ಮಹಾಲಿಂಗಪುರ: ‘ಆರೋಗ್ಯಕ್ಕಿಂತ ಮಿಗಿಲಾದ ಭಾಗ್ಯ ಮತ್ತೊಂದಿಲ್ಲ. ಆರೋಗ್ಯವಂತ ಮನುಷ್ಯರಿಂದ ಸದೃಢ ಸಮಾಜ ನಿರ್ಮಾಣ ಸಾಧ್ಯ. ದೈಹಿಕ ಅನಾರೋಗ್ಯಕ್ಕೆ ನಮ್ಮ ಮಾನಸಿಕ ಆರೋಗ್ಯ ಅಥವಾ ಮನಸ್ಥಿತಿಯೇ ಕಾರಣ’ ಎಂದು ಬೆಂಗಳೂರಿನ ಋಷಿ ಸಂಸ್ಕೃತಿ ವಿದ್ಯಾ ಕೇಂದ್ರದ ಶಿಕ್ಷಕ ಅರುಣಕುಮಾರ ಗುರೂಜಿ ಹೇಳಿದರು.

ಪಟ್ಟಣದ ಟೊಣಪಿನಾಥ ಸಮುದಾಯ ಭವನದಲ್ಲಿ ಈಚೆಗೆ ಬೆಂಗಳೂರಿನ ಋಷಿ ಸಂಸ್ಕೃತಿ ವಿದ್ಯಾ ಕೇಂದ್ರದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ 10 ದಿನದ ಸಿದ್ಧ ಸಮಾಧಿ ಯೋಗ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

‘ನೈಸರ್ಗಿಕ ಪರಿಪೂರ್ಣ ಆಹಾರ ಸೇವನೆ, ನಿರಂತರ ಧ್ಯಾನ, ಪ್ರಾಣಾಯಾಮ ಮತ್ತು ಶುದ್ಧ ಮನಸ್ಸಿನ ಆರೋಗ್ಯಕರ ಚಿಂತನೆಗಳಿಂದ ನಮ್ಮನ್ನು ನಾವು ಸುಧಾರಿಸಿಕೊಂಡು ಸಮಾಜಕ್ಕೆ ಮಾದರಿಯಾಗೋಣ. ಸ್ವಸ್ಥ ಸಮಾಜದಿಂದ ಸುಭದ್ರ ಮತ್ತು ಸಮೃದ್ಧ ರಾಷ್ಟ್ರ ನಿರ್ಮಾಣ ಸಾಧ್ಯ’ ಎಂದರು.

40ಕ್ಕೂ ಅಧಿಕ ಶಿಬಿರಾರ್ಥಿಗಳು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260330-19-61003060

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.