ಮಹಾಲಿಂಗಪುರ: ‘ವಿದ್ಯಾರ್ಥಿಗಳು ಜೀವನದಲ್ಲಿ ಗುರಿ ಸಾಧಿಸಬೇಕಾದರೆ ಒಂದು ನಿರ್ದಿಷ್ಟವಾದ ಗುರಿ ಇರಬೇಕು. ಗುರಿ ಸಾಧನೆಗೆ ಕಠಿಣ ಪರಿಶ್ರಮ ಹಾಗೂ ಸಮಾಧಾನದಿಂದ ಮುನ್ನಡೆದರೆ ಯಶಸ್ಸು ಸಾಧಿಸಬಹುದು’ ಎಂದು ಬನಹಟ್ಟಿ ನಿವೃತ್ತ ಕನ್ನಡ ಅಧ್ಯಾಪಕ ಎಸ್.ಬಿ.ಮಟೋಳಿ ಹೇಳಿದರು.

ಪಟ್ಟಣದ ಕೆಎಲ್ಇ ಸಂಸ್ಥೆಯ ಎಸ್ಸಿಪಿ ಪದವಿ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡ 39ನೇ ವಾರ್ಷಿಕ ಸಮ್ಮೇಳನ ‘ಆರೋಹಣ-2026’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರಾಚಾರ್ಯ ಎನ್.ಬಿ.ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಆರೋಹಣ ಕಾರ್ಯಕ್ರಮ ಗುರು-ಶಿಷ್ಯ-ಸಹಪಾಠಿಗಳ ನಡುವಿನ ಭಾವನಾತ್ಮಕ ಬಂಧಕ್ಕೆ ಗಂಧ ತೀಡಿದಂತೆ ಭಾಸವಾಯಿತು. ಮುಂದಿನ ಶೈಕ್ಷಣಿಕ ವರ್ಷದಿಂದ 1ರಿಂದ 6ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಕೂಡ ಸನ್ಮಾನ ಮತ್ತು ನಗದು ಬಹುಮಾನ ನೀಡಲಾಗುತ್ತದೆ’ ಎಂದರು.

ಕಾರ್ಯಕ್ರಮದಲ್ಲಿ 13 ಜನ ಕಾಲೇಜು ಸಂಸತ್ತಿನ ಸದಸ್ಯರು, ಶೇ 100ರಷ್ಟು ಅಂಕ ಪಡೆದ 23 ವಿದ್ಯಾರ್ಥಿಗಳು, ಕ್ರೀಡೆಯಲ್ಲಿ ಯುನಿವರ್ಸಿಟಿ ಬ್ಲೂ ಆಗಿ ಆಯ್ಕೆಯಾದ 12 ಕ್ರೀಡಾರ್ಥಿಗಳು, ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ 30 ಪ್ರತಿಭಾವಂತರು ಸೇರಿದಂತೆ ಬರೋಬ್ಬರಿ 115 ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಜತೆಗೆ ₹74 ಸಾವಿರ ನಗದು ಪುರಸ್ಕಾರ ನೀಡಲಾಯಿತು. ಅಂತಿಮ ವರ್ಷದ ವಿದ್ಯಾರ್ಥಿಗಳು ತಮ್ಮ 3 ವರ್ಷದ ವಿದ್ಯಾಭ್ಯಾಸದ ಅನುಭವ ಮತ್ತು ಮಧುರ ನೆನಪು ಹಂಚಿಕೊಂಡರು.

ಸ್ಥಾನಿಕ ಆಡಳಿತ ಮಂಡಳಿ ಸದಸ್ಯ ಅಶೋಕ ಅಂಗಡಿ, ಕೆಎಲ್ಇ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಎಲ್.ಬಿ.ತುಪ್ಪದ, ಪ್ರೌಢಶಾಲೆ ಉಪ ಪ್ರಾಚಾರ್ಯ ಬಿ.ಎನ್.ಅರಕೇರಿ, ಎಸ್.ಡಿ.ಸೋರಗಾಂವಿ, ಜೆ.ಆರ್.ಪಾಟೀಲ, ಎಸ್.ಎ.ಪಾಟೀಲ, ಎಂ.ಬಿ.ಧರಿಗೌಡ, ಪಿ.ಎಸ್.ಹಿಪ್ಪರಗಿ, ಚಂದ್ರಿಕಾ ಇಟ್ನಾಳ, ಟಿ.ಡಿ.ಡಂಗಿ, ಪಿ.ಎಂ.ಮುತ್ನಾಳಿ, ಎಸ್.ಎಸ್.ಕೋಳಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260503-19-1091886010

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.