ಮಡಿಕೇರಿ: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ಮಧ್ಯಾಹ್ನದ ಬಿಸಿಯೂಟ ಆರಂಭವಾಗಿದ್ದು, ವಿದ್ಯಾರ್ಥಿಗಳಲ್ಲಿ ಖುಷಿ ತರಿಸಿದೆ.

ಮಾರ್ಚ್ 11ರಿಂದ ಆರಂಭವಾಗಿರುವ ಈ ಬಿಸಿಯೂಟ ಯೋಜನೆ ನಿರಂತರವಾಗಿ ಮುಂದುವರಿದಿದೆ. ಇದಕ್ಕಾಗಿ ವಿದ್ಯಾರ್ಥಿಗಳಿಂದ ಯಾವುದೇ ಶುಲ್ಕ ಪಡೆಯದೇ ಇರುವುದು ವಿಶೇಷ. ಇದಕ್ಕೆ ತಗುಲುವ ವೆಚ್ಚವನ್ನು ದಾನಿಗಳಿಂದ ಸಂಗ್ರಹಿಸಲಾಗುತ್ತಿದೆ. ಒಟ್ಟು 150 ವಿದ್ಯಾರ್ಥಿಗಳು ಇದರ ಲಾಭ ಪಡೆಯುತ್ತಿದ್ದಾರೆ.

ಈ ಕಾಲೇಜು 2007ರಲ್ಲಿ ಆರಂಭವಾಗಿದ್ದು, ಕಳೆದ ವರ್ಷ ‘ನ್ಯಾಕ್’ನಿಂದ ‘ಬಿ+’ ಗ್ರೇಡ್ ಮಾನ್ಯತೆ ಪಡೆದಿದೆ. ಕಾಲೇಜು ಎಲ್ಲ ಬಗೆಯ ಮೂಲಸೌಕರ್ಯ ಹೊಂದಿದೆ. ಬಿ.ಎ. ಮತ್ತು ಬಿ.ಕಾಂ.ನಲ್ಲಿ ಶೇ 100ರಷ್ಟು ಫಲಿತಾಂಶ ಹಾಗೂ ಬಿಬಿಎನಲ್ಲಿ ಶೇ 98ರಷ್ಟು ಫಲಿತಾಂಶ ಬಂದಿದೆ ಎಂದು ಪ್ರಾಂಶುಪಾಲ ವೆಂಕಟೇಶ ಪ್ರಸನ್ನ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪಠ್ಯ ಶಿಕ್ಷಣ ಮಾತ್ರವಲ್ಲ, ಪಠ್ಯದ ಜೊತೆಗೆ ಜೀವನಕ್ಕೆ ಉಪಯುಕ್ತವಾಗುವಂತಹ ತರಬೇತಿಗಳನ್ನೂ ಇಲ್ಲಿ ವಿದ್ಯಾರ್ಥಿಗಳಿಗೆ ಹೇಳಿಕೊಡಲಾಗುತ್ತಿದೆ. ಟೈಲರಿಂಗ್ ತರಬೇತಿಯನ್ನು 70 ವಿದ್ಯಾರ್ಥಿಗಳು, ಹೋಟಲ್ ಮ್ಯಾನೇಜ್ಮೆಂಟ್ ತರಬೇತಿಯನ್ನು 30 ವಿದ್ಯಾರ್ಥಿಗಳು, ಬ್ಯೂಟಿಷಿಯನ್ ತರಬೇತಿಯನ್ನು 20 ವಿದ್ಯಾರ್ಥಿಗಳು ಪಡೆದುಕೊಳ್ಳುತ್ತಿದ್ದಾರೆ.

ವ್ಯಾಯಾಮ ಶಾಲೆ, ಗ್ರಂಥಾಲಯ, ವಾಚನಾಲಯಗಳು ಕಾಲೇಜಿನಲ್ಲಿವೆ. ಒಟ್ಟು, 10,500ಕ್ಕೂ ಅಧಿಕ ಪುಸ್ತಕಗಳಿವೆ. ಜೊತೆಗೆ, ಎನ್ಎಸ್ಎಸ್ ಘಟಕ, ಸ್ಕೌಟ್ ಮತ್ತು ಗೈಡ್ಸ್ನ ರೇಂಜರ್ಸ್ ಮತ್ತು ರೋವರ್ಸ್ ಘಟಕ ಮಾತ್ರವಲ್ಲ ರೆಡ್ಕ್ರಾಸ್ ಘಟಕವೂ ಕಾಲೇಜಿನಲ್ಲಿ ಇರುವುದು ವಿಶೇಷ.

‘ಸದ್ಯ, ಬಿಎ, ಬಿಕಾಂ ಬಿಬಿಎ ಕೋರ್ಸ್ಗಳು ಇಲ್ಲಿ ಅಧ್ಯಯನಕ್ಕೆ ಲಭ್ಯ. ಒಟ್ಟು 262 ವಿದ್ಯಾರ್ಥಿಗಳು ಇಲ್ಲಿ ಕಲಿಯುತ್ತಿದ್ದಾರೆ. 8 ಮಂದಿ ಕಾಯಂ ಬೋಧಕರು ಸೇರಿ ಒಟ್ಟು 24 ಮಂದಿ ಬೋಧಕರು ಮತ್ತು ಬೋಧಕೇತರ ಸಿಬ್ಬಂದಿ ಇದ್ದಾರೆ. ಸದ್ಯ, ಯಾವುದೇ ಸಿಬ್ಬಂದಿ ಕೊರತೆ ಇಲ್ಲ’ ಎಂದು ವೆಂಕಟೇಶ ಪ್ರಸನ್ನ ಹೇಳುತ್ತಾರೆ.

ಈಗ ಜ್ಯೂನಿಯರ್ ಕಾಲೇಜಿನ ಆವರಣದಲ್ಲಿ ಕಾಲೇಜು ನಡೆಯುತ್ತಿದೆ. ಹೊಸ ಕಟ್ಟಡದ ನಿರ್ಮಾಣದ ಕಾಮಗಾರಿ ಪ್ರಗತಿಯಲ್ಲಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260411-51-552418470

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.