಿಗೆ ಶೇ 15ರಷ್ಟು ರಿಯಾಯಿತಿ ನೀಡಲಾಗಿದೆ. ಮುಂದಿನ ಒಂದು ತಿಂಗಳಿನಲ್ಲಿ ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ನಂತಹ ಇ–ಕಾರ್ಮಸ್ ತಾಣಗಳಲ್ಲೂ ಮಾರಾಟಕ್ಕೆ ಸಿಗಲಿದೆ. ಮಾಹಿತಿಗೆ ಮೊ: 8618531472 ಸಂಪರ್ಕಿಸಬಹುದು ಎಂದು ಹೇಳಿದರು.

ಕಾಲೇಜಿನ ಐಕ್ಯೂಎಸಿ ವಿಭಾಗದ ಸಂಚಾಲಕರಾದ ಡಾ.ಅನುಪಮಾ ಸಭಾಪತಿ ಮಾತನಾಡಿ, ‘ವಿದ್ಯಾರ್ಥಿ ಜೀವನ್ ಬಹುಮುಖ ಪ್ರತಿಭೆ. ಆತನ ಪರಿಕಲ್ಪನೆಗೆ ಕಾಲೇಜು ಬೆಂಬಲ ನೀಡಿದೆ’ ಎಂದರು.

ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಟಿ.ಎಂ.ಸುಧಾಕರ್, ನವೀನ್ಕುಮಾರ್, ಉಪನ್ಯಾಸಕಿ ಇ.ಸುಪ್ರಿಯಾ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260515-51-627584754

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.