ಮಹಾಲಿಂಗಪುರ: ‘ಇತ್ತೀಚಿನ ಶಿಕ್ಷಣದಿಂದ ಮಕ್ಕಳ ಜ್ಞಾನಕೋಶ ಹೆಚ್ಚುತ್ತಿದ್ದರೂ ಭಾವಕೋಶ ಬಡವಾಗುತ್ತಿದೆ. ಶಿಕ್ಷಕರು ವಿವೇಕವಂತರಾದರೆ ಮಕ್ಕಳು ಸಂಸ್ಕಾರವಂತರಾಗುತ್ತಾರೆ’ ಎಂದು ಕೆಎಲ್ಇ ಪ್ರೌಢಶಾಲೆ ವಿಜ್ಞಾನ ಶಿಕ್ಷಕಿ ಸಪ್ನಾ ಅನಿಗೋಳ ಹೇಳಿದರು.

ಪಟ್ಟಣದ ಸ್ವಾಮಿ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೋತ್ಥಾನ ಪರಿಷತ್ ಪ್ರಶಿಕ್ಷಣ ಭಾರತಿ ವತಿಯಿಂದ ಈಚೆಗೆ ಹಮ್ಮಿಕೊಂಡಿದ್ದ ಶಿಕ್ಷಕರ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ರಾಷ್ಟ್ರೋತ್ಥಾನ ಪರಿಷತ್ನ ವಿಭಾಗೀಯ ಸಂಚಾಲಕ ಶ್ರೀನಿವಾಸ ಪಾಟೀಲ ಮಾತನಾಡಿ, ಪಂಚಮುಖಿ ಶಿಕ್ಷಣದ ಮೂಲಕ ಸರ್ವಾಂಗೀಣ ಕಲಿಕಾ ತಂತ್ರಗಳನ್ನು ಶಿಕ್ಷಕರಿಗೆ ತಿಳಿಸಿದರು. ಸಂಪನ್ಮೂಲ ವ್ಯಕ್ತಿ ಡಿ.ವಿ.ಹಿರೇಮಠ, ಉಪನ್ಯಾಸಕ ಶಿವಲಿಂಗ ಸಿದ್ನಾಳ, ಶಿಕ್ಷಕ ನಾರನಗೌಡ ಉತ್ತಂಗಿ ಮಾತನಾಡಿದರು.

ಶಿಕ್ಷಕ ಎಸ್.ಜಿ.ಜುಟನಟ್ಟಿ ಉದ್ಘಾಟಿಸಿದರು. ಶಾಲೆ ಅಧ್ಯಕ್ಷ ರಮೇಶ ಶೆಕ್ಕಿ ಅಧ್ಯಕ್ಷತೆ ವಹಿಸಿದ್ದರು.ಮುಖ್ಯಶಿಕ್ಷಕ ರಾಮಸ್ವಾಮಿ ಕೋಲ್ಕರ, ಬಸವರಾಜ ನಿಂಗನೂರ, ಮಹೇಶ ಕಾಂಬಳೆ, ಶ್ರೀಮಂತ ಶಿರೋಳ, ಎಂ.ಡಿ.ನರಗಟ್ಟಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260515-19-1553937757

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.