ಮಹಾಲಿಂಗಪುರ: ‘ಸಮಾಜದಲ್ಲಿ ಯಾರೂ ಶಾಶ್ವತವಾಗಿ ಮೇಲೆ, ಕೆಳಗೆ ಇರಲ್ಲ. ಇಂದು ಬಿದ್ದವರು ನಾಳೆ ಏಳಬಹುದು. ಆದರೆ ಅವರನ್ನು ಮೇಲೆತ್ತುವ ಕೈಗಳು ನಮ್ಮದಾಗಬೇಕು’ ಎಂದು ರನ್ನಬೆಳಗಲಿಯ ವಿಶ್ವಕರ್ಮ ಸಮಾಜ ಸೇವಾ ಸಂಸ್ಥೆ ಅಧ್ಯಕ್ಷ ಬಸವರಾಜ ಕಂಬಾರ ಹೇಳಿದರು.

ಸಮೀಪದ ರನ್ನಬೆಳಗಲಿಯ ಮೌನೇಶ್ವರ ದೇವಸ್ಥಾನದಲ್ಲಿ ವಿಶ್ವಕರ್ಮ ಸಮಾಜ ಸೇವಾ ಸಂಸ್ಥೆ ವತಿಯಿಂದ ಮಂಗಳವಾರ ಆಯೋಜಿಸಿದ್ದ ಸಮಾರಂಭದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ಲಕ್ಷ್ಮಿ ಬಡಿಗೇರ, ಸಚಿನ ಬಡಿಗೇರ ಅವರನ್ನು ಸನ್ಮಾನಿಸಿ ಮಾತನಾಡಿದರು.

‘ಹೊಟ್ಟೆ ತುಂಬಿಸಿಕೊಳ್ಳಲು ಕಾಯಕ ಬೇಕು, ತಲೆ ತುಂಬಿಸಿಕೊಳ್ಳಲು ಶಿಕ್ಷಣ ಬೇಕು. ಒಂದಿಲ್ಲದೆ ಇನ್ನೊಂದಿಲ್ಲ. ಕಾಯಕದಿಂದ ಬದುಕು, ಶಿಕ್ಷಣದಿಂದ ಬದುಕಿಗೆ ಅರ್ಥ ಸಿಗುತ್ತದೆ’ ಎಂದರು.

ತಮ್ಮಣ್ಣಪ್ಪ ಲೋಹಾರ, ಅಣ್ಣಪ್ಪ ಕಂಬಾರ, ಚನ್ನಪ್ಪ ಬಡಿಗೇರ, ಮಾದೇವ ಸುತಾರ, ಸಂಗಪ್ಪ ಲೋಹಾರ, ಅಣ್ಣಪ್ಪ ಕಂಬಾರ, ಚನ್ನಪ್ಪ ಬಡಿಗೇರ, ಮಾದೇವ ಸುತಾರ, ರಾಮಚಂದ್ರ ಕಂಬಾರ, ಮಹಾಲಿಂಗಪ್ಪ ಬಡಿಗೇರ, ರಾಮಚಂದ್ರ ಸುತಾರ, ಬಸಪ್ಪ ಬಡಿಗೇರ, ಸಿದ್ಧಾರೂಢ ಸುತಾರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260524-19-2129851476

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.