ಮಹಾಲಿಂಗಪುರ: ವಿದ್ಯಾರ್ಥಿಗಳು ಬರೀ ನೌಕರಿ ಹಿಡಿಯುವ ಜಾಯಮಾನ ಬಿಟ್ಟು ನೌಕರಿ ಕೊಡುವ ಯಜಮಾನ ಆಗಬೇಕು. ಆಗ ಮಾತ್ರ ನಿಮ್ಮ ಜ್ಞಾನ, ಶ್ರಮ, ಸಮಯಕ್ಕೆ ಹೆಚ್ಚು ಪ್ರತಿಫಲ ಪಡೆಯಬಹುದು ಮತ್ತು ದೇಶಕ್ಕೂ ಹೆಚ್ಚಿನದನ್ನು ಕೊಡಬಹುದು’ ಎಂದು ಕೆಎಲ್ಇ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಶಿವಲಿಂಗ ಸಿದ್ನಾಳ ಹೇಳಿದರು.

ಪಟ್ಟಣದ ಕೆಎಲ್ಇ ಸಂಸ್ಥೆಯ ಬಿಸಿಎ ಕಾಲೇಜಿನ ದ್ವಿತೀಯ ಬ್ಯಾಚ್ನ ಅಂತಿಮ ವರ್ಷದ ವಿದ್ಯಾರ್ಥಿಗಳಿಗಾಗಿ ಈಚೆಗೆ ಹಮ್ಮಿಕೊಂಡ ‘ಗ್ರಾಜ್ಯುಯೇಶನ್ ಡೇ’ ಸಮಾರಂಭದಲ್ಲಿ ಮಾತನಾಡಿದರು.

‘ವಿದ್ಯಾರ್ಥಿಗಳು ಬರೀ ಉದ್ಯೋಗಶೀಲರಾಗದೇ ಕ್ರೀಯಾಶೀಲರೂ, ಸೃಜನಶೀಲರೂ ಆಗಿರಬೇಕು. ಹೇಳಿದ ಕೆಲಸ ಮಾತ್ರ ಮಾಡಿದರೆ ಕಾರ್ಮಿಕರಾಗುತ್ತೀರಿ. ಬುದ್ದಿ ಬಳಸಿ ಕೆಲಸ ಮಾಡಿದರೆ ಕುಶಲಕರ್ಮಿಗಳಾಗುತ್ತೀರಿ, ಕೈ, ಬುದ್ದಿ ಮತ್ತು ಹೃದಯ ಬಳಸಿ ಕೆಲಸ ಮಾಡಿದರೆ ಮಾಲೀಕರಾಗುತ್ತೀರಿ’ ಎಂದರು.

ಕಲಿಯುವಾಗಲೇ ಕ್ಯಾಂಪಸ್ ಸಂದರ್ಶನದಲ್ಲಿ ನೌಕರಿಗೆ ಆಯ್ಕೆಯಾದ 2ನೇ ಬ್ಯಾಚ್ನ ಅಂತಿಮ ವರ್ಷದ ಎಲ್ಲಾ 51 ವಿದ್ಯಾರ್ಥಿಗಳನ್ನು ಹಾಗೂ ಬೇರೆ ಬೇರೆ ಕಾಲೇಜುಗಳಲ್ಲಿ ನಡೆದ ಹ್ಯಾಕೋಥಾನ್ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಬಿಸಿಎ ವಿಭಾಗದ ಸಂಯೋಜಕ ಶಿವಾನಂದ ಪಾಟೀಲ, ಆನಂದ ಉರಬಿ, ಗಿರೀಶ ಹಳೆಮನಿ, ವಿನಾಯಕ ಬಡಿಗೇರ, ಸುಮಾ ಕೆ., ಅಕ್ಷತಾ ಎಚ್., ದೀಪಾ ಅಮ್ಮಣಗಿ, ಆರ್.ಕೆ.ಕಂಬಾರ, ಭಾಗ್ಯಶ್ರೀ ಕಂಬಾರ, ಪ್ರಿಯಾಂಕಾ ಪಟ್ಟರ, ಗಾಯತ್ರಿ ತೋಟದ, ಪವಿತ್ರಾ ಗೋಲಪ್ಪನವರ, ನಿಶಾತ್ ನಂದಗಡಕರ, ಭೂಮಿಕಾ ಸುಲಾಕೆ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260508-19-1926082801

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.