ಮಾಗಡಿ: ವಿದ್ಯಾರ್ಥಿಗಳು ಕೇವಲ ವಚನಗಳನ್ನು ಬಾಯಲ್ಲಿ ಹೇಳಿ, ಜೇಬಿನಲ್ಲಿ ಹಣ ತುಂಬಿಸಿಕೊಳ್ಳುವ ಡಾಂಬಿಕತನವನ್ನು ಬಿಡಬೇಕು. ಸಂವಿಧಾನವೇ ಬದುಕಿನ ಸರ್ವಶ್ರೇಷ್ಠ ಗ್ರಂಥ ಎಂಬುದನ್ನು ಯಾರೂ ಮರೆಯಬಾರದು ಎಂದು ನಟ ಮೂಗ್ ಸುರೇಶ್ ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಮೈತ್ರಿ ಕನ್ನಡ ಸಂಘದ ಸಹಯೋಗದೊಂದಿಗೆ ನಡೆದ 2025-26ನೇ ಸಾಲಿನ ಸಾಂಸ್ಕೃತಿಕ, ಕ್ರೀಡಾ, ಎನ್.ಎಸ್.ಎಸ್, ಯುವ ರೆಡ್ಕ್ರಾಸ್, ರೋವರ್ಸ್ ಮತ್ತು ರೇಂಜರ್ಸ್ ಸೇರಿದಂತೆ ವಿವಿಧ ಚಟುವಟಿಕೆಗಳ ಸಮಾರೋಪ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.

ಸರ್ವರಿಗೆ ಸಮಪಾಲು, ಸಮಬಾಳು ಎಂಬುದನ್ನು ಜೀವನದ ಗುರಿಯಾಗಿಸಿಕೊಳ್ಳಬೇಕು. ಬುದ್ಧ, ಬಸವ, ಬಾಪೂಜಿ, ಅಂಬೇಡ್ಕರ್ ಅವರ ಆದರ್ಶಗಳ ಬೆಳಕಿನಲ್ಲಿ ಸಾಗುವ ಮೂಲಕ ಅಸ್ಪೃಶ್ಯತೆ, ಅಂಧಾನುಕರಣೆ, ಲಿಂಗ ಹಾಗೂ ವರ್ಗ ತಾರತಮ್ಯವನ್ನು ತಿರಸ್ಕರಿಸಬೇಕು. ಜಾತಿ-ಧರ್ಮಗಳ ಆಚರಣೆಗಿಂತ ಸಂವಿಧಾನದಲ್ಲಿ ನಂಬಿಕೆ ಇಟ್ಟು ಕಾನೂನು ಪಾಲಿಸುವ ಒಳ್ಳೆಯ ಮನುಷ್ಯರಾಗಿ ಬದುಕಬೇಕು ಎಂದು ಹೇಳಿದರು.

ಅಂತರರಾಷ್ಟ್ರೀಯ ಕೊಕ್ಕೊ ಆಟಗಾರ್ತಿ ಕುಮಾರಿ ಡಿ., ಸುನಂದಮ್ಮ, ಜೆ. ರಾಜು ಗುಂಡಾಪುರ, ದೈಹಿಕ ಶಿಕ್ಷಣ ನಿರ್ದೇಶಕ ಉಮೇಶ್, ಸುಮ ಹಾಗೂ ಶಿವಪ್ರಸಾದ್ ಮಾತನಾಡಿದರು.

ಅಂತಿಮ ವರ್ಷದ ಬಿ.ಎ, ಬಿ.ಕಾಂ, ಬಿ.ಎಸ್ಸಿ, ಬಿ.ಬಿ.ಎ ವಿದ್ಯಾರ್ಥಿಗಳಿಗಾಗಿಆಯೋಜಿಸಲಾಗಿದ್ದ ಲಿಂಕ್ಡ್ಇನ್ ಲರ್ನಿಂಗ್ ಸಿ.ಎಸ್.ಆರ್ ಕಾರ್ಯಾಗಾರ, ಸ್ಪರ್ಧಾತ್ಮಕ ಪರೀಕ್ಷೆ ಕಾರ್ಯಾಗಾರ, ಎಫ್.ಕೆ.ಸಿ.ಸಿ.ಐ. ವತಿಯಿಂದ ಆಯೋಜಿಸಿದ್ದ ಮಂಥನ್ ಕಾರ್ಯಕ್ರಮ ಹಾಗೂ ಕೃತಕ ಬುದ್ಧಿಮತ್ತೆ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಹಾಗೂ ಕ್ರೀಡೆ, ಸಾಂಸ್ಕೃತಿಕ ಸ್ಪರ್ಧೆ ವಿಜೇತರಿಗೆ ದತ್ತಿನಿಧಿಯಿಂದ ಚೆಕ್ ಮೂಲಕ ಬಹುಮಾನ ವಿತರಿಸಲಾಯಿತು.

ಸಿಡಿಸಿ ಸದಸ್ಯರಾದ ಎಲ್. ನಂಜಯ್ಯ, ಅಬ್ದುಲ್ ರೆಹಮಾನ್, ಅಂಗಡಿ ನಾಗರಾಜು, ಆರ್. ನಾಗೇಶ್, ಕಿರಣ್, ಲಕ್ಷ್ಮೀ ನಾರಾಯಣ ಹಾಗೂ ಚಂದ್ರಶೇಖರ್ ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು.

ಪ್ರಾಂಶುಪಾಲ ರಾಜಣ್ಣ ಡಿ., ಕೆ.ವಿ. ರಮೇಶ್, ಫರಹಾನ ಅಂಜುಮ್, ಪದ್ಮಾಚಿನ್ಮಯಿ, ಕೆಂಚಪ್ಪ, ಪ್ರೊ. ನಾಗರಾಜು, ಪ್ರೊ. ಗಂಗಾಧರ್, ಕಲಾವಿದೆ ಅಹಲ್ಯಾ ಮೂಗ್ ಸುರೇಶ್ ಸೇರಿ ಕಾಲೇಜಿನ ಪ್ರಾಧ್ಯಾಪಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260521-14-254412080

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.